Home News Murder Case: ಮದುವೆ ದಿನವೇ ವಧು-ವರ ಬಡಿದಾಡಿಕೊಂಡು ಸತ್ತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಅಸಲಿ ಸತ್ಯ...

Murder Case: ಮದುವೆ ದಿನವೇ ವಧು-ವರ ಬಡಿದಾಡಿಕೊಂಡು ಸತ್ತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಅಸಲಿ ಸತ್ಯ ಕೊನೆಗೂ ಬಯಲಾಯ್ತು!

Hindu neighbor gifts plot of land

Hindu neighbour gifts land to Muslim journalist

Murder Case: ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಚಂಬಾರಸನಹಳ್ಳಿ ಗ್ರಾಮದಲ್ಲಿ ನಡೆದಿದ್ದ ನವ ವಧು-ವರರು ಮುದ್ದಾಡಿಕೊಂಡು ಸಂಸಾರ ನಡೆಸುವ ಬದಲು ಮದುವೆ ದಿನವೇ ಹೊಡೆದಾಡಿಕೊಂಡು ಜೀವ ಕಳೆದುಕೊಂಡಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಇದೀಗ ಈ ಘಟನೆ ಸಂಬಂಧ ಕೆಲವು ಮಾಹಿತಿಗಳು ಪೊಲೀಸ್ ವಿಚಾರಣೆ ನಂತರ ಬಯಲಾಗಿದೆ.

ಮಾಹಿತಿ ಪ್ರಕಾರ ವರ ನವೀನ್ ಇಷ್ಟಪಟ್ಟು ಪ್ರೀತಿಸಿ ಲಿಖಿತಾಶ್ರೀಯನ್ನು ಮದುವೆ ಮಾಡಿಕೊಂಡಿದ್ದ. ಆದರೆ ಆ ಖುಷಿ ಆಕೆಯ ಕುತ್ತಿಗೆಗೆ ತಾಳಿ ಕಟ್ಟುವಷ್ಟರಲ್ಲಿ ಮಾಸಿ ಹೋಗಿದೆ.  ಮುನಿಯಪ್ಪ ಅವರ ಪುತ್ರ ನವೀನ್ ಕುಮಾರ್, ರಾಜ್‌ಪೇಟ್ ರಸ್ತೆಯಲ್ಲಿ ರೆಡಿಮೇಡ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ಆದರೆ ಕೆಲ ತಿಂಗಳುಗಳಿಂದ ತನ್ನ ಅಕ್ಕ ಪವಿತ್ರಾ ಮನೆ ಚಂಬಾರಸನಹಳ್ಳಿಯಲ್ಲಿ ಬಂದು ನೆಲೆಸಿದ್ದ. ಇನ್ನು ಇತ್ತ ನವೀನ್ ತಾಯಿ ಅನಾರೋಗ್ಯ ಕಾರಣಕ್ಕೆ ನವೀನ್‌ಗೂ ಬೈನೇಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬವರ ಪುತ್ರಿ ಲಿಖಿತಾಶ್ರೀ ನಡುವೆ ಮದುವೆ ಫಿಕ್ಸ್ ಮಾಡಲಾಗಿತ್ತು,.

ಆದ್ರೆ ಆಷಾಢ ಮಾಸದ ಹಿನ್ನೆಲೆ ಮದುವೆ ದಿನಾಂಕ ಮುಂದೂಡಲಾಗಿತ್ತು. ಆದರೆ ಇದ್ದಕ್ಕಿದಂತೆ ನವೀನ್ ಆ.6 ರಂದು ಅದೇ ಲಿಖಿತಾಶ್ರೀ ಜೊತೆಗೆ ನಾಳೆಯೇ ನನ್ನ ಮದುವೆ ಮಾಡಿಸಿ, ಇಲ್ಲವಾದರೆ ತಾನು ಸತ್ತೋಗ್ತಿನಿ ಎಂದು ಕುಟುಂಬಸ್ಥರಿಗೆ ಹೆದರಿಸಿದ್ದ. ಸದ್ಯ ಹುಡುಗಿಯ ಒಪ್ಪಿಗೆಯೂ ಇದ್ದ ಕಾರಣ ಮನೆ ಬಳಿಯೇ ಸಿಂಪಲ್ ಆಗಿ ಮದುವೆ ಮಾಡಿಸಿದ್ದಾರೆ. ನಂತರ ನಡೆದಿದ್ದೇ ಜಗಳ.

ಇದೀಗ ಪೊಲೀಸ್ ವಿಚಾರಣೆಯಲ್ಲಿ ನವೀನ್ ಬಗ್ಗೆ ಆತನ ತಂದೆ”  ನವೀನ್ ಮಾನಸಿಕ ಸ್ಥಿತಿ  ಸರಿ ಇಲ್ಲ. ಅವನಿಗೆ ತಿಂದ ಊಟ ಜೀರ್ಣ ಆಗದೆ ವಾಂತಿ ಮಾಡುತ್ತಿದ್ದ. ಆತನ ಚಲನ ವಲನ ಆತನ ಹತೋಟಿಯಲ್ಲಿರಲಿಲ್ಲ. ಮದುವೆ ಮಾಡಿದ್ರೆ ಸರಿ ಹೋಗುತ್ತಾನೆಂದು ತಿಳಿದು ಮದುವೆ ಮಾಡಿದ್ದೆವು” ಅಂದಿದ್ದಾರೆ.

ಘಟನೆ ಸಂಬಂಧ (Murder Case)  ಕೆಜಿಎಫ್ ಪೊಲೀಸರು ತನಿಖೆ ನಡೆಸುತ್ತಿದ್ದೂ, ನವೀನ್ ಮೇಲೆ ಕೊಲೆ ಪ್ರಕರಣ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದು, ಘಟನೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ನವೀನ್ ಹಾಗೂ ಲಿಖಿತಾಶ್ರೀ ಇಬ್ಬರ ಮೊಬೈಲ್ ಸೀಜ್ ಮಾಡಿದ್ದು,  ಜೊತೆಗೆ ಅವರ ಕಾಲ್ ಡೀಟೇಲ್ಸ್ ಪರಿಶೀಲಿಸುತ್ತಿದ್ದಾರೆ. ಅಲ್ಲದೇ ಇವರಿಬ್ಬರ ಜೊತೆಗೆ ಮಾತನಾಡಿದ್ದ ಆಪ್ತರನ್ನು, ಸಂಬಂಧಿಕರು ಹಾಗೂ ಸ್ನೇಹಿತರು, ಕೂಡಾ ಕರೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಇಬ್ಬರ ಸಾವಿನ ಕುರಿತು ಬೇರೆ ಬೇರೆ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.