Home News UP News: ಸತ್ತ ತಂದೆ 20 ವರ್ಷಗಳ ನಂತರ ಕನಸಿನಲ್ಲಿ ಬಂದು ಸಮಾಧಿ ಸರಿ ಮಾಡಿಸಿ...

UP News: ಸತ್ತ ತಂದೆ 20 ವರ್ಷಗಳ ನಂತರ ಕನಸಿನಲ್ಲಿ ಬಂದು ಸಮಾಧಿ ಸರಿ ಮಾಡಿಸಿ ಅಂದ! ಸಮಾಧಿ ಅಗೆದಾಗ ಆಶ್ಚರ್ಯ ಪಟ್ಟ ಕುಟುಂಬಸ್ಥರು! ಅಷ್ಟಕ್ಕೂ ಅಲ್ಲಿ ಕಂಡಿದ್ದೇನು?

UP News

Hindu neighbor gifts plot of land

Hindu neighbour gifts land to Muslim journalist

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 20 ವರ್ಷಗಳ ಹಿಂದೆ ಸಮಾಧಿಯಾದ ಮೌಲಾನಾ ಅವರು ತಮ್ಮ ಮಗನ ಕನಸಿನಲ್ಲಿ ಕಾಣಿಸಿಕೊಂಡು ಸಮಾಧಿಯನ್ನು ಸರಿಪಡಿಸುವಂತೆ ಹೇಳಿದ್ದಾರೆ. ಇದರ ನಂತರ, ಮಗ ತನ್ನ ತಂದೆಯ ಸಮಾಧಿಯನ್ನು ಅಗೆದು ನೋಡಿದಾಗ, ಸಮಾಧಿಯೊಳಗೆ ತನ್ನ ತಂದೆಯ ಮೃತ ದೇಹವನ್ನು ನೋಡಿ ಆಶ್ಚರ್ಯಚಕಿತನಾಗಿರುವ ಘಟನೆಯೊಂದು ನಡೆದಿದೆ.

ಇಪ್ಪತ್ತು ವರ್ಷಗಳ ನಂತರವೂ ಸಮಾಧಿಯಲ್ಲಿ ಹೂಳಲ್ಪಟ್ಟ ತನ್ನ ತಂದೆಯ ದೇಹವು ಈಗಲೂ ಅದೇ ರೀತಿಯಲ್ಲಿ ಇತ್ತು. ಈ ಬಗ್ಗೆ ಸುತ್ತಮುತ್ತಲಿನ ಜನರಿಗೆ ಸುದ್ದಿ ಹರಡಿದ್ದು, ಕೂಡಲೇ ಈ ದೃಶ್ಯ ನೋಡಲು ಸ್ಮಶಾನಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ಬಂದಿದ್ದಾರೆ.

ಈ ಅಚ್ಚರಿಯ ಪ್ರಕರಣ ಸಿರತ್ತು ತಹಸಿಲ್‌ನ ದಾರಾನಗರ ನಗರ ಪಂಚಾಯತ್‌ನಿಂದ ಬಂದಿದೆ. ಇಲ್ಲಿ ನೆಲೆಸಿರುವ ಅಖ್ತರ್ ಸುಭಾನಿ ಅವರು ತಮ್ಮ ತಂದೆ ಮೌಲಾನಾ ಅನ್ಸರ್ ಅಹ್ಮದ್ ಅವರು 2003ರಲ್ಲಿ ಮೃತಪಟ್ಟಿದ್ದರು. ನಂತರ ಅವರನ್ನು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಆದರೆ ಇಪ್ಪತ್ತು ವರ್ಷಗಳ ನಂತರ ಕನಸಿನಲ್ಲಿ ಬಂದ ತಂದೆ ತನ್ನ ಸಮಾಧಿ ದುರಸ್ತಿ ಮಾಡಲು ಹೇಳಿದ್ದು, ನಿದ್ದೆಯಿಂದ ಎದ್ದ ಮಗ ಅಖ್ತರ್‌ ತನ್ನ ಮನೆಯವರಿಗೆ ಕನಸಿನ ಬಗ್ಗೆ ಹೇಳಿದ್ದಾರೆ. ಕುಟುಂಬಸ್ಥರು ಸ್ಮಶಾನಕ್ಕೆ ಹೋಗಿ ನೋಡಿದಾಗ ಅವರ ತಂದೆಯ ಸಮಾಧಿ ಗುಹೆ ಬಿದ್ದು ಶಿಥಿಲಗೊಂಡಿರುವುದು ಕಂಡು ಬಂಧಿದೆ. ಸಮಾಧಿಯನ್ನು ಅಗೆದು ಅದನ್ನು ಪುನಃಸ್ಥಾಪಿಸಲು ಅವರು ಬರೇಲ್ವಿ ಸಮುದಾಯದ ಮೌಲಾನಾರಿಂದ ಮಾಹಿತಿ ಪಡೆದಿದ್ದು, ಅನುಮತಿ ಕೂಡಾ ನೀಡಿದ್ದಾರೆ.

ನಂತರ ಕುಟುಂಬದವರು, ಗ್ರಾಮಸ್ಥರು ಸ್ಮಶಾನಕ್ಕೆ ತೆರಳಿ ಸಮಾಧಿ ಅಗೆಯಲು ಪ್ರಾರಂಭ ಮಾಡಿದರು. ಸಮಾಧಿಯನ್ನು ಅಗೆಯುವಾಗ ಅಲ್ಲಿದ್ದವರೆಲ್ಲ ಬೆರಗಾಗಿದ್ದಾರೆ. ಮೌಲಾನಾ ಅನ್ಸಾರ್‌ ಸುಭಾನಿಯವರ ಅಂತ್ಯಂಕ್ರಿಯೆಯ ಸಮಯದಲ್ಲಿ ಇದ್ದಂತೆ ಸಂಪೂರ್ಣ ಸುರಕ್ಷಿತವಾಗಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಕೂಡಲೇ ಸಮಾಧಿ ಸ್ವಚ್ಛಗೊಳಿಸಿ ಮತ್ತೆ ಮೌಲಾನಾ ಅನ್ಸಾರ್‌ ಅವರ ಪಾರ್ಥೀವ ಶರೀರವನ್ನು ಅಂತ್ಯಕ್ರಿಯೆ ಮಾಡಲಾಗಿದೆ.
ವರದಿ ಪ್ರಕಾರ ಸಮಾಧಿಯಲ್ಲಿ ಕೆಲವು ದಿನಗಳ ನಂತರ ದೇಹವು ಕರಗಲು ಪ್ರಾರಂಭಿಸುತ್ತದೆ. ಆದರೆ ಮೌಲಾನಾ ಅನ್ಸಾರ್ ಅವರ ಮೃತ ದೇಹ 20 ವರ್ಷಗಳ ನಂತರವೂ ಹಾಗೇ ಉಳಿದಿರುವುದು ಅಚ್ಚರಿ ಮೂಡಿಸಿದೆ.

 

ಇದನ್ನು ಓದಿ: Crime News: ಹುಬ್ಬಳ್ಳಿಯಲ್ಲಿದ್ದಾನೆ ವಿಚಿತ್ರವಾದ ಸಲಿಂಗಕಾಮಿ – ಮುಗ್ಧ ಮಕ್ಕಳೇ ಇವನ ಟಾರ್ಗೆಟ್