Home News MLC Bhojegowda: JDS ಗೆ ಶಾಕ್ ನೀಡಿದ ಹೆಚ್.​ಡಿ ಕುಮಾರಸ್ವಾಮಿ ಆಪ್ತ ಬೋಜೇಗೌಡ ! ಕಾಂಗ್ರೆಸ್​ಗೆ...

MLC Bhojegowda: JDS ಗೆ ಶಾಕ್ ನೀಡಿದ ಹೆಚ್.​ಡಿ ಕುಮಾರಸ್ವಾಮಿ ಆಪ್ತ ಬೋಜೇಗೌಡ ! ಕಾಂಗ್ರೆಸ್​ಗೆ ಬೆಂಬಲಿಸಿ ಎನ್ನುವ ವಿಡಿಯೋ ವೈರಲ್ !

Hindu neighbor gifts plot of land

Hindu neighbour gifts land to Muslim journalist

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy)ಅವರ ಆಪ್ತರಲ್ಲಿ ಪರಮಾಪ್ತರಾಗಿರುವ, ಒಂದು ಲೆಕ್ಕದಲ್ಲಿ ಕುಮಾರಸ್ವಾಮಿ ಅವರ ಬಲಗೈ ಬಂಟ ಆಜಿರುವ ಎಂಎಲ್​ಸಿ ಎಸ್​ಎಲ್​ ಭೋಜೇಗೌಡರು (SL Bhojegowda) ಜೆಡಿಎಸ್​ಗೆ ಶಾಕ್ ನೀಡಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ JDS ಅಭ್ಯರ್ಥಿ ಇದ್ದರೂ ಕಾಂಗ್ರೆಸ್ ಅಭ್ಯರ್ಥಿಯನ್ನು (Congress Candidate) ಬೆಂಬಲಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ(Social Media) ವೈರಲ್ ಆಗಿದೆ.

ಹೌದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಕಣದಲ್ಲಿದ್ದಾರೂ ಕ್ಷೇತ್ರದ (Chikkamagaluru Constituency) ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯ ಅವರಿಗೆ ಮತ ಹಾಕುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ರೈಟ್ ಹ್ಯಾಂಡ್ ಹಾಗೂ ಅವರ ರಾಜಕೀಯ ಕಾರ್ಯದರ್ಶಿ ಆಗಿರುವ MLC ಭೋಜೇಗೌಡರು ಕರೆ ನೀಡಿ ಇದ್ದಕ್ಕಿದ್ದಂತೆ ಜೆಡಿಎಸ್ ಗೆ ಶಾಕ್ ನೀಡಿದ್ದಾರೆ.

ಅಂದಹಾಗೆ ಬಿಜೆಪಿ ಶಾಸಕ ಸಿ.ಟಿ.ರವಿ (BJP MLA CT Ravi) ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ತೆರೆಯ ಹಿಂದೆ ಒಂದಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಬೋಜೇಗೌಡರು ಹೀಗೆ ಹೇಳಿದ್ದಾರೇನೋ ಈ ಗುಮಾನಿ ಮೂಡಿದೆ. ಇನ್ನು ವೈರಲ್ ಆದ ವಿಡಿಯೋದಲ್ಲಿ ಭೋಜೇಗೌಡ ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದಾರೆ ಇದರಲ್ಲಿ. ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯನ ಪರ ಬ್ಯಾಟಿಂಗ್ ಬೀಸಿದ ಅವರು, ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಕರೆ ನೀಡಿದ್ದಾರೆ. ಈ ಬಾರಿ ನೀವೆಲ್ಲಾ ಸೇರಿ ಕಾಂಗ್ರೆಸ್‍ಗೆ ವೋಟ್ ಹಾಕಬೇಕು. ಇದು ಒಂದು ಬಾರಿ ಈ ರೀತಿ ಮಾಡಿ ಎಂದು ಹೇಳಿದ್ದಾರೆ.

ಸದ್ಯ ಜೆಡಿಎಸ್ ಮಾಸ್ ಲೀಡರ್ ಎಚ್ ಡಿ ಕುಮಾರಸ್ವಾಮಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವಾಗ ಅವರ ಆಪ್ತ ವಲಯದಲ್ಲಿಯೇ ಈ ರೀತಿಯ ಬೆಳವಣಿಗೆಗಳು ನಡೆದಿದ್ದು ಇದರ ಸುತ್ತ ಅನುಮಾನದ ಹುತ್ತವೂ ಎದ್ದಿದೆ. ಶತಾಯಗತಾಯ ಸಿಟಿ ರವಿಯನ್ನು ಮುಗಿಸಲು ಈಗಾಗಲೇ ಪ್ಲಾನ್ ಆಗಿದೆ. ಹಾಗಾಗಿ ಅವರು ಇನ್ಸ್ಟ್ರಕ್ಷನ್ ಕೊಡುತ್ತಿದ್ದಾರೆ, ವಿನಃ ಪಕ್ಷ ವಿರೋಧಿ ನಡವಳಿಕೆ ಅಲ್ಲ ಅನ್ನುತ್ತಿದೆ ಒಂದು ವರದಿ.