Home News ನಾವೂರು: ಡಾ| ವೀಣಾ ಬನ್ನಂಜೆಯವರ ಏಳನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ :...

ನಾವೂರು: ಡಾ| ವೀಣಾ ಬನ್ನಂಜೆಯವರ ಏಳನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ : ಹೇಮಾವತಿ.ವಿ ಹೆಗ್ಗಡೆ ಭೇಟಿ

Hindu neighbor gifts plot of land

Hindu neighbour gifts land to Muslim journalist

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.೨೩ರಂದು ಪ್ರಾರಂಭಗೊಂಡು ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಡಾ| ವೀಣಾ ಬನ್ನಂಜೆ ರವರಿಂದ 7ನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯು ಜ. 29ರಂದು ಜರುಗಿತು.

ಡಾ. ಪ್ರದೀಪ್ ನಾವೂರು ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಕ್ರಮಗಳು ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ಮೂಲಕ ನಡೆಯುತ್ತಿದ್ದು, ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ, ಉಪಾಧ್ಯಕ್ಷ ತನುಜಾ ಶೇಖರ್, ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ, ಕಾರ್ಯದರ್ಶಿ ತಿಮ್ಮಪ್ಪ ಜಿ. ಗೋಳ್ತಾರ, ಕೋಶಾಧಿಕಾರಿ ಬಿ.ಉಮೇಶ್ ಪ್ರಭು ಹಡೀಲು, ಸದಸ್ಯರಾದ ಎ.ಬಿ. ಉಮೇಶ್ ಅತ್ಯಡ್ಕ, ಗಣೇಶ್ ಕೆ. ಕಣಾಲು, ಹರೀಶ್ ಕಾರಿಂಜ ನಾವೂರು, ರವಿರಾಜ ಜೈನ್ ಬಡೆಕಾವುಗುತ್ತು ಶನಿಯಪ್ಪ ನಲ್ಲಿ ಕಿರ್ನಡ್ಕ, ಗಣೇಶ್ ಗೌಡ ನೆಲ್ಲಿನ ಹಾಗೂ ಗ್ರಾನಸ್ಥರು ಸಹಕಾರದೊಂದಿಗೆ ಮಕ್ಕಳು, ಪುರುಷರು ಮತ್ತು ಮಹಿಳೆಯರಿಂದ ದೇವಸ್ಥಾನದ ಸುತ್ತ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಮಾಡಿದರು.

ಬಳಿಕ ಧರ್ಮಸ್ಥಳದ ಹೇಮಾವತಿ. ವಿ ಹೆಗ್ಗಡೆ ಮತ್ತು ಗಣ್ಯರಿಂದ ದೀಪ ಪ್ರಜ್ವಲನೆಗೊಂಡ ಬಳಿಕ ಡಾ| ವೀಣಾ ಬನ್ನಂಜೆರವರು ತನ್ನ ಏಳನೇ ದಿನದ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯಲ್ಲಿ ಉಪನ್ಯಾಸ ನೀಡಿದರು.

ಬಳಿಕ ಬೆಣ್ಣೆಯನ್ನು ಪ್ರಸಾದದ ರೂಪದಲ್ಲಿ ನೀಡಿ, ರಂಗ ಪೂಜೆ ನಡೆಯಿತು. ಕಾರ್ಯಕ್ರಮಕ್ಕೆ ಬಂದ ಗಣ್ಯ ಅಧಿತಿಗಳನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, RSS ಹಿರಿಯ ಮುಂದಾಳು ಕಜಂಪಾಡಿ ಸುಬ್ರಹ್ಮಣ್ಯ ಭಟ್, ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ಚಂದ್ರ ಸೂರ್ಯ ಗುತ್ತು, ಪೂರನ್ ವರ್ಮ, ಬೆನಕ ಆಸ್ಪತ್ರೆಯ ಡಾ. ಗೋಪಾಲಕೃಷ್ಣ, ಉಜಿರೆ ರಬ್ಬರ್ ಸೊಸೈಟಿ ರಾಜು ಶೆಟ್ಟಿ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಟ್ರಸ್ಟ್ ಉಪಾಧ್ಯಕ್ಷ ತನುಜಾ ಶೇಖರ್, ಪ್ರ. ಸಂಚಾಲಕ ಮೋಹನ್ ಬಂಗೇರ ಕಾರಿಂಜ, ದಶಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ಸೂರ್ಯನಾರಾಯಣ ಭಟ್, ಕಾರ್ಯಾಧ್ಯಕ್ಷೆ ಸೋನಿಯಾ ಯಶೋವರ್ಮ, ಶ್ರೀ ಗೋಪಾಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೊರ್ತಾಜೆ, ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ ಕಾಯರ್ದಡಿ, ಕಾರ್ಯದರ್ಶಿ ತಿಮ್ಮಪ್ಪ ಜಿ ಗೋಳ್ತಾರ, ಕೋಶಾಧಿಕಾರಿ ಬಿ ಉಮೇಶ್ ಪ್ರಭು ಹಡೀಲು, ಬೆನಕ ಹಾಸ್ಪಿಟಲ್ ಉಜಿರೆ ಡಾ. ಭಾರತಿ ಗೋಪಾಲಕೃಷ್ಣ, ಒಕ್ಕಲಿಗ ಸಂಘದ ಶ್ರೀನಾಥ್ ಕೆ ಎಂ, ಸದಸ್ಯರಾದ ಎ.ಬಿ ಉಮೇಶ್ ಅತ್ಯಡ್ಕ, ಹರೀಶ್ ಕೆ ಕಾರಿಂಜ, ತನಿಯಪ್ಪ ನ ಕಿರ್ನಡ್ಕ, ಎನ್ ಗಣೇಶ್ ಗೌಡ ನೆಲ್ಲಿಪಲ್ಕೆ, ಪ್ರದೀಪ ಗೌಡ ನಗಾಜೆ, ಗಣೇಶ್ ಗೌಡ ನಾವೂರು, ವಾರ್ಷಿಕ ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು, ದಶಮಾನೋತ್ಸವ ಸಮಿತಿ ಪದಾಧಿಕಾರಿಗಳು, ಬೈಲುವಾರು ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸಮಿತಿಗಳು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ವಾರ್ಷಿಕ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ.ಸ್ವಾಗತಿಸಿ, ವಂದಿಸಿದರು.