Home News NASA: ಮತ್ತೆ ಸುನಿತಾ ವಿಲಿಯಮ್ಸ್ ಭೂಮಿಗಿಳಿಯುವ ದಿನಾಂಕ ಘೋಷಿಸಿದ ನಾಸಾ

NASA: ಮತ್ತೆ ಸುನಿತಾ ವಿಲಿಯಮ್ಸ್ ಭೂಮಿಗಿಳಿಯುವ ದಿನಾಂಕ ಘೋಷಿಸಿದ ನಾಸಾ

Hindu neighbor gifts plot of land

Hindu neighbour gifts land to Muslim journalist

NASA: ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕಳೆದ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ. 8 ದಿನಗಳ ಗಗನಯಾನಕ್ಕೆ ಹೋಗಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ಕಾರಣಗಳಿಂದಾಗಿ ಮರಳಿ ಭೂಮಿಗೆ ಬರಲಾಗಿಲ್ಲ. ಕೆಲವು ದಿನಗಳ ಹಿಂದಷ್ಟೇ ನಾಸಾ ಸುನಿತ ವಿಲಿಯಮ್ಸ್ ಅವರನ್ನು ಭೂಮಿಗೆ ಮರಳಿ ಕರೆತರುವ ದಿನಾಂಕವನ್ನು ಘೋಷಿಸಿ ತಾಂತ್ರಿಕ ಕಾರಣಂತರಗಳಿಂದ ಮತ್ತೆ ಅದನ್ನು ಮುಂದೂಡಿತ್ತು.

ಅದರೀಗ ನಾಸಾ ಮತ್ತೆ ಗುಡ್ ನ್ಯೂಸ್ ನೀಡಿದ್ದು, ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಅವರ ಸಹಗಗನಯಾತ್ರಿ ಬುಚ್ ವಿಲ್ಮೋರ್ (Butch Wilmore) ಅವರು ಇದೇ ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (SpaceX Plan Crew-10 Mission) ವಾಪಸ್ ಭೂಮಿಗೆ ಬರುವುದು ಖಚಿತವಾಗಿದೆ ಎಎಂದು ಹೇಳಿದೆ.

ಬಾಹ್ಯಾಕಾಶದಿಂದ ಹೊರಡುವುದು, ಭೂಮಿಗೆ ಇಳಿಯುವುದು ಯಾವಾಗ?

ಸುನೀತ್ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ 19 ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಲಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಎಲ್ಲವೂ ಸರಿಯಾಗಿ ನಡೆದರೆ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್‌ನಲ್ಲಿಯೇ ಭೂಮಿಯ ಮೇಲೆ ಇರುತ್ತಾರೆ. ಹವಾಮಾನ ಅನುಕೂಲಕರವಾಗಿದ್ದರೆ, ಈ ಗಗನಯಾತ್ರಿಗಳು ಮಾರ್ಚ್ 19 ರಂದು ಬಾಹ್ಯಾಕಾಶದಿಂದ ಹೊರಟ ಕೇವಲ ಎರಡು-ಮೂರು ದಿನಗಳ ನಂತರ ಭೂಮಿಯ ಮೇಲೆ ಇರುತ್ತಾರೆ.