Home News Shocking News: ನಿದ್ದೆ ಮಾಡ್ತಿಲ್ಲ ಎಂದು ಶಿಶುವನ್ನು ಫ್ರಿಡ್ಜ್​​ನಲ್ಲಿ ಮಲಗಿಸಿದ ತಾಯಿ!

Shocking News: ನಿದ್ದೆ ಮಾಡ್ತಿಲ್ಲ ಎಂದು ಶಿಶುವನ್ನು ಫ್ರಿಡ್ಜ್​​ನಲ್ಲಿ ಮಲಗಿಸಿದ ತಾಯಿ!

Hindu neighbor gifts plot of land

Hindu neighbour gifts land to Muslim journalist

Shocking News: ಮಗು ನಿದ್ದೆ ಮಾಡುತ್ತಿಲ್ಲವೆಂದು 15 ದಿನದ ಶಿಶುವನ್ನು ತಾಯಿಯೊಬ್ಬಳು ಫ್ರಿಡ್ಜ್​​ನಲ್ಲಿ ಇಟ್ಟಿರುವ ಘಟನೆ ಮೊರಾದಾಬಾದ್​​ನಲ್ಲಿ ನಡೆದಿದೆ.

ಹೆರಿಗೆ ನಂತರ ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಮಹಿಳೆ ತಾನು ಮಲಗಲು ಹೋಗುವ ಮುನ್ನ ಮಗುವನ್ನು ಫ್ರಿಡ್ಜ್​ನಲ್ಲಿ ಇರಿಸಿದ್ದರು. ಶಿಶುವಿನ ಕಿರುಚಾಟ ಕೇಳಿ ಅಜ್ಜಿ ಮಗುವನ್ನು ರಕ್ಷಿಸಿದರು.

ಕುಟುಂಬ ಸದಸ್ಯರು ಹೇಳುವಂತೆ, ತಾಯಿ ಮೊರಾದಾಬಾದ್‌ನ ಜಬ್ಬರ್ ಕಾಲೋನಿಯಲ್ಲಿ ಪತಿ ಮತ್ತು ಅತ್ತೆ ಮಾವಂದಿರೊಂದಿಗೆ ವಾಸಿಸುತ್ತಿದ್ದರು. ಸೆಪ್ಟೆಂಬರ್ 5ರಂದು ಈ ಘಟನೆ ನಡೆದಿದ್ದು, ಎಷ್ಟೊತ್ತಾದರೂ ಮಗು ಮಲಗಲಿಲ್ಲ ಎಂದು ತಾಯಿ ಶಿಶುವನ್ನು ಫ್ರಿಡ್ಜ್​​ನಲ್ಲಿರಿಸಿದ್ದಾರೆ. ನಂತರ ಅವಳು ತನ್ನ ಕೋಣೆಗೆ ಹಿಂತಿರುಗಿ ನಿದ್ರೆಗೆ ಜಾರಿದಳು. ಸ್ವಲ್ಪ ಸಮಯದ ನಂತರ, ಮಗುವಿನ ಅಳು ಅಜ್ಜಿಗೆ ಎಚ್ಚರಿಕೆ ನೀಡಿತು.

ಫ್ರಿಡ್ಜ್​​ನಲ್ಲಿ ಏನೋ ಸಪ್ಪಳ ಬರುತ್ತಿದೆ ಎಂದು ತೆರೆದು ನೋಡಿದಾಗ ಅಲ್ಲಿ ಮಗು ಇತ್ತು, ಮಗುವನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು, ಅವರು ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಎಂದು ದೃಢಪಡಿಸಿದರು.

ಆಕೆಯ ಕುಟುಂಬದವರು ಪ್ರಶ್ನಿಸಿದಾಗ, ಆ ಮಹಿಳೆ ಯಾವುದೇ ಆತಂಕವಿಲ್ಲದೆ, ಮಗು ನಿದ್ರೆ ಮಾಡುತ್ತಿಲ್ಲ ಹಾಗಾಗಿ ನಾನು ಅವನನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದೆ ಎಂದು ಉತ್ತರ ಕೊಟ್ಟಿದ್ದಳು.

ಇದು ಹೆರಿಗೆಯ ನಂತರ ಕಾಣಿಸಿಕೊಳ್ಳಬಹುದಾದ ಅಪರೂಪದ ಆದರೆ ಗಂಭೀರವಾದ ಮಾನಸಿಕ ಅಸ್ವಸ್ಥತೆಯಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸುಮಾರು ಶೇಕಡ 20 ರಷ್ಟು ಮಹಿಳೆಯರು ಪ್ರಸವಾನಂತರದ ಖಿನ್ನತೆಯನ್ನು ಅನುಭವಿಸುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ.

ಇದನ್ನೂ ಓದಿ:Adhar Card: ಇನ್ಮುಂದೆ ಆಧಾರ್ ಕಾರ್ಡ್ ಅನ್ನು ವಾಟ್ಸಾಪ್ ನಿಂದಲೂ ಡೌನ್‌ಲೋಡ್ ಮಾಡಬಹುದು- ಜಸ್ಟ್ ಹೀಗೆ ಮಾಡಿ

ಪ್ರಸವಾನಂತರದ ಮನೋರೋಗವು 1,000 ಜನನಗಳಿಗೆ ಕೇವಲ 1 ರಿಂದ 2 ಮಹಿಳೆಯರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ, ಆದರೆ ಪ್ರಸವಾನಂತರದ ಖಿನ್ನತೆಯು ಹೆಚ್ಚು ಸಾಮಾನ್ಯವಾಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಪ್ರಸವಾನಂತರದ ಖಿನ್ನತೆಯ ಪ್ರಮಾಣ ಶೇ. 22 ರಷ್ಟು ಇದೆ.