Home News Nandi Cooperative Sugar Factory: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ!

Nandi Cooperative Sugar Factory: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ!

Nandi Cooperative Sugar Factory

Hindu neighbor gifts plot of land

Hindu neighbour gifts land to Muslim journalist

Nandi Cooperative Sugar Factory: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ಲ್ಲಿರೋ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ (Nandi Cooperative Sugar Factory) ಮತ್ತೆ ಬಾಯ್ಲರ್ (Boiler) ಸ್ಫೋಟಗೊಂಡಿದ್ದು ಭಾರಿ ಅನಾಹುತ ಒಂದು ತಪ್ಪಿದೆ.

ಹೌದು, ಅದೃಷ್ಟವಶಾತ್ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ನಸುಕಿನ ಜಾವ ಟೀ‌ ಕುಡಿಯಲು 15 ಕಾರ್ಮಿಕರು ತೆರಳಿದ್ದ ವೇಳೆ ಬಾಯ್ಲರ್ ಬ್ಲಾಸ್ಟ್ ಆಗಿದೆ. ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರಾಗಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಮಾಹಿತಿ ಪ್ರಕಾರ, ಮುಂದಿನ ಅವಧಿಗೆ  ಕಬ್ಬು ನುರಿಸಲು ಕಾರ್ಖಾನೆ ಸಿದ್ದತೆ ಮಾಡುವ ವೇಳೆ ಬಾಯ್ಲರ್ ಬ್ಲಾಸ್ಟ್ ಆಗಿದೆ. ಈ‌ ಹಿಂದೆ 2023 ರ ಮಾರ್ಚ್ 4 ರಂದು ಕೂಡ ಬಾಯ್ಲರ್ ಬ್ಲಾಸ್ಟ್ ಆಗಿತ್ತು.ಈ ವೇಳೆ ಓರ್ವ ಕಾರ್ಮಿಕ ಮೃತಪಟ್ಟು ಇತರೇ ನಾಲ್ವರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದವು.

ಇದೀಗ ಪದೇ ಪದೇ ಬಾಯ್ಲರ್ ಬ್ಲಾಸ್ಟ್ ಆಗಲು, ಕಳಪೆ ಬಾಯ್ಲರ್ ನಿರ್ಮಾಣವೇ ಅವಘಢಕ್ಕೆ ಕಾರಣವೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಹಿನ್ನೆಲೆ ಕಾರ್ಖಾನೆ ಬಾಯ್ಲರ್ ಸ್ಫೋಟ ಪ್ರಕರಣದ ತನಿಖೆಯ ಜೊತೆಗೆ ಯೋಜನೆ ಕಳಪೆತನ ಹಾಗೂ ಅರ್ಥಿಕ ಭ್ರಷ್ಟಾಚಾರ ತನಿಖೆಗಾಗಿ ಸರ್ಕಾರದ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

Smruthi Singh: ‘8 ವರ್ಷ ಪ್ರೀತಿಸಿದ್ರೂ 2 ತಿಂಗಳು ಮಾತ್ರ ಜೊತೆಗಿದ್ವಿ’ – ಇಲ್ಲಿದೆ ವೀರಮರಣವನ್ನಪ್ಪಿದ ಯೋಧ ಅಂಶುಮಾನ್- ಸ್ಮೃತಿ ಸಿಂಗ್ ಮನ ಮಿಡಿಯುವ ಲವ್ ಸ್ಟೋರಿ !!