Home News H D Kumaraswami: ರಾಜ್ಯ ಸರ್ಕಾರವನ್ನು ಜಾಡಿಸಿದ ಸಂಸದ ಕುಮಾರಸ್ವಾಮಿ – ಪೊಲೀಸ್ ಬೇಡ ಅಂದ್ರು...

H D Kumaraswami: ರಾಜ್ಯ ಸರ್ಕಾರವನ್ನು ಜಾಡಿಸಿದ ಸಂಸದ ಕುಮಾರಸ್ವಾಮಿ – ಪೊಲೀಸ್ ಬೇಡ ಅಂದ್ರು ನಾನು ರಾಜ್ಯದ ಸಿಎಂ ಹೋಗಿ ಹೇಳು ಎಂದ ಸಿದ್ದು

Hindu neighbor gifts plot of land

Hindu neighbour gifts land to Muslim journalist

H D Kumaraswami: ಸರ್ಕಾರದ ಉದ್ದಟತನಕ್ಕೆ 11 ಜೀವ ಬಲಿಯಾಗಿದೆ. ಸರ್ಕಾರದ ಬಗ್ಗೆ ಕೆಟ್ಟ ಸಂದೇಶ ಹೋಗಿದೆ. ಅದಕ್ಕಾಗಿ ಪೊಲಿಸರ ಸಸ್ಪೆಂಡ್. ದಯಾನಂದ್ ಕಮಿಷನರ್ ಇದ್ದಾಗ ಹೊಸವರ್ಷಾಚರಣೆ ವೇಳೆ ಅಹಿತಕರ ಘಟನೆ ಆಗಿಲ್ಲ. ಸೆಂಟ್ರಲ್ ಡಿಸಿಪಿ ಅಪ್ಪಯ್ಯನ (ಯತೀಂದ್ರ) ಆತ್ಮೀಯರು, ಹಾಗಾಗಿ ಸಸ್ಪೆಂಡ್ ಅಂತ ನಾಟಕವಾಡ್ತಿವಿ ಅಂತ ಹೇಳಿರ್ತಾರೆ. ಆಮೇಲೆ ದೊಡ್ಡ ಹುದ್ದೆ ಕೊಡ್ತಿವಿ ಅಂತ ಹೇಳಿರಬಹುದು ಎಂದು ಎಚ್ ಡಿ ಕುಮಾರಸ್ವಾಮಿ ಸರ್ಕಾರದ ನಾಟಕವನ್ನು ಬಯಲು ಮಾಡಿದ್ದಾರೆ.

ಪೊಲೀಸ್ ಬೇಡ ಅಂದರು ನಾನು ಈ ರಾಜ್ಯದ ಸಿಎಂ, ಹೇಳಿದಷ್ಟು ಕೆಲಸ ಮಾಡಿ ಹೋಗು ಎಂದು ಹೇಳಿದ್ದಾರೆ, ಕಮಿಷನರ್ ಅನಿವಾರ್ಯ ಆಗಿ ಒಪ್ಕೊತಾರೆ. ಏ…. ಆ ಕುಡಿತದವ ಮಾಡಿದ kca ಕಾರ್ಯಕ್ರಮಕ್ಕೆ ನಾನು ಹೋಗಬೇಕಾ? ಇಲ್ಲೇ ವಿಧಾನಸೌಧಕ್ಕೆ ಕರೆಸು ಅಲ್ಲೆ ಕಾರ್ಯಕ್ರಮ ಮಾಡು ಎಂದು ಕಮಿಷನರ್ ಗೆ ಹೇಳಿದ್ರು ಸಿಎಂ, ಅಲ್ಲಿ ಒಬ್ಬ ಇದ್ದಾನೆ ಗೋವಿಂದ ಗೋವಿಂದ( ಗೋವಿಂದ ರಾಜ್) ಎನ್ನುವ ಸಿಎಂ ಜೊತೆ ಇರ್ತಾನೆ. ವಿಧಾನಸೌಧದ ಎದುರೇ ಆಗಬೇಕು ಅನ್ನೋದು ಸಿಎಂ ಹಠ. ಇವರ ಹಠಕ್ಕೆ ಜೀವಗಳು ಬಲಿಯಾದವು ಎಂದು ಎಚ್ಡಿಕೆ ಕಿಡಿ ಕಾರಿದರು.

ಈ ಎಲ್ಲಾ ವಿಷಯ ತಿಳಿಯುತ್ತಿದ್ದಂತೆ ಕನಕಪುರದ ಡಿಸಿಎಂ ಡಿಕೆ ಪಾಪ, ಅವರು ಕೋರ್ಟ್ ನಲ್ಲಿ ಇದ್ರು. ನನ್ನ ಕೇಳದೆ ಯಾರು ಕಾರ್ಯಕ್ರಮ ಮಾಡೋದು ಎಂದು, ಕನಕಪುರದಿಂದ ಸೀದಾ HAL ಗೆ ಓಡಿ ಹೋದರು. ಅವರೆ ಕಪ್ ಗೆದ್ದವರಂತೆ ಮಾಡಿದರು. ಕೋಹ್ಲಿಗೆ ಕನ್ನಡದ ಧ್ವಜ ಕೊಟ್ಟರು. ಇವರು ಇಂಪೋರ್ಟೆಡ್ ಶಾಲು ಹಾಕಿದ್ರು. ಕೋಹ್ಲಿ ಪುನಃ ಆ ಕನ್ನಡದ ಶಾಲನ್ನು ಡಿಕೆಗೆ ಹಾಕಿದ್ರು. ವೇದಿಕೆಯಲ್ಲಿ ಸೇರಿದ್ದು ಮಂತ್ರಿಗಳ ಮಕ್ಕಳು, ಮೊಮ್ಮಕ್ಕಳು, ಒಬ್ಬೊಬ್ಬರು ಗ್ಲಾಸ್ ಹಾಕಿಕೊಂಡು ಪೋಸ್ ಕೊಟ್ಟರು ಇದೇ ನಡೆದದ್ದು ಎಂದರು.

ವೇದಿಕೆಯಲ್ಲಿ ಏಲಕ್ಕಿ ಹಾರ ತಂದಿಲ್ವಾ ಎಂದು ಕೇಳಿದ್ರು ಗೋವಿಂದ ರಾಜ್. ಇಲ್ಲ ಸರ್ ಗಂಧದ ಹಾರ ತಂದಿದ್ದೀವಿ ಎಂದರು. ವೇದಿಕೆಯಲ್ಲಿ ಡಿಕೆಶಿ ಒಬ್ಬನಿಗೆ ಹೊಡೆದು ಪೊಲೀಸ್ ಕೆಲಸ ಮಾಡಿದ್ರು. ಮೊದಲ ಕಾಲುತುಳಿತ ಸಾವು 3.10 ಕ್ಕೆ ಆಗಿದೆ. ಡಿಕೆಶಿ ಮೈದಾನಕ್ಕೆ ಹೋಗಿ ಕಪ್ಗೆ ಮುತ್ತಿಕ್ಕಿದ್ರು. ಮತ್ತೊಂದು ಕಡೆ ಸಿಎಂ ತಮ್ಮ ಮೊಮ್ಮಗನ ಕರೆದುಕೊಂಡು ಹೋಗಿ, ಜನಾರ್ದನ ಹೊಟೇಲ್ ಗೆ ದೋಸೆ ಹಲ್ವಾ ಸವಿಯೋಕೆ ಹೋಗಿದ್ರು. ಅಯ್ಯೋ ಸತ್ಯಮೇವ ಜಯತೆ ಅಂತೆ.ನಿಮಗೆ ಮಾನ ಮರ್ಯಾದೆ ಇಲ್ವಾ. ಕೋರ್ಟ್ ಬರೆ ಎಳೆಯಲಿದೆ ಎಂದು ತಾವೇ ಎನೊ ಮಾಡಿದ್ದೀವಿ ಅಂತ ಹೊರಟಿದೆ ಸರ್ಕಾರ ಎಂದು ಸರ್ಕಾರಕ್ಕೆ ತಿವಿದರು.