Home News ಮನೆಯಲ್ಲಿನ ಬಡತನ, ಕೈಕೊಟ್ಟ ಉದ್ಯೋಗ ಆ ಇಬ್ಬರನ್ನೂ ಮಸಣ ಸೇರಿಸಿತು!!ಅಣ್ಣ ನೇಣಿಗೆ ಕೊರಳೊಡ್ಡಿದರೆ, ತಮ್ಮ ವಿಷ...

ಮನೆಯಲ್ಲಿನ ಬಡತನ, ಕೈಕೊಟ್ಟ ಉದ್ಯೋಗ ಆ ಇಬ್ಬರನ್ನೂ ಮಸಣ ಸೇರಿಸಿತು!!ಅಣ್ಣ ನೇಣಿಗೆ ಕೊರಳೊಡ್ಡಿದರೆ, ತಮ್ಮ ವಿಷ ಸೇವಿಸಿದ

Hindu neighbor gifts plot of land

Hindu neighbour gifts land to Muslim journalist

ಮನೆಯಲ್ಲಿನ ಕಿತ್ತು ತಿನ್ನುವ ಬಡತನ, ಅಲ್ಪ ಸ್ವಲ್ಪ ಸಾಲ, ಮಾಡಲು ಕೆಲಸವಿಲ್ಲದೆ, ಕೆಲಸಕ್ಕಾಗಿ ಅಲೆದು ಅಲೆದು ಸುಸ್ತು.ಇದೆಲ್ಲದರಿಂದ ಮನನೊಂದ ಯುವಕನೋರ್ವ ಇನ್ನೆಂದು ಬಾರದ ಲೋಕಕ್ಕೇ ತೆರಳಿದ್ದಾನೆ. ಅಣ್ಣನ ಸಾವಿನ ಸುದ್ದಿ ತಿಳಿದ ತಮ್ಮನೂ ಬದುಕಲು ಇಷ್ಟ ಪಡದೆ ಅಣ್ಣನ ದಾರಿಯನ್ನೇ ಅನುಸರಿಸಿದ್ದಾನೆ. ಒಂದೇ ಮನೆಯ ಎರಡು ಜೀವಗಳ ಮರಣದಿಂದ ಇಡೀ ಗ್ರಾಮದಲ್ಲೇ ಸೂತಕದ ಛಾಯೆ ಆವರಿಸಿದೆ.

ಇಂತಹದೊಂದು ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಎಚ್. ಡಿ ಕೋಟೆ ತಾಲೂಕಿನ ಕಟ್ಟೆ ಮನುಗನ ಹಳ್ಳಿ ಎಂಬ ಗ್ರಾಮದಲ್ಲಿ. ಇಬ್ಬರು ಯುವಕರು ನಿರುದ್ಯೋಗದಿಂದ ಹಾಗೂ ಮನೆಯಲ್ಲಿನ ಬಡತನದಿಂದ ನೊಂದಿದ್ದರು. ಇದರಿಂದಾಗಿ ಅಣ್ಣನಾದ ಸಿದ್ಧರಾಜು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾದರೆ, ಅಣ್ಣನಿಲ್ಲದೇ ಅರೆಕ್ಷಣವೂ ಬದುಕಲಾರೆ ಎಂದು ತಮ್ಮ ನಾಗರಾಜು ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.

ಘಟನೆಯು ನಾಲ್ಕು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದ ಪ್ರಕರಣದ ತನಿಖೆ ಮುಂದುವರಿಸಲಾಗಿದೆ. ಒಟ್ಟಿನಲ್ಲಿ ಬಡತನ, ನಿರುದ್ಯೋಗ ಆ ಇಬ್ಬರು ಯುವಕರ ಪಾಲಿಗೆ ಯಮನಾಗಿದೆ.