Home News NEET: 2024ರ ನೀಟ್-ಯುಜಿ ಪರೀಕ್ಷೆ ರದ್ದು ?! ಕೇಂದ್ರ ಸರ್ಕಾರ ಹೇಳಿದ್ದೇನು?

NEET: 2024ರ ನೀಟ್-ಯುಜಿ ಪರೀಕ್ಷೆ ರದ್ದು ?! ಕೇಂದ್ರ ಸರ್ಕಾರ ಹೇಳಿದ್ದೇನು?

NEET

Hindu neighbor gifts plot of land

Hindu neighbour gifts land to Muslim journalist

NEET: ದೇಶಾದ್ಯಂತ ಸಂಚಲನ ಸೃಷ್ಟಿಸಿದ ನೀಟ್ ವಿವಾದ ಇನ್ನೂ ಮುಗಿಯದ ಕಥೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಪಾಪಿಗಳು ಆಡುವ ಆಟವನ್ನು ಮಟ್ಟಹಾಕುವವರು ಯಾರೂ ಇಲ್ಲದಾಗಿದ್ದಾರೆ. ಇದೀಗ ನೀಟ್(NEET )ವಿಚಾರವಾಗಿ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು ಈ ಮಧ್ಯೆ 2024ರ ನೀಟ್ ಪರೀಕ್ಷೆಯನ್ನು ರದ್ಧುಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಹಾಗಿದ್ರೆ ನೀಟ್ ಪರೀಕ್ಷೆ ರದ್ಧಾಗುತ್ತಾ? ಈ ಬಗ್ಗೆ ಕೇಂದ್ರ(Central Government)ಏನು ಹೇಳಿತು ಎಂದು ನೋಡೋಣ.

ವಿವಾದಿತ ನೀಟ್-ಯುಜಿ 2024 (NEET -UG 2024)ಪರೀಕ್ಷೆ ರದ್ದುಗೊಳಿಸಬೇಕು ಎಂದು ಅಭ್ಯರ್ಥಿಗಳು, ಕೋಚಿಂಗ್ ಸಂಸ್ಥೆಗಳು ಮತ್ತು NEET-UG ಆಕಾಂಕ್ಷಿಗಳ ಪೋಷಕರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಕೇಂದ್ರ ಅಲ್ಲಗಳೆದಿದೆ. ಹೌದು, ಇದು ಸರಿಯಾದ ನಿರ್ಧಾರವಲ್ಲ. ಪರೀಕ್ಷೆ ರದ್ದು ಮಾಡುವುದು ಬೇಡ. ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಕೇಂದ್ರ ಸರ್ಕಾ ಶುಕ್ರವಾರ ತಿಳಿಸಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ

ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು, ಆಪಾದಿತ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸರ್ಕಾರ ಸಿಬಿಐಗೆ ಸೂಚಿಸಿದೆ. ಅಲ್ಲದೆ ಪ್ಯಾನ್-ಇಂಡಿಯಾ ಪರೀಕ್ಷೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳ ಲಭ್ಯವಿಲ್ಲ. ಹೀಗಾಗಿ ಸಂಪೂರ್ಣ ಪರೀಕ್ಷೆಯನ್ನು ಮತ್ತು ಈಗಾಗಲೇ ಘೋಷಿಸಲಾದ ಫಲಿತಾಂಶವನ್ನು ರದ್ದುಗೊಳಿಸುವುದು ತರ್ಕಬದ್ಧವಲ್ಲ” ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Job Mela: ಉದ್ಯೋಗ ಪಡೆಯಲು ಸುವರ್ಣ ಅವಕಾಶ ನಿಮಗಾಗಿ! ಜುಲೈ 9ರಂದು ಇಲ್ಲಿ ಭೇಟಿ ನೀಡಿ!