Home News ಮೋಹಿನಿ ವೇಷಧರಿಸಿ ರಸ್ತೆಗಿಳಿದು ವಾಹನ ಸವಾರರಿಗೆ ಹೆದರಿಸುತ್ತಿದ್ದಳು ಈ ಯುವತಿ | ಈ ಕುಚೇಷ್ಟೆಯೇ ಆಕೆಯ...

ಮೋಹಿನಿ ವೇಷಧರಿಸಿ ರಸ್ತೆಗಿಳಿದು ವಾಹನ ಸವಾರರಿಗೆ ಹೆದರಿಸುತ್ತಿದ್ದಳು ಈ ಯುವತಿ | ಈ ಕುಚೇಷ್ಟೆಯೇ ಆಕೆಯ ಜೀವಕ್ಕೆ ಕುತ್ತು ತಂದಿತ್ತು!!

Hindu neighbor gifts plot of land

Hindu neighbour gifts land to Muslim journalist

ಕೆಲವೊಮ್ಮೆ ನಾವು ಮಾಡುವ ಕುಚೇಷ್ಟೆಗಳು ನಮಗೆ ಸಂಚಕಾರ ತಂದಿಡುತ್ತವೆ. ಏನೋ ಮಾಡಲು ಹೋಗಿ ನಾವೇ ಅಪಾಯದಲ್ಲಿ ಸಿಲುಕುವುದು ಉಂಟು. ಈ ರೀತಿಯಲ್ಲಿ ನಡೆದ ಭಯಾನಕ ಅಂತ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮೋಹಿನಿ ವೇಷ ತೊಟ್ಟು, ಭಯಂಕರವಾಗಿ ಭೂತದಂತೆ ಮೇಕಪ್ ಮಾಡಿಕೊಂಡು ಜನರನ್ನು ಹೆದರಿಸಲು ಹೋದ ಯುವತಿಯೊಬ್ಬಳು ಅಷ್ಟೇ ಭೀಕರವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಇದು ನಡೆದಿರುವುದು ಮೆಕ್ಸಿಕೋದ ನೌಕಲ್‌ಪಾನ್ ಡಿ ಜುವಾರೆಜ್‌ನಲ್ಲಿ, ಪ್ರತಿದಿನವೂ ಬಿಳಿಯ ಸೀರೆಯುಟ್ಟು ಮೋಹಿನಿಯಂತೆ ವೇಷ ಧರಿಸಿ, ಮುಖಕ್ಕೆ ಮೇಕಪ್ ಬಳಿದುಕೊಂಡ ಯುವತಿ ರಸ್ತೆಗೆ ಇಳಿದು ವಾಹನ ಸವಾರರನ್ನು ಹೆದರಿಸುತ್ತಿದ್ದಳು. ದಿನವೂ ಸವಾರರು ಭೀತಿಯಿಂದಲೇ ಈ ರಸ್ತೆಯಲ್ಲಿ ಓಡಾಟ ನಡೆಸುವ ಸ್ಥಿತಿ ಉಂಟಾಗಿತ್ತು.

ಈ ಭಾಗದಲ್ಲಿ ‘ಲಾ ಲೊರೊನಾ’ ಎಂಬ ಮೋಹಿನಿಯ ಭೀತಿ ಹೆಚ್ಚಾಗಿದೆ. ಮಗುವಿನ ನೆನಪಿನಲ್ಲಿ ಬೀದಿ ಬೀದಿಯಲ್ಲಿ ಓಡಾಡುತ್ತಿದ್ದ ದೆವ್ವ ಲಾ ಲೊರೊನಾ ಎಂಬ ನಂಬಿಕೆ ಇಲ್ಲಿಯವರಿಗೆ ಇದ್ದು, ಈ ಯುವತಿ ಕೂಡ ಅದೇ ರೀತಿ ಓಡಾಡುತ್ತಿದ್ದಳು. ಭಯಾನಕವಾಗಿ ಕಿರುಚುತ್ತಾ ಬಂದವರನ್ನು ಈಕೆ ಹೆದರಿಸಿ ಖುಷಿ ಪಡುತ್ತಿದ್ದಳು.

ನಿನ್ನೆ ಕೂಡ ಇದೇ ರೀತಿ ಈಕೆ ವಾಹನವೊಂದಕ್ಕೆ ಅಡ್ಡ ಬಂದಿದ್ದಾಳೆ. ಅದರಲ್ಲಿದ್ದ ವಾಹನ ಸವಾರ ಭಯದಿಂದ ಏನು ಎತ್ತ ಎಂದು ನೋಡದೇ ತನ್ನಲ್ಲಿದ್ದ ಬಂದೂಕಿನಿಂದ ಆಕೆಯತ್ತ ಗುಂಡಿನ ಸುರಿಮಳೆಗೈದಿದ್ದಾನೆ. ಇದರಿಂದ ಯುವತಿ ಸ್ಥಳದಲ್ಲಿಯೇ ಸತ್ತುಹೋಗಿದ್ದಾಳೆ. ಈಕೆ ಸಾಯುತ್ತಿದ್ದಂತೆಯೇ ವಾಹನ ಸವಾರ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.

ಅಂದಹಾಗೆ ಪ್ರತಿವರ್ಷ ಅಕ್ಟೋಬರ್ 31 ರಂದು ಆ ದೇಶದ ಕೆಲವು ಭಾಗಗಳಲ್ಲಿ ಹ್ಯಾಲೋವೀನ್ ದಿನಾಚರಣೆ ನಡೆಯುತ್ತದೆಯಂತೆ. ಈ ಸಂದರ್ಭದಲ್ಲಿ ಆತ್ಮಗಳು ಮತ್ತು ದೆವ್ವಗಳಂತೆ ಜನರು ಸಿಂಗಾರಗೊಂಡು ಸತ್ತವರಿಗೆ ಸಂತರ್ಪಣೆ ಸಲ್ಲಿಸುತ್ತಾರಂತೆ.

ಅದೇನೇ ಆಗಲಿ, ಹುಚ್ಚು ಸಾಹಸಕ್ಕೆ ಕೈಹಾಕಿದ ಯುವತಿ ಇದೀಗ ತನ್ನ ಪ್ರಾಣ ಕಳೆದುಕೊಂಡಿದ್ದಾಳೆ. ಏನು ಕುಚೇಷ್ಟೆ ಮಾಡಿ ಮಾಡಲು ಹೋಗಿ ತನ್ನ ಜೀವವನ್ನೇ ಬಲಿ ನೀಡಿದ್ದಾಳೆ. ಇನ್ನು ಎಂದಾದರೂ ಈ ರೀತಿಯ ಕುಚೇಷ್ಟೆ ಮಾಡಲು ಹೊರಡುವ ಮುನ್ನ ಎಚ್ಚರವಹಿಸಿ.