

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.೨೩ರಂದು ಪ್ರಾರಂಭಗೊಂಡು ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಡಾ| ವೀಣಾ ಬನ್ನಂಜೆ ರವರಿಂದ ಐದನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯು ಜ.27 ರಂದು ಜರುಗಿತು.
ಡಾ. ಪ್ರದೀಪ್ ನಾವೂರು ಅವರ ಮಾರ್ಗದರ್ಶನದಲ್ಲಿ ಮಕ್ಕಳು, ಪುರುಷರು ಮತ್ತು ಮಹಿಳೆಯರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣವು ನಡೆಯಿತು. ಗಣ್ಯರಿಂದ ದೀಪ ಪ್ರಜ್ವಲನೆಗೊಂಡ ಬಳಿಕ ಡಾ| ವೀಣಾ ಬನ್ನಂಜೆರವರು ತನ್ನ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯಲ್ಲಿ ಉಪನ್ಯಾಸ ನೀಡಿದರು.
ಬಳಿಕ ಕೃಷ್ಣನಿಗೆ ಪ್ರಿಯವಾದ ಬೆಣ್ಣೆಯನ್ನು ವೇದಾವತಿ, ರಜನಿ ತನಿಯಪ್ಪ, ಲತಾ ಜನಾರ್ಧನ, ಶಾಮಲಾ ನಾರಾಯಣ, ಸುನಿತಾ ದಿನೇಶ್, ವೇದಾವತಿ ಸಂತೋಷ್, ಇವರ ಕೈಗೆ ಹಸ್ತಾಂತರಿಸಿದರು. ರಂಗ ಪೂಜೆ ನಡೆದ ಬಳಿಕ ಕ್ಷೇತ್ರಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ನೀಡಿದರು. ವಾರ್ಷಿಕ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ.ಸ್ವಾಗತಿಸಿ, ವಂದಿಸಿದರು. ನಂತರ ಶ್ರೀ ದೇವರಿಗೆ ರಂಗ ಪೂಜೆ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು.
ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಸೌಮ್ಯ ಲತಾ ಜಯಾನಂದ ಗೌಡ ಗುರಿಪಳ್ಳ, ಆರ್ ಟಿ ಓ ಅಧಿಕಾರಿ ಚಾರನ್, ಬೆಳ್ತಂಗಡಿ ಗುರುದೇವ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್, ಟ್ರಸ್ಟ್ ಉಪಾಧ್ಯಕ್ಷ ತನುಜಾ ಶೇಖರ್, ಪ್ರ. ಸಂಚಾಲಕ ಮೋಹನ್ ಬಂಗೇರ ಕಾರಿಂಜ, ಸುದ್ದಿ ಬಿಡುಗಡೆ ವರದಿಗಾರರಾದ ನಿಶಾನ್ ಬಂಗೇರ, ಸುವಿರ್ ಜೈನ್, ಆರ್ಥಿಕ ಸಾಕ್ಷರತೆ ಇಲಾಖೆ ಅಧಿಕಾರಿ ಉಷಾ, ದಶಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ಸೂರ್ಯನಾರಾಯಣ ಭಟ್, ಕಾರ್ಯಾಧ್ಯಕ್ಷ ಸೋನಿಯಾ ಯಶೋವರ್ಮ, ಶ್ರೀ ಗೋಪಾಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೊರ್ತಾಜೆ, ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ ಕಾಯರ್ದಡಿ, ಕಾರ್ಯದರ್ಶಿ ತಿಮ್ಮಪ್ಪ ಜಿ ಗೋಳ್ತಾರ, ಕೋಶಾಧಿಕಾರಿ ಬಿ ಉಮೇಶ್ ಪ್ರಭು ಹಡೀಲು, ಬೆನಕ ಹಾಸ್ಪಿಟಲ್ ಉಜಿರೆ ಡಾ. ಭಾರತಿ ಗೋಪಾಲಕೃಷ್ಣ, ಒಕ್ಕಲಿಗ ಸಂಘದ ಶ್ರೀನಾಥ್ ಕೆ ಎಂ, ಸದಸ್ಯರಾದ ಎ.ಬಿ ಉಮೇಶ್ ಅತ್ಯಡ್ಕ, ಹರೀಶ್ ಕೆ ಕಾರಿಂಜ, ತನಿಯಪ್ಪ ನಲ್ಕೆ ಕಿರ್ನಡ್ಕ, ಎನ್ ಗಣೇಶ್ ಗೌಡ ನೆಲ್ಲಿಪಲ್ಕೆ, ಪ್ರದೀಪ ಗೌಡ ನಗಾಜೆ, ಗಣೇಶ್ ಗೌಡ ನಾವೂರು, ವಾರ್ಷಿಕ ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು, ದಶಮಾನೋತ್ಸವ ಸಮಿತಿ ಪದಾಧಿಕಾರಿಗಳು, ಬೈಲುವಾರು ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸಮಿತಿಗಳು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.













