Home latest ನವ್ಯಶ್ರೀಯ ಸೆಕ್ಸ್ ಸ್ಕ್ಯಾಂಡಲ್, ರಾಜಕುಮಾರ್ ಗೆ ಕೋರ್ಟು ಬೇಲ್ ನಿರಾಕರಿಸಿದ್ದು ಯಾಕೆ ಗೊತ್ತೇ ?

ನವ್ಯಶ್ರೀಯ ಸೆಕ್ಸ್ ಸ್ಕ್ಯಾಂಡಲ್, ರಾಜಕುಮಾರ್ ಗೆ ಕೋರ್ಟು ಬೇಲ್ ನಿರಾಕರಿಸಿದ್ದು ಯಾಕೆ ಗೊತ್ತೇ ?

Hindu neighbor gifts plot of land

Hindu neighbour gifts land to Muslim journalist

ಬೆಳಗಾವಿ: ಮತ್ತೆ ನವ್ಯಶ್ರೀ ಸುದ್ದಿ ಬಂದಿದೆ. ರಾಜಕೀಯ ವಲಯದಲ್ಲಿಯೂ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾವ್ ಮತ್ತು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರ ಪ್ರಕರಣಕ್ಕೀಗ ಭಾರೀ ಟ್ವಿಸ್ಟ್ ಸಿಕ್ಕಿದೆ. ಟಾಕಳೆ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರಿಗೀಗ ಬಂಧನದ ಭೀತಿ ಉಂಟಾಗಿದೆ. ಅದು ನಿರೀಕ್ಷಿತ ಕೂಡಾ. ಕಾರಣ ಏನಂತ ನಾವು ಹೇಳ್ತೇವೆ ಕೇಳಿ.

ಅವತ್ತು ನವ್ಯಶ್ರೀ ರಾವ್ ಅಂತ ಚನ್ನಪಟ್ಟಣದ ಈ ಹುಡುಗಿ, ಬಹಳಷ್ಟು ರಾಜಕೀಯ ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದ, ತಕ್ಕಮಟ್ಟಿಗೆ ದೊಡ್ಡ ದೊಡ್ಡ ಲೀಡರುಗಳಾದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಜತೆ ಚಾಯ್ ಟೀ ಬಿಸ್ಕತ್ತು ಸವಿಯುವ ಅವಕಾಶ ಪಡೆದಿದ್ದ ಈಕೆಯ ಅದೊಂದು ವೀಡಿಯೋ ಪಬ್ಲಿಕ್ ಆಗಿತ್ತು. ಅದು ಎಷ್ಟರ ಮಟ್ಟಿಗೆ ಕೆಟ್ಟದಾಗಿತ್ತೆನ್ನುವುದು ಅದನ್ನು ನೋಡಿದವರಿಗೆ ಮಾತ್ರ ಗೊತ್ತು. ಒಂದಷ್ಟು ಜನ, ಆಕೆ ಹಿಂದೆ ನರೇಂದ್ರ ಮೋದಿಯನ್ನು ಚಾಯ್ ವಾಲಾ ಎಂದು ದೂರಿದ್ದ ಕಾರಣದಿಂದಲೋ ಏನೋ, ಆಕೆಗೆ ಮೈಮಾರಿಕೊಂಡವಳು ಅಂದಿದ್ದರು. ಪತ್ರಿಕೆಗಳು ಕೂಡಾ ಆಕೆಗೆ ವಿರುದ್ಧವಾಗೇ ಸಣ್ಣ ದಾಟಿಯಲ್ಲಿ ಮಾತಾಡಿದ್ದವು. ಆದರೆ ಬರಬರುತ್ತ, ಓರ್ವ ಹೆಣ್ಣಿನ ಮಾನವನ್ನು ಮೂರಾಬಟ್ಟೆ ಮಾಡಿದ ಆ ದರಿದ್ರ ವಿಡಿಯೋ, ಅದನ್ನು ಮಾಡಿದ ವ್ಯಕ್ತಿ, ಅದನ್ನು ಬಿಡುಗಡೆ ಮಾಡಿದ ವ್ಯಕ್ತಿಯ ಮೇಲೆ ಜನರು ಅಸಮಾಧಾನಗೊಂಡಿದ್ದಾರೆ. ಕಾರಣ ಆ ಟಾಕಳೆ !

ಹನಿಟ್ರ್ಯಾಪ್ ಎಂದೇ ಆರಂಭದಲ್ಲಿ ಬಿಂಬಿತವಾಗಿದ್ದ ಕೇಸು, ಟಾಕಳೆಯೇ ನನ್ನ ಗಂಡ ಎಂದು ನವ್ಯಶ್ರೀ ಸ್ಫೋಟಕ ಹೇಳಿಕೆ ನೀಡುವ ಮೂಲಕ ಈ ಪ್ರಕರಣ ದಿನೇ ದಿನೇ ಕುತೂಹಲದ ತಿರುವು ಪಡೆದಿತ್ತು. ಈ ನಡುವೆ, ನವ್ಯ ಟಾಕಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಅತ್ಯಾಚಾರ, ಅಪಹರಣ, ಗರ್ಭಪಾತ ಮಾಡಿಸಿದ್ದು, ಮೋಸ, ಮಹಿಳೆ ಮೇಲೆ ಹ ಅವಾಚ್ಯ ನಿಂದನೆ, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ತರುವುದು ಮಾತ್ರವಲ್ಲದೆ ಲೈಂಗಿಕ ಪ್ರಚೋದನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿ, ಖಾಸಗಿತನಕ್ಕೆ ಧಕ್ಕೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಟಾಕಳೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಚನ್ನಪಟ್ಟಣ ಮೂಲದ ನವ್ಯಶ್ರೀ ರಾವ್ ವಿರುದ್ಧ ಜುಲೈ 18ರಂದು ರಾಜಕುಮಾರ್ ಟಾಕಳೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ದೂರಿನಲ್ಲಿ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ, ಸುಲಿಗೆ ಬ್ಲಾಕ್‌ಮೇಲ್ ಬಗ್ಗೆ ಉಲ್ಲೇಖಿಸಿದ್ದರು. ” 2020ರಲ್ಲಿ ಬೆಂಗಳೂರಲ್ಲಿ ನನಗೆ ನವ್ಯಶ್ರೀ ಪರಿಚಯವಾದರು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನನಗೆ ಮದ್ವೇ ಆಗಿ ಮೂವರು ಮಕ್ಕಳಿದ್ದಾರೆ ಎಂಬುಗೆ ಆಕೆಗೆ ಗೊತ್ತಿದ್ದರೂ ಪ್ರೀತಿ ಪ್ರೇಮ ಅಂದಳು. ನಮ್ಮಿಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿತ್ತು. ನನ್ನೊಂದಿಗೆ ಚೆನ್ನಾಗಿಯೇ ಇದ್ದಳು. ಇದ್ದಕ್ಕಿದ್ದಂತೆ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿಕೊಂಡು ನವ್ಯಶ್ರೀ ಮತ್ತು ಈಕೆ ಆಪ್ತ ತಿಲಕ್ ಇಬ್ಬರೂ ನನ್ನ ಬಳಿ ಹಣಕ್ಕಾಗಿ ಡಿಮಾಂಡ ಇಟ್ಟರು. 50 ಲಕ್ಷ ರೂ. ಕೊಡಬೇಕು. ಇಲ್ಲವಾದಲ್ಲಿ ವಿಡಿಯೋವನ್ನು ನಿನ್ನ ಹೆಂಡ್ತಿಗೆ ಕಳುಹಿಸುವೆ ಎಂದು ಬೆದರಿಕೆ ಹಾಕಿದ್ದಾರೆ. ಮಾನಸಿಕ ಚಿತ್ರಹಿಂಸೆ ನೀಡಿದ್ದಾರೆ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ದಯವಿಟ್ಟು ನನಗೆ ರಕ್ಷಣೆ ಕೊಡಿ” ಎಂದಿದ್ದ ರಾಜ ಟಾಕಳೆ.
ಇದಾದ ಬಳಿಕ ಜುಲೈ 23ರಂದು ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ಪ್ರತಿ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಟಾಕಳೆ ತಲೆಮರೆಸಿಕೊಂಡಿದ್ದ. ತಮ್ಮನ್ನು ಪೊಲೀಸರು ಬಂಧಿಸುವ ಭೀತಿಯಿಂದ ಅವರು ಬಂಧಿದಂತೆ ಆದೇಶಿಸಲು ಕೋರಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರು. ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಅನಂತ್ ಅವರು ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ. ಈಗ ಬಂಧನಕ್ಕೆ ರಾಜಕುಮಾರ ಯೋಗ್ಯನಾಗಿದ್ದಾನೆ ?! ಅದಕ್ಕೆ ಒಂದು ಬಲವಾದ ಕಾರಣ ಕೂಡಾ ಇದೆ.

ಅವತ್ತು ಆಕೆಯ ಹಸಿ ಹಸಿ ವಿಡಿಯೋ ಬಿತ್ತರವಾಗಿತ್ತಲ್ಲ, ಅದರಲ್ಲಿ ಆಕೆಯ ಬ್ಲೂ ಫಿಲಂ ಗೆ ಏನೇನೂ ಕಮ್ಮಿ ಇಲ್ಲದಂತಹಾ ನಗ್ನ ಅಶ್ಲೀಲ ವಿಡಿಯೋ ದೃಶ್ಯಗಳಿದ್ದವು. ಆದರೆ ಅದರಲ್ಲಿ ಇದ್ದ ಸೆಕ್ಸ್ ಪಾರ್ಟ್ನರ್ ಮಾತ್ರ ಯಾರೆಂದು ಗೊತ್ತಾಗುತ್ತಿರಲಿಲ್ಲ. ಆತನ ಮುಖ ಬಿಡಿ, ಸೊಂಟಕ್ಕಿಂತ ಮೇಲೆ ಕಾಣದಂತೆ ವಿಡಿಯೋ ತೆಗೆಯಲಾಗಿತ್ತು. ಅಥವಾ ಆನಂತರ ಅದನ್ನು ಎಡಿಟ್ ಮಾಡಿ ಆಕೆಯನ್ನು ಮಾತ್ರ ಆ ವಿಡಿಯೋ ದಲ್ಲಿ ತೋರಿಸಲಾಗಿತ್ತು. ಆಕೆ ಬ್ಲಾಕ್ ಮೇಲ್ ಗೆ ಅವರಿಯೊಬ್ಬರ ಖಾಸಗಿ ವಿಡಿಯೋವನ್ನು ಬಳಸಿಕೊಂಡಿದ್ದರೆ, ಅದರಲ್ಲಿ ರಾಜಕುಮಾರನ ಮುಖ ದರ್ಶನ ಕೂಡಾ ಆಗಿರಬೇಕಿತ್ತಲ್ಲವೇ ? ಅದು ವಿಡಿಯೋದಲ್ಲಿ ಆಗಿಲ್ಲ. ಕೇವಲ ಆಕೆಯನ್ನು ಮಾತ್ರ ವಿಡಿಯೋದಲ್ಲಿ ಇಂಚಿಂಚಾಗಿ ಬಿಡಿಸಿ ತೋರಿಸಲಾಗಿದೆ. ಅದರ ಪರಿಣಾಮ ಆಕೆಯ ಮಾನಹಾನಿ ಮಾಡುವ ಉದ್ದೇಶ ಸ್ಪಷ್ಟವಾಗಿ ಕೋರ್ಟಿಗೆ ಗೊತ್ತಾಗಿದೆ. ಆಕೆ ಬ್ಲಾಕ್ ಮೇಲ್ ಮಾಡಿದ್ದರೂ, ಅದನ್ನು ಯಸ್-ನೋ ಅನ್ನಲು ಪೊಲೀಸರಿದ್ದಾರೆ, ಕೋರ್ಟುಗಳಿವೆ. ಅದು ಬಿಟ್ಟು ಕರೆಕ್ಟ್ ಮಾಡಲಾಗದಂತೆ ನವ್ಯಶ್ರೀಯ ಮಾನದ ಮೇಲೆ ಪ್ರಹಾರ ನಡೆಸಲಾಗಿದೆ. ಇದನ್ನೆಲ್ಲಾ ಗಮನಿಸಿದ ಘನ ನ್ಯಾಯಾಲಯ ರಾಜಕುಮಾರ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಜಮೀನ್ ಗೆ ಬಿದ್ದಿದೆ. ಈಗ ಆತನನ್ನು ಬಂಧಿಸಬಹುದಾಗಿದೆ. ಹಾಗಾಗಿ ಆತನ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯ ಆಗಿದೆ. ಪೊಲೀಸರು ಆದಷ್ಟು ಬೇಗ ಟಾಕಳೆಯನ್ನು ಠಾಣೆ ಗೆ ಎಳೆದು ತರಬೇಕು, ನೊಂದ ಹೆಣ್ಣಿಗೆ ಒಂದು ತಕ್ಷಣದ – ಅಟ್ ಲೀಸ್ಟ್ ಸತ್ವನ ಹೇಳುವ ಕೆಲಸ ಆಗಬೇಕು.