Home News Mini Miss World Competition: ಮಿನಿ ವಿಶ್ವ ಸುಂದರಿ ಕಿರೀಟ ಬಾಚಿಕೊಂಡ ಹುಬ್ಬಳ್ಳಿ ಬ್ಯೂಟಿ ಶೃತಿ...

Mini Miss World Competition: ಮಿನಿ ವಿಶ್ವ ಸುಂದರಿ ಕಿರೀಟ ಬಾಚಿಕೊಂಡ ಹುಬ್ಬಳ್ಳಿ ಬ್ಯೂಟಿ ಶೃತಿ ಹೆಗಡೆ!

Mini Miss World Competition

Hindu neighbor gifts plot of land

Hindu neighbour gifts land to Muslim journalist

Mini Miss World Competition: ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ ಹುಬ್ಬಳ್ಳಿಯ ಯುವತಿ ಶೃತಿ ಹೆಗಡೆ ಅವರು ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಮಿನಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ (Mini Miss World Competition)  ಭಾಗವಹಿಸಿ ವಿಜೇತರಾಗಿದ್ದಾರೆ. ಇದೊಂದು ಭಾರತಕ್ಕೆ ಹೆಮ್ಮೆಯ ವಿಚಾರವು ಹೌದು.

Karthik Mahesh: ʼಡೆವಿಲ್‌ʼ ಸಿನಿಮಾದಲ್ಲಿ ಕಾರ್ತಿಕ್‌ ನಟಿಸುತ್ತಿದ್ದಾರಾ?

ಶೃತಿ ಹೆಗಡೆ ಸಾಧನೆ ಅಪಾರವಾದುದು, ಇವರು ಭರತನಾಟ್ಯ ಕಲಾವಿದೆಯೂ ಆಗಿದ್ದು, ಕೆಲವು ಧಾರಾವಾಹಿ, ಕನ್ನಡ ಚಲನಚಿತ್ರ, ವೆಬ್ ಸಿರೀಸ್‌ನಲ್ಲಿ ನಟಿಸಿದ್ದಾರೆ. ಅಲ್ಲದೇ ಈಗಾಗಲೇ 2018ರಲ್ಲಿ ಮಿಸ್ ಕರ್ನಾಟಕ ರನ್ನರ್‌ ಅಪ್, ಮಿಸ್ ಸೌತ್ ಇಂಡಿಯಾ ವಿಜೇತೆಯಾಗಿದ್ದ ಈಕೆ 2023ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದ ಶೃತಿ ಹೆಗಡೆ ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಮಿನಿ ವಿಶ್ವ ಸುಂದರಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೂಲತಃ ಅಮೆರಿಕದ ಪ್ಲೋರಿಡಾದಲ್ಲಿ ಕಳೆದ ಜೂ. 6ರಿಂದ 10ರ ವರೆಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ 40 ದೇಶಗಳ ಸುಂದರಿಯರು ಪೈಪೋಟಿಯು ರಾಷ್ಟ್ರೀಯ ಉಡುಗೆ, ಈಜು ಉಡುಗೆ, ಪ್ರಶೋತ್ತರ, ವೈಯಕ್ತಿಕ ಸಂದರ್ಶನ ಮೊದಲಾದ ವಿಭಾಗಳಲ್ಲಿ ಸ್ಪರ್ಧೆ ನಡೆದಿತ್ತು. ಈ ಎಲ್ಲಾ ಸವಾಲುಗಳನ್ನ ಗೆದ್ದು ಕಿರೀಟವನ್ನು  ಶ್ರುತಿ ಹೆಗಡೆ ತಮ್ಮದಾಗಿಸಿಕೊಂಡಿದ್ದಾರೆ.

ಪ್ರಸ್ತುತ, ಮುಂಡಿಗೆಸರ ಅಷ್ಟೊರಮನೆ ಕುಟುಂಬದವರಾದ ಕೃಷ್ಣ ಹೆಗಡೆ, ಕಮಲಾ ದಂಪತಿಯ ಪುತ್ರಿ ಆಗಿರುವ ಶೃತಿ ಹೆಗಡೆ ಹುಬ್ಬಳ್ಳಿಯಲ್ಲಿ ಎಂಬಿಬಿಎಸ್ ಪೂರೈಸಿದ್ದು, ತುಮಕೂರಿನಲ್ಲಿ ಎಂಡಿ ಅಧ್ಯಯನ ನಡೆಸುತ್ತಿದ್ದಾರೆ.

Dharmasthala: ಯುವತಿ ಆತ್ಮಹತ್ಯೆ