

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸದ ಶ್ರೀಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಜ.23 ರಿಂದ ಭಕ್ತ ವರ್ಗದ ಪಾಲ್ಗೊಳ್ಳುವಿಕೆಯೊಂದಿಗೆ ಸಂಭ್ರಮದಿಂದ ನಡೆಯುತ್ತಿದ್ದು, 30ರ ತನಕ ಮುಂದುವರಿಯಲಿದೆ. ಪ್ರವಚನ ಮಾಲಿಕೆಯನ್ನು ನಡ ಸುಮತಿ ಮಾಧವ ಭಟ್ ಆಟಿಕುಕ್ಕೆ ಅವರು ಉದ್ಘಾಟಿಸಿದರು.
ಜ. 23 ರಂದು ನಾವೂರು ಸಿ.ಎ.ಬ್ಯಾಂಕ್‌ನಿಂದ ಮೆರವಣಿಗೆಯಲ್ಲಿ ಚೆಂಡೆ, ಬ್ಯಾಂಡ್ ಹಾಗೂ ಮಹಿಳೆಯರು ಕಲಶ ಹಿಡಿದು ಪೂರ್ಣ ಕುಂಭದ ಭವ್ಯ ಸ್ವಾಗತದ ಮೂಲಕ ಡಾ. ವೀಣಾ ಬನ್ನಂಜೆಯವರನ್ನು ಬರಮಾಡಿಕೊಳ್ಳಲಾಯಿತು. ದೇವಸ್ಥಾನದಲ್ಲಿ ಭಗವದ್ಗೀತೆ ಪಠಣ ಮಾಡಿ, ಶಂಖನಾದ ಮಾಡ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋನಿಯ ಯಶೋವರ್ಮ ವಹಿಸಿದ್ದರು. ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆಯವರ ದಿವ್ಯ ಉಪಸ್ಥಿತಿಯಲ್ಲಿ ಸಂಜೆ 6.30 ರಿಂದ 8;15ರವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆಯುತ್ತಿದೆ.
ಉದ್ಘಾಟನಾ ದಿನದಂದು ಡಾ| ವೀಣಾ ಬನ್ನಂಜೆರವರು ತನ್ನ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯಲ್ಲಿ ಉಪನ್ಯಾಸ ನೀಡಿದರು. ಬಳಿಕ ಕೃಷ್ಣನಿಗೆ ಪ್ರಿಯವಾದ ಬೆಣ್ಣೆಯನ್ನು ಆಡಳಿತ ಮಂಡಳಿಯ ಸದಸ್ಯರಿಗೆ ಹಸ್ತಾಂತರಿಸಿ, ರಂಗ ಪೂಜೆ ನಡೆದ ಬಳಿಕ ಕ್ಷೇತ್ರಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ನೀಡಿದರು.

ವೇದಿಕೆಯಲ್ಲಿ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ, ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ, ಗ್ರಾ. ಪಂ. ಅಧ್ಯಕ್ಷೆ ಸುನಂದ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮಹಿಳಾ ಸಮಿತಿ ಅಧ್ಯಕ್ಷ ಪ್ರಿಯಾ ಲಕ್ಷ್ಮಣ್ ಸಂಪಿಂಜ, ಉಜಿರೆ ವೃಂದ ಪಡ್ವೆಟ್ನಾಯ ಉಜಿರೆ ಮನೋರಮಾ ಭಟ್, ಬೆಳ್ತಂಗಡಿ ಉದ್ಯಮಿ ರಕ್ಷಾ ರಾಗ್ನೇಶ್, ಬೆಳ್ತಂಗಡಿ ಎಎಫ್‌ಐ ಅಧ್ಯಕ್ಷೆ ಡಾ. ಸುಷ್ಮಾ ಡೋಂಗ್ರೆ, ಬೆಳ್ತಂಗಡಿ ಜೆಸಿಐ ಅಧ್ಯಕ್ಷೆ ಆಶಾ ಪ್ರಶಾಂತ್ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಶುಭ, ಮೀನಾ, ರೋಹಿಣಿ ನಿರೂಪಿಸಿದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ. ಸ್ವಾಗತಿಸಿ, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಟ್ರಸ್ಟ್ ಉಪಾಧ್ಯಕ್ಷೆ ತನುಜಾ ಶೇಖರ್ ವಂದಿಸಿದರು.













