Home News Milk: ರಾಜ್ಯವ್ಯಾಪಿ ನಾಳೆ, ನಾಡಿದ್ದು ಹಾಲು, ಬೇಕರಿ ಮಾರಾಟ ಬಂದ್‌

Milk: ರಾಜ್ಯವ್ಯಾಪಿ ನಾಳೆ, ನಾಡಿದ್ದು ಹಾಲು, ಬೇಕರಿ ಮಾರಾಟ ಬಂದ್‌

Recycle spoiled milk
Image Source: Twitter

Hindu neighbor gifts plot of land

Hindu neighbour gifts land to Muslim journalist

Bangalore: ಯುಪಿಐ ಮೂಲಕ ಮಿತಿಗಿಂತ ಹೆಚ್ಚಿನ ಹಣ ಸ್ವೀಕರಿಸಿದ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿ ಮಾಡುವಂತೆ ನೀಡಿರುವ ನೋಟಿಸ್‌ ಮಂಗಳವಾರ ಹಿಂಪಡೆಯದಿದ್ದರೆ ಜು.23 ರಿಂದ ಎರಡು ದಿನ ರಾಜ್ಯವ್ಯಾಪಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್‌ ಮಾಡಲಾಗುವುದು. ಜು 25 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಎಚ್ಚರಿಕೆ ನೀಡಿದೆ.

ʼಎಲ್ಲ ಸಣ್ಣ ವ್ಯಾಪಾರಿ, ಅಂಗಡಿಗಳ ಮಾಲೀಕರು ಜು.23, 24ರಂದು ಹಾಲು, ಬೇಕರಿ ಉತ್ಪನ್ನ, ಬೀಡಿ, ಸಿಗರೇಟು ಮಾರಾಟ ಬಂದ್ ಮಾಡಲಿದ್ದಾರೆ. ಕಾರ್ಮಿಕರೂ ಕೂಡ ಕಪ್ಪುಪಟ್ಟಿ ಧರಿಸಿ ಹಾಲು, ಕಾಫಿ, ಚಹಾ, ಬೇಕರಿ ಉತ್ಪನ್ನ ಮಾರಾಟ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಹೇಳಿದ್ದಾರೆ.