Home News ಮೈಸೂರು ಗ್ಯಾಂಗ್ ರೇಪ್ ಪ್ರಕರಣ |ಅತ್ಯಾಚಾರಿಗಳಿಂದ ಬಹಿರಂಗವಾಯಿತು ಸ್ಪೋಟಕ ಸತ್ಯ!!

ಮೈಸೂರು ಗ್ಯಾಂಗ್ ರೇಪ್ ಪ್ರಕರಣ |ಅತ್ಯಾಚಾರಿಗಳಿಂದ ಬಹಿರಂಗವಾಯಿತು ಸ್ಪೋಟಕ ಸತ್ಯ!!

Hindu neighbor gifts plot of land

Hindu neighbour gifts land to Muslim journalist

ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಂದ ಸ್ಪೋಟಕ ಮಾಹಿತಿಯೊಂದು ಪೊಲೀಸರ ತನಿಖೆಯ ವೇಳೆ ಬಹಿರಂಗವಾಗಿದೆ.

ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಆರೋಪಿಗಳ ಬಂಧನವಾಗಿದ್ದು ಪೊಲೀಸರು ಹಲವು ಆಯಾಮಗಳಲ್ಲಿ ಆರೋಪಿಗಳನ್ನು ವಿಚಾರಿಸುತ್ತಿದ್ದು, ಸದ್ಯ ಆರೋಪಿಗಳಿಂದ ಅದೊಂದು ಮಾಹಿತಿ ಹೊರಬಿದ್ದಿದೆ.’ಕಳೆದ ಕೆಲವು ದಿನಗಳಿಂದ ಯುವತಿ ಹಾಗೂ ಆಕೆಯ ಸ್ನೇಹಿತ ಬೆಟ್ಟದ ತಪ್ಪಲಿನಲ್ಲಿರುವುದನ್ನು ನಾವು ಗಮನಿಸಿದ್ದೇವೆ. ಅತ್ಯಾಚಾರ ನಡೆಸುವ ಹುನ್ನಾರವಿರಲಿಲ್ಲ, ಬದಲಾಗಿ ಅವರಿಬ್ಬರನ್ನು ಬೆದರಿಸಿ ದರೋಡೆ ಮಾಡುವ ಯೋಚನೆಯಲ್ಲಿ ಮೂರು ದಿನಗಳಿಂದ ಫಾಲೋ ಮಾಡಿದ್ದೀವಿ ಎಂದು ಆರೋಪಿಗಳು ಒಂದೊಂದೇ ವಿಚಾರಗಳನ್ನು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ.

ಇದೇ ಯೋಚನೆಯಲ್ಲಿ ಅಂದು ದರೋಡೆ ಮಾಡಿಯೇ ಸಿದ್ಧ ಎಂದುಕೊಳ್ಳುತ್ತಾ ಫಾಲೋ ಮಾಡಿದ್ದ್ವಿ,ಹಾಗೇ ಮುಂದೆ ಹೋದಾಗ ನಮ್ಮಲ್ಲಿ ಇಬ್ಬರು ಆಕೆಯನ್ನು ಅತ್ಯಾಚಾರ ನಡೆಸೋಣ ಎಂದು ಹಠ ಹಿಡಿದಿದ್ದು, ಇದೇ ವಿಚಾರವಾಗಿ ನಮ್ಮೊಳಗೇ ಕೆಲ ಕಾಲ ವಾಗ್ವಾದ ನಡೆದಿದೆ. ಕೊನೆಗೆ ನಮ್ಮ ಮಾತನ್ನು ಕೇಳದ ಅವರಿಬ್ಬರು ಆಕೆಯನ್ನು ಹೊತ್ತುಕೊಂಡು ಪೊದೆಯೊಳಗೆ ಹಾಕಿ ಅತ್ಯಾಚಾರ ಮಾಡಿಯೇ ಬಿಟ್ಟರು, ಉಳಿದ ಮೂವರು ಆರೋಪಿಗಳಿಗೆ ಆ ಯೋಚನೆ ಇರಲಿಲ್ಲ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಅದಲ್ಲದೇ ತಮಿಳುನಾಡಿನಿಂದ ಮೈಸೂರು ಮಂಡ್ಯಕ್ಕೆ ಬಾಳೆ ಸಪ್ಲೈ ಮಾಡುವ ತಂಡಗಳಿಗೆ ಇದೆಲ್ಲಾ ಮಾಮೂಲಾಗಿದ್ದು,ಬೆಟ್ಟದ ತಪ್ಪಲಿಗೆ ಬರುವ ಹಲವು ಜೋಡಿಗಳನ್ನು ಬೆದರಿಸಿ ಹಣ ದರೋಡೆ ನಡೆಸುತ್ತೇವೆ ಎಂಬ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ. ಸದ್ಯ ತಮಿಳು ನಾಡಿನಿಂದ ಬರುವಂತಹ ಇನ್ನಷ್ಟು ಬಾಳೆ ವ್ಯಾಪಾರಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡುತ್ತಾರೆಯೇ, ಮುಂದೆ ಇಂತಹ ಘಟನೆ ಮರುಕಳಿಸದಂತೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.