

Death: ನಾಗಾಲ್ಯಾಂಡ್ ಗವರ್ನರ್ ಲಾ ಗಣೇಶನ್ (80) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆ.8 ರಂದು, ಲಾ ಗಣೇಶನ್ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಕುಸಿದು ಬಿದ್ದು ಅವರ ತಲೆಗೆ ಗಾಯವಾಗಿತ್ತು. ಅವರಿಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಅವರು ನಿಧನರಾದರು ಎಂದು ಕೊಹಿಮಾ ರಾಜಭವನದ ಪಿಆರ್‌ಒ ತಿಳಿಸಿದ್ದಾರೆ.
ಲಾ ಗಣೇಶನ್ ಅವರನ್ನು 2023ರ ಫೆ.12 ರಂದು ನಾಗಾಲ್ಯಾಂಡ್‌ನ 21ನೇ ಗವರ್ನರ್ ಆಗಿ ನೇಮಿಸಲಾಗಿತ್ತು. ಫೆ.20 ರಂದು ಅವರು ಅಧಿಕಾರ ವಹಿಸಿಕೊಂಡಿದ್ದರು.













