Home latest ಯುವಕನಿಗೆ ಚೂರಿ ಇರಿದು ಹತ್ಯೆ ಮಾಡಿ ಎಸ್ಕೇಪ್ ಆದ ದುಷ್ಕರ್ಮಿಗಳು!

ಯುವಕನಿಗೆ ಚೂರಿ ಇರಿದು ಹತ್ಯೆ ಮಾಡಿ ಎಸ್ಕೇಪ್ ಆದ ದುಷ್ಕರ್ಮಿಗಳು!

Hindu neighbor gifts plot of land

Hindu neighbour gifts land to Muslim journalist

22 ವರ್ಷದ ಯುವಕನನ್ನು ಗುಂಪೊಂದು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಈಶಾನ್ಯ ದೆಹಲಿಯ ಖಜುರಿ ಖಾಸ್‌ನಲ್ಲಿ ಸೋಮವಾರ ನಡೆದಿದೆ.

ಬಲಿಯಾದ ವ್ಯಕ್ತಿ ಬಿಹಾರದ ಪೂರ್ಣಿಯ ನಿವಾಸಿ ಅನವರುಲ್ ಹಕ್ ಎಂದು ಗುರುತಿಸಲಾಗಿದೆ.

ಶಾಲಾ ಬ್ಯಾಗ್‌ಗಳನ್ನು ತಯಾರಿಸುವ ಬಿಹಾರಿಪುರ ಮೂಲದ ಕಾರ್ಖಾನೆಯಲ್ಲಿ ಹಕ್ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಜುಲೈ 31ರಂದು ಖಜೂರಿ ಖಾಸ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದ್ದು, ಒಬ್ಬ ವ್ಯಕ್ತಿಗೆ ಕೆಲವು ಹುಡುಗರು ಚೂರಿಯಿಂದ ಇರಿದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತಕ್ಷಣ, ಪೊಲೀಸ್ ತಂಡವು ಸ್ಥಳಕ್ಕೆ ಹೋಗಿದ್ದು, ಆ ಹೊತ್ತಿಗೆ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಲಾಯಿತು. ಆದರೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ತನಿಖೆಯ ಸಮಯದಲ್ಲಿ, ತಂಡಗಳು ಸ್ಥಳದಲ್ಲಿದ್ದ ಹಲವಾರು ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿದ್ದು, ಕೆಲವು ಹುಡುಗರು ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗುತ್ತಿರುವುದನ್ನು ದೃಶ್ಯಾವಳಿ ತೋರಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.

ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಮತ್ತು 34 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ತನಿಖೆಯನ್ನು ಮಾಡಲಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ನಿರೀಕ್ಷೆಯಿದೆ ಎಂದು ಹೇಳಿದರು.