Home News Suicide: ಅತ್ತೆ-ಸೊಸೆ ಜಗಳ: ಕೆರೆಗೆ ಹಾರಿ ತಾಯಿ, ಮಗ ಆತ್ಮಹತ್ಯೆ!

Suicide: ಅತ್ತೆ-ಸೊಸೆ ಜಗಳ: ಕೆರೆಗೆ ಹಾರಿ ತಾಯಿ, ಮಗ ಆತ್ಮಹತ್ಯೆ!

Hindu neighbor gifts plot of land

Hindu neighbour gifts land to Muslim journalist

Suicide: ಅತ್ತೆ ಸೊಸೆ ಕಲಹ (Family Feud) ಹಿನ್ನೆಲೆ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದೆ.

ಜಯಂತಿ (60), ಭರತ್ (35) ಆತ್ಮಹತ್ಯೆಗೆ ಶರಣಾದ ತಾಯಿ-ಮಗ. ಭರತ್ ಕಳೆದ ಎಂಟು ತಿಂಗಳ ಹಿಂದಷ್ಟೇ ಅರಸೀಕೆರೆ (Arasikere) ತಾಲೂಕು ಬಾಗೂರನಹಳ್ಳಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದರು. ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇಲ್ಲದೆ ಪದೇಪದೇ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಭರತ್ ಪತ್ನಿ ಮನೆಬಿಟ್ಟು ತವರು ಮನೆಗೆ ಹೋಗಿದ್ದರು.

ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಎರಡು ಬಾರಿ ರಾಜಿ ಪಂಚಾಯ್ತಿ ಮಾಡಿದ್ದರು. ಆದರೂ ಭರತ್ ಪತ್ನಿ ಗಂಡನ ಜೊತೆ ಇರದೇ ತವರು ಮನೆಗೆ ಹೋಗಿದ್ದರು. ಇದರಿಂದ ಮನನೊಂದಿದ್ದ ಭರತ್ ಹಾಗೂ ತಾಯಿ ಜಯಂತಿ ಕೆರೆಗೆ ಜಿಗಿದು ಆತ್ಮಹತ್ಯೆಗೆ (suicide )ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.