Home News Monalisa Bhosle: ಮೊನಾಲಿಸಾ ಸಿನಿಮಾ ವಿವಾದ- ಐವರ ಮೇಲೆ ಕೇಸು ದಾಖಲು

Monalisa Bhosle: ಮೊನಾಲಿಸಾ ಸಿನಿಮಾ ವಿವಾದ- ಐವರ ಮೇಲೆ ಕೇಸು ದಾಖಲು

Hindu neighbor gifts plot of land

Hindu neighbour gifts land to Muslim journalist

Monalisa Bhosle: ಮಹಾಕುಂಭಮೇಳದ ವೈರಲ್‌ ಹುಡುಗಿ ಮೊನಾಲಿಸಾ ಭೋಂಸ್ಲೆಯ ಮಾನಹಾನಿ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬರುತ್ತಿದ್ದು, ಇದರ ಜೊತೆಗೆ ʼದಿ ಡೈರಿ ಆಫ್‌ ಮಣಿಪುರʼ ಚಿತ್ರದ ನಿರ್ದೇಶಕ ಸನೋಜ್‌ ಮಿಶ್ರಾ ನೀಡಿದ ದೂರನ್ನು ಆಧರಿಸಿ ಯೂಟ್ಯೂಬ್‌ ಚಾನಲ್‌ ಮಾಲೀಕ ಸೇರಿ ಐವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಮುಂಬೈನ ಉಪನಗರದಲ್ಲಿರುವ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಸನೋಜ್‌ ಮಿಶ್ರಾ ದೂರನ್ನು ದಾಖಲು ಮಾಡಿದ್ದಾರೆ.

ಮಿಶ್ರಾ ನಿರ್ದೇಶನ ಮಾಡಿದ ಯಾವುದೇ ಸಿನಿಮಾಗಳು ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ. 16 ವರ್ಷದ ಮೊನಾಲಿಸಾ ವೃತ್ತಿಜೀವನದನ್ನು ಹಾಳು ಮಾಡಲು ಮುಂದಾಗಿದ್ದಾರೆ ಎಂದು ದೂರಿನಲ್ಲಿ ಹೆಸರಿಸಲಾದ ಐವರು ಆರೋಪ ಮಾಡಿದ್ದರು. ಈ ಕಾರಣದಿಂದ ಯೂಟ್ಯೂಬ್‌ ಚಾನಲ್‌ ಮಾಲೀಕ ಸೇರಿ ಐವರು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ನನ್ನ ಘನತೆಗೆ ಕಳಂಕ ತರಲು ಪ್ರಯತ್ನ ಪಡುತ್ತಿದ್ದಾರೆ ಎಂದು ಮಿಶ್ರಾ ಪ್ರತಿದೂರು ದಾಖಲು ಮಾಡಿದ್ದಾರೆ.