Home News ಅಣಬೆ ತಿಂದು ಅಸ್ವಸ್ಥಗೊಂಡ 40 ಮಂದಿ !! | ಚಿಕಿತ್ಸೆ ಫಲಕಾರಿಯಾಗದೆ 13 ಜನರು ದುರ್ಮರಣ

ಅಣಬೆ ತಿಂದು ಅಸ್ವಸ್ಥಗೊಂಡ 40 ಮಂದಿ !! | ಚಿಕಿತ್ಸೆ ಫಲಕಾರಿಯಾಗದೆ 13 ಜನರು ದುರ್ಮರಣ

Hindu neighbor gifts plot of land

Hindu neighbour gifts land to Muslim journalist

ವಿಷಕಾರಿ ಅಣಬೆ ತಿಂದು ಕಳೆದ 2 ದಿನಗಳಲ್ಲಿ 13 ಜನ ಸಾವನ್ನಪ್ಪಿದ ದುರಂತ ಘಟನೆ ಅಸ್ಸಾಂ ರಾಜ್ಯದ 4 ಜಿಲ್ಲೆಗಳಲ್ಲಿ ನಡೆದಿದೆ.

ಈ ವಿಷಕಾರಿ ಅಣಬೆಯನ್ನು ಸೇವಿಸಿದ 40 ಜನರು ಅಸ್ವಸ್ಥರಾಗಿದ್ದರು. ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅದರಲ್ಲಿ 13 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೇಲ್ವಿಚಾರಕರು ತಿಳಿಸಿದ್ದಾರೆ

ಕಳೆದ ಐದು ದಿನಗಳಲ್ಲಿ ಅಸ್ಸಾಂನ ಚರೈಡಿಯೊ, ದಿಬ್ರುಗಢ, ಶಿವಸಾಗರ್ ಮತ್ತು ತಿನ್ಸುಕಿಯಾ ಜಿಲ್ಲೆಗಳಲ್ಲಿ ವಿಷಕಾರಿ ಅಣಬೆಯನ್ನು ತಿಂದಿದ್ದ 40ಕ್ಕೂ ಅಧಿಕ ಜನರು ದಾಖಲಾಗಿದ್ದು, ಈ ಪೈಕಿ ಕಳೆದ ಎರಡು ದಿನಗಳಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.