

Modi Retirement: ಬಿಜೆಪಿಯಲ್ಲಿ 75 ವರ್ಷ ದಾಟಿದ ಮೇಲೆ ರಾಜಕೀಯ ನಿವೃತ್ತಿ ಘೋಷಿಸಲಾಗುತ್ತದೆ. ಇದು ಆರ್‌ಎಸ್‌ಎಸ್ ನಿಯಮ. ಇದೀಗ ಪ್ರಧಾನಿ ನರೇಂದ್ರ ಮೋದಿ 75ನೇ ವರ್ಷಕ್ಕೆ ಸದ್ಯದರಲ್ಲೇ ಕಾಲಿಡಲಿದ್ದಾರೆ. ಹಾಗಾದರೆ ಅವರು ನಿವೃತ್ತಿ ಘೋಷಿಸುತ್ತಾರಾ..? ಈ ನಿಯಮಕ್ಕೆ ಮೋದಿಯವರು ಬದ್ದರಾಗಿರುತ್ತಾರಾ..? ಆದರೆ ಒಂದು ವೇಳೆ ಅವರು ನಿವೃತ್ತಿ ಘೋಷಿಸದಿದ್ದರೆ, ಬೇರೆ ರೀತಿಯಲ್ಲಿ ಕುರ್ಚಿ ಕಳೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅವರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿ “ಮೋದಿಯವರು ಆರ್‌ಎಸ್‌ಎಸ್ ಪ್ರಚಾರಕನ ಸಂಸ್ಕಾರಕ್ಕೆ ಬದ್ಧರಾಗಿ ತಮ್ಮ 75ನೇ ವರ್ಷದ ಹುಟ್ಟು ಹಬ್ಬದ ನಂತರ ಅಂದರೆ ಇದೇ ಬರುವ ಸೆಪ್ಟೆಂಬರ್ 17 ರಂದು ನಿವೃತ್ತಿ ಘೋಷಿಸಬೇಕು. ಇಲ್ಲವಾದರೆ ಬೇರೆ ಮಾರ್ಗಗಳ ಮುಖಾಂತರ ತಮ್ಮ ಪ್ರಧಾನಿ ಕುರ್ಚಿಯನ್ನು ಕಳೆದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 17,1950 ರಂದು ಹುಟ್ಟಿದರು. ಇದೇ ಬರುವ ಸೆಪ್ಟೆಂಬರ್ 17, 2024ಕ್ಕೆ 74 ವರ್ಷ ಪೂರ್ಣಗೊಂಡು 75ನೇ ವರ್ಷಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಆದರೆ ಕಳೆದ ಮೇ ತಿಂಗಳ ಚುನಾವಣೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ಪ್ರಧಾನಿ ನರೇಂದ್ರ ಮೋದಿ 75 ವರ್ಷ ತುಂಬಿದರು ಅವರೇ ಪ್ರಧಾನ ಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಹಾಗೂ ಅವರ ನಾಯಕತ್ವದಲ್ಲೇ ಈ ದೇಶವನ್ನು ಮುನ್ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದರು.













