Home News Mosque: ಮಠದ ಜಾಗವನ್ನು ಜೆಸಿಬಿಯಿಂದ ಕಟ್ಟಡ ತೆರವು ಮಾಡಿದ ಮಸೀದಿ ಸದಸ್ಯರು

Mosque: ಮಠದ ಜಾಗವನ್ನು ಜೆಸಿಬಿಯಿಂದ ಕಟ್ಟಡ ತೆರವು ಮಾಡಿದ ಮಸೀದಿ ಸದಸ್ಯರು

Hindu neighbor gifts plot of land

Hindu neighbour gifts land to Muslim journalist

Mosque: ಕೋರ್ಟ್‌ ಆದೇಶವಿದೆ ಎಂದು ಸ್ಥಳೀಯ ಆಡಳಿತದ ಗಮನಕ್ಕೆ ತರದೆ ಮಠದ ಜಾಗವನ್ನು ಮಸೀದಿ (Mosque) ಸದಸ್ಯರು ತೆರವು ಮಾಡಿದ ಘಟನೆಯೊಂದು ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಬಳಿ ನಡೆದಿದೆ.

250ಕ್ಕೂ ಹೆಚ್ಚು ಅನ್ಯಕೋಮಿನ ಯುವಕರು ನಗರಸಭೆ ಗಮನಕ್ಕೆ ತರದೆ ಜೆಸಿಬಿ ತಂದು ಬಡಾಮಕಾನ್‌ ಜಾಮೀಯ ಮಸೀದಿ ಕಮಿಟಿಯ ಸದಸ್ಯರು ಕೋರ್ಟ್‌ ಆದೇಶವಿದೆ ಎಂದು ಹೇಳಿ ಮಂಗಳವಾರ ಬೆಳಗ್ಗೆನೇ ಮನೆ, ಹೋಟೆಲ್‌, ಕಟ್ಟಡವನ್ನು ತೆರವು ಮಾಡಿದ್ದರು. ಈ ಕುರಿತು ನಲ್ಲೂರು ಮಠದ ವಂಶಸ್ಥರು, ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.

ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿದ್ದು, ಜೆಸಿಬಿಯನ್ನು ಹೊರಗೆ ಕಳಿಸಿ ಬಿಗಿ ಬಂದೋಬಸ್ತ್‌ ಮಾಡಿದ್ದಾರೆ. ತೆರವು ಕಾರ್ಯಾಚರಣೆಯನ್ನು ನಿಲ್ಲಿಸಿದ್ದು, ಸಭೆಗೆ ಬರುವಂತೆ ಎಸ್ಪಿ ಸೂಚನೆ ನೀಡಿದ್ದಾರೆ. ಹಾಗೂ ಹಿಂದೂ ಸಂಘಟನೆ, ಮುಸ್ಲಿಂ ಸಂಘಟನೆ ಜೊತೆ ಮಧ್ಯಾಹ್ನ ಸಭೆ ಮಾಡಿದ್ದಾರೆ.

ನಂತರ ಹಿಂದೂ ಸಂಘಟನೆಯವರು ಕೂಡಲೇ ಕಟ್ಟಡ ನಿರ್ಮಾಣ ಮಾಡಬೇಕು. ನಷ್ಟ ದಂಡ ತೆರಬೇಕು, ಜೆಸಿಬಿ ವಶಕ್ಕೆ ಪಡೆದು, ಕಟ್ಟಡ ತೆರವು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹ ಮಾಡಿದರು. ಬಸವನಹಳ್ಳಿ ಠಾಣೆಗೆ ದೂರನ್ನು ನಲ್ಲೂರು ಮಠದ ಕುಟುಂಬಸ್ಥರು ಮತ್ತು ಹೊಟೇಲ್‌ ಮಾಲೀಕರು ನೀಡಿದ್ದಾರೆ.

ವಕ್ಫ್‌ ಬೋರ್ಡ್‌ ಅಧಿಕಾರಿ ಸೇರಿ ಜಾಮೀಯ ಮಸೀದಿ ಕಮಿಟಿಯ 14 ಜನರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ ನಂತರ ಇನ್ಯಾವುದೇ ಅನಾಹುತ ನಡೆಯಬಾರದು ಎಂಬ ಮುಂಜಾಗೃತ ಕ್ರಮವಾಗಿ ವಿವಾದದ ಜಾಗದ ಬಳಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.