Home News Chhattisgarh: ಕಾಂಗ್ರೆಸ್ ನಾಯಕನ ಮನೆಯಲ್ಲಿ ಬೆತ್ತಲಾಗಿ ಸೊಸೆಯ ಮೃತ ದೇಹ ಪತ್ತೆ !!

Chhattisgarh: ಕಾಂಗ್ರೆಸ್ ನಾಯಕನ ಮನೆಯಲ್ಲಿ ಬೆತ್ತಲಾಗಿ ಸೊಸೆಯ ಮೃತ ದೇಹ ಪತ್ತೆ !!

Hindu neighbor gifts plot of land

Hindu neighbour gifts land to Muslim journalist

Chhattisgarh: ಮದುವೆಯಾದ ಎರಡೇ ತಿಂಗಳಿಗೆ ಕಾಂಗ್ರೆಸ್ ನಾಯಕರೊಬ್ಬರ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅಲ್ಲದೆ ಇವರ ಮೃತ ದೇಹ ಬೆತ್ತಲೆಯಾಗಿ ಪತ್ತೆಯಾಗಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಹೌದು, ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ಕಾಂಗ್ರೆಸ್ ನಾಯಕ ಮತ್ತು ಘುಮ್ಕಾ ಬ್ಲಾಕ್ ಮಾಜಿ ಅಧ್ಯಕ್ಷ ದುರ್ಗೇಶ್ ದ್ವಿವೇದಿ ಅವರ ಸೊಸೆ ಹಾಗೂ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಾಗ ಅವಳು ಬೆತ್ತಲೆಯಾಗಿದ್ದಳು. ವಧುವಿನ ಮನೆಯವರು ಆಕೆ ಸೀರೆ ಧರಿಸಿಲ್ಲ ಹೀಗಾಗಿ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ವ್ಯಕ್ತವಾಗಿದೆ.

ಬಂದಿರುವ ಮಾಹಿತಿಯ ಪ್ರಕಾರ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಕಾಂಗ್ರೆಸ್ ನಾಯಕರೊಬ್ಬರ ಮನೆಯಲ್ಲಿ ಸೊಸೆ ಆತ್ಮಹತ್ಯೆ ಮಾಡಿಕೊಂಡಿರುವುದು ಸಂಚಲನ ಮೂಡಿಸಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಸಸ್ಪೆನ್ಸ್ ಹೆಚ್ಚಾಗಿದೆ. ಕುಟುಂಬ ಸದಸ್ಯರಿಂದ ಬಂದ ಮಾಹಿತಿಯ ಪ್ರಕಾರ, ಜನವರಿ 22 ರಂದು, ಘುಮ್ಕಾ ನಿವಾಸಿ ದುರ್ಗೇಶ್ ದ್ವಿವೇದಿ ಅವರ ಪುತ್ರ ಸೋನಾಲ್ ದ್ವಿವೇದಿ (24) ಜಲಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಸಲೋನಿ ಗ್ರಾಮದ 22 ವರ್ಷದ ಹುಡುಗಿಯನ್ನು ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ ಅತ್ತೆ-ಮಾವ ವಿವಾಹಿತ ಮಹಿಳೆಗೆ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ. ಸದ್ಯ ತನಿಖೆಯಿಂದ ಸತ್ಯ ಹೊರ ಬರಬೇಕಿದೆ.