Home News Mohan Bhagwat: ರಾಮ ಮಂದಿರ ಕಟ್ಟಿದ ಮಾತ್ರಕ್ಕೆ ಹಿಂದೂ ನಾಯಕನಾಗಲು ಸಾಧ್ಯವಿಲ್ಲ- RSS ಮುಖ್ಯಸ್ಥ ಮೋಹನ್...

Mohan Bhagwat: ರಾಮ ಮಂದಿರ ಕಟ್ಟಿದ ಮಾತ್ರಕ್ಕೆ ಹಿಂದೂ ನಾಯಕನಾಗಲು ಸಾಧ್ಯವಿಲ್ಲ- RSS ಮುಖ್ಯಸ್ಥ ಮೋಹನ್ ಭಗವತ್ ಶಾ ಕಿಂಗ್ ಸ್ಟೇಟ್ಮೆಂಟ್

Hindu neighbor gifts plot of land

Hindu neighbour gifts land to Muslim journalist

Mohan Bhagwat: ರಾಮಮಂದಿರ ಕಟ್ಟಿದ ತಕ್ಷಣ ಆತ ಹಿಂದೂ ನಾಯಕನಾಗಲು ಸಾಧ್ಯವಿಲ್ಲ ಎಂದು ಆರ್‌ಎಸ್‌ ಎಸ್ ಸರಸಂಗ ಚಾಲಕ ಮೋಹನ್ ಭಾಗವತ್(Bhagwat)ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ(PM Modi)ಯವರನ್ನು ಪರೋಕ್ಷವಾಗಿ ಕುಟುಕಿದರೆ ಎಂಬ ಪ್ರಶ್ನೆ ಎದುರಾಗಿದೆ.

ಪುಣೆ ನಗರದಲ್ಲಿ ನಡೆದ ವಿಶ್ವಗುರು ಭಾರತ್ ಎಂಬ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಳಿಕ, ಹೊಸ ಮಂದಿರ-ಮಸೀದಿ ವಿವಾದಗಳನ್ನು ಉದ್ದೇಶಪೂರ್ವಕವಾಗಿ ಹುಟ್ಟುಹಾಕಲಾಗುತ್ತಿದೆ. ಇಂತಹ ವಿವಾದಗಳನ್ನು ಸೃಷ್ಟಿಸುವ ಮೂಲಕ ಕೆಲವರು ತಾವು ಹಿಂದೂ ನಾಯಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದರಿಂದ ಸಮಾಜಕ್ಕಾಗುವ ಹಾನಿಯನ್ನು ನಾವು ಅರಿಯಬೇಕಿದೆ. ಅಲ್ಲದೆ ರಾಮಮಂದಿರ ಕಟ್ಟುವ ಮೂಲಕ ಹಿಂದೂ ನಾಯಕನಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಜೊತೆಗೆ ನಾವು ದೀರ್ಘ ಕಾಲದಿಂದ ಸೌಹಾರ್ದತೆಯಿಂದ ಬದುಕಿದವರು. ಒಂದು ವೇಳೆ ನಾವು ಜಗತ್ತಿಗೆ ಸೌಹಾರ್ದತೆಯ ಕೊಡುಗೆಯನ್ನು ರವಾನಿಸಬೇಕಿದ್ದರೆ, ನಾವು ಮೊದಲು ಅದನ್ನು ಅನುಸರಿಸಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರ ದೇಶದ ವಿವಿಧ ಭಾಗಗಳಲ್ಲಿ ಇಂತಹದ್ದೇ ವಿವಾದಗಳನ್ನು ಕೆದಕುವ ಮೂಲಕ ತಾವು ಹಿಂದೂ ಮುಖಂಡರಾಗಬಹುದು ಎಂದು ಕೆಲವು ಜನರು ಭಾವಿಸಿಕೊಂಡಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಅಲ್ಲದೆ ಯಾವುದೇ ರಾಜಕೀಯ ಪ್ರೇರಣೆಗೆ ಒಳಗಾಗದೇ ಸಮಸ್ತ ಹಿಂದೂಗಳ ನಂಬಿಕೆಯ ಪ್ರತೀಕವಾಗಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲಾಗಿದೆ” ಎಂದು ಭಾಗ್ವತ್‌ ಹೇಳಿದರು.