Home News Crime: ಮೂಡುಬಿದಿರೆ: ಅಲಂಕಾರ್ ಜ್ಯುವೆಲ್ಲರ್ಸ್ ನಲ್ಲಿ ಕಳ್ಳತನ ಯತ್ನ: ಕಳ್ಳನಿಗೆ ಸಾರ್ವಜನಿಕರಿಂದ ಥಳಿತ

Crime: ಮೂಡುಬಿದಿರೆ: ಅಲಂಕಾರ್ ಜ್ಯುವೆಲ್ಲರ್ಸ್ ನಲ್ಲಿ ಕಳ್ಳತನ ಯತ್ನ: ಕಳ್ಳನಿಗೆ ಸಾರ್ವಜನಿಕರಿಂದ ಥಳಿತ

Hindu neighbor gifts plot of land

Hindu neighbour gifts land to Muslim journalist

Crime: ಮೂಡುಬಿದಿರೆಯ ಅಲಂಕಾರ್ ಜ್ಯುವೆಲ್ಲರ್ಸ್ ನಿಂದ ಚಿನ್ನ ಕದ್ದು ಪರಾರಿಯಾಗಲೆತ್ನಿಸಿದ ಗುರುರಾಯನಕೆರೆಯ ರಮೇಶ ಎಂಬ ಕಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಹಕರ ಸ್ಟೈಲ್ ನಲ್ಲಿ ಅಲಂಕಾರ್ ಜ್ಯುವೆಲ್ಲರ್ಸ್ ಗೆ ಎಂಟ್ರಿ ಕೊಟ್ಟಿದ್ದ ರಮೇಶ, ಎರಡು ಉಂಗುರಗಳನ್ನು ತನ್ನ ಪ್ಯಾಂಟ್ ಕಿಸೆಯೊಳಗೆ ಹಾಕಿದ್ದಾನೆ.ಅದು ಮತ್ತೊಬ್ಬ ಗ್ರಾಹಕನ ಗಮನಕ್ಕೆ ಬಂದಿದೆ.

ಆತ ಅಲ್ಲಿಂದ ಕಾಲ್ಕಿತ್ತ ಬಳಿಕ ಜುವೆಲ್ಲರಿ ಮಾಲಕನ ಗಮನಕ್ಕೆ ತಂದಿದ್ದಾರೆ. ಕೂಡಲೇ ಆತನನ್ನು ಹಿಡಿಯಲು ಯತ್ನಿಸಿದಾಗ ಓಡಲು ಶುರು ಮಾಡಿದ್ದಾನೆ. ಅಷ್ಟರಲ್ಲಿ ಸಾರ್ವಜನಿಕರೇ ಆತನನ್ನು ಸೆರೆಹಿಡಿದಿದ್ದಾರೆ. ಬಾಯಿ ಬಿಡಿಸುವ ಯತ್ನದಲ್ಲಿ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.