Home News ರಾಮ, ಕೃಷ್ಣರಲ್ಲಿ ನಂಬಿಕೆಯಿಲ್ಲದ ಮುಸ್ಲಿಮರನ್ನು ಮುಸ್ಲಿಮರು ಎಂದು ಕರೆಯಲಾಗುವುದಿಲ್ಲ- ಜಮಾಲ್ ಸಿದ್ದಿಕಿ

ರಾಮ, ಕೃಷ್ಣರಲ್ಲಿ ನಂಬಿಕೆಯಿಲ್ಲದ ಮುಸ್ಲಿಮರನ್ನು ಮುಸ್ಲಿಮರು ಎಂದು ಕರೆಯಲಾಗುವುದಿಲ್ಲ- ಜಮಾಲ್ ಸಿದ್ದಿಕಿ

Hindu neighbor gifts plot of land

Hindu neighbour gifts land to Muslim journalist

New delhi: ಸನಾತನ ಧರ್ಮವು (ಹಿಂದೂ ಧರ್ಮವು) ಇಸ್ಲಾಂಗಿಂತ ಪುರಾತನವಾದದ್ದು ಎಂದು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಹೇಳಿದ್ದಾರೆ. ಸನಾತನ ಧರ್ಮ ಮತ್ತು ಇಸ್ಲಾಂ ನಡುವೆ ದೇವರು ಮತ್ತು ಸಾಂಸ್ಕೃತಿಕ ಹೋಲಿಕೆಗಳಿವೆ ಎಂದು ಅವರು
ತಿಳಿಸಿದ್ದಾರೆ.

ಅಲ್ಲದೆ ಅವರು ಎಲ್ಲಾ ಮುಸ್ಲಿಮರು ಭಗವಾನ್ ರಾಮನ ವಂಶಸ್ಥರು ಎಂದು ಹೇಳಿದ್ದಾರೆ. ಸನಾತನ ಧರ್ಮವು ಇಸ್ಲಾಂಗಿಂತ ಬಹಳ ಹಿಂದೆಯೇ ಬಂತು. ಸನಾತನ ಧರ್ಮವು ನಮ್ಮ ನಾಗರಿಕತೆಯ ಅಡಿಪಾಯವಾಗಿದ್ದು, ಈ ಧರ್ಮದಲ್ಲಿ ಭಾರತೀಯ ಸಂಸ್ಕೃತಿಯ ಆಳವಾದ ಬೇರುಗಳಿವೆ ಎಂದು ಸಿದ್ದಿಕಿ ಹೇಳಿದ್ದಾರೆ. ಅಲ್ಲದೆ, ರಾಮ ಮತ್ತು ಕೃಷ್ಣನಲ್ಲಿ ನಂಬಿಕೆಯಿಲ್ಲದ ಮುಸ್ಲಿಮರನ್ನು ಮುಸ್ಲಿಮರು ಎಂದು ಕರೆಯಲಾಗುವುದಿಲ್ಲ. ಇಸ್ಲಾಂ ಒಬ್ಬ ಪ್ರವಾದಿಯನ್ನು ಮಾತ್ರವಲ್ಲ, ಅನೇಕರನ್ನು ಒಪ್ಪಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಕುರಾನ್ 25 ಪ್ರವಾದಿಗಳನ್ನು ಉಲ್ಲೇಖಿಸುತ್ತದೆ, ಆದರೆ ಹದೀಸ್ ಪ್ರಕಾರ, ಪ್ರಪಂಚದಾದ್ಯಂತ 1,24,000 ಪ್ರವಾದಿಗಳನ್ನು ಕಳುಹಿಸಲಾಗಿದೆ. ಭಗವಾನ್ ಮತ್ತು ಭಗವಾನ್ ಕೃಷ್ಣ ಅವರಲ್ಲಿ ಇರಲಿಲ್ಲ ಎಂದರೆ ಹೇಗೆ ನಂಬುವುದು? ಭಗವಾನ್ ರಾಮ ಮತ್ತು ಕೃಷ್ಣ ಸಂದೇಶವಾಹಕರಾಗಿರಬಹುದು. ಭಾರತದಲ್ಲಿ ಮುಸ್ಲಿಂ ಸಮುದಾಯದ ಬೇರುಗಳು ಪ್ರಾಚೀನ ಹಿಂದೂ ಸಂಪ್ರದಾಯದೊಂದಿಗೆ ಹೆಣೆದು ಬೆಸೆದುಕೊಂಡಿವೆ. ಎರಡರ ಪೂಜಾ ವಿಧಾನಗಳು ಬದಲಾಗಿರಬಹುದು, ಆದರೆ, ಅದರ ಹಿಂದಿನ ಸಂಸ್ಕೃತಿ ಒಂದೇ ಎಂದು ಸಿದ್ದಿಕಿ ಹೇಳಿದ್ದಾರೆ.