Home News Mohan Bhagavat : ಭಾರತ ಜಾತಿ ಮುಕ್ತವಾದರೆ ಹಿಂದೂ ಸಮಾಜದ ಐಕ್ಯತೆ ಸಾಧ್ಯ – RSS...

Mohan Bhagavat : ಭಾರತ ಜಾತಿ ಮುಕ್ತವಾದರೆ ಹಿಂದೂ ಸಮಾಜದ ಐಕ್ಯತೆ ಸಾಧ್ಯ – RSS ಮುಖ್ಯಸ್ಥ ಮೋಹನ್​ ಭಾಗವತ್

Hindu neighbor gifts plot of land

Hindu neighbour gifts land to Muslim journalist

 

Mohan Bhagavat : ಸಮಾಜದಲ್ಲಿ ಯಾರೂ ಮೇಲಲ್ಲ, ಯಾರು ಕೀಳಲ್ಲ, ಹೀಗಾಗಿ ಹಿಂದೂ ಸಮಾಜದ ಐಕ್ಯತೆಗೆ ಜಾತಿ ಮುಕ್ತ ಭಾರತವೇ ದಾರಿಯಾಗಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತವರು ಹೇಳಿಕೆ ನೀಡಿದ್ದಾರೆ.

ಹೌದು, ಭಾರತದಲ್ಲಿ ಪ್ರತಿಯೊಬ್ಬರು ಜಾತಿಯ ಅಹಂ ಬಿಟ್ಟರೆ ಮುಂದಿನ 10 ರಿಂದ 12 ವರ್ಷಗಳಲ್ಲಿ ಜಾತಿ ತಾರತಮ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ್ ಮೋಹನ್ ಭಾಗವತ್( Mohan Bhagwat) ಭವಿಷ್ಯ ನುಡಿದಿದ್ದಾರೆ.

ಕೇವಲ ಶಾಸನ ಅಥವಾ ರಾಜಕೀಯ ಘೋಷಣೆಗಳ ಮೂಲಕ ಸಾಮಾಜಿಕ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ. ಅದಕ್ಕೆ ಭಾರತೀಯ ಮನಸ್ಸಿನಲ್ಲಿ ಮೂಲಭೂತ ಬದಲಾವಣೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಜಾತಿ ಆಕಾಶದಿಂದ ಬಿದ್ದದ್ದಲ್ಲ, ಅದು ನಾವೇ ಸೃಷ್ಟಿಸಿಕೊಂಡ ವ್ಯವಸ್ಥೆ, ಅದು ಈಗ ತಾರತಮ್ಯದ ಸಂಕೋಲೆಯಾಗಿ ಮಾರ್ಪಟ್ಟಿದೆ. ಇದನ್ನು ಬೇರುಸಹಿತ ಕಿತ್ತುಹಾಕಲು, ನಾವು ಮೊದಲು ನಮ್ಮ ಆಲೋಚನೆಗಳಿಂದ ಉನ್ನತ ಮತ್ತು ಕೀಳು ಎಂಬ ಕಲ್ಪನೆಯನ್ನು ಶುದ್ಧೀಕರಿಸಬೇಕು. ಸಾಮಾಜಿಕ ಸಾಮರಸ್ಯದ ಆರ್‌ಎಸ್‌ಎಸ್ ದೃಷ್ಟಿಕೋನವು ಜಾತಿಯನ್ನು ಲೆಕ್ಕಿಸದೆ ಎಲ್ಲಾ ಹಿಂದೂಗಳಿಗೆ ಒಂದು ದೇವಾಲಯ, ಒಂದು ನೀರಿನ ಮೂಲ ಮತ್ತು ಒಂದು ಸ್ಮಶಾನದ ತತ್ವವನ್ನು ಆಧರಿಸಿದೆ ಎಂದು ಭಾಗವತ್ ಪುನರುಚ್ಚರಿಸಿದ್ದಾರೆ.