Home News ಬಿಸಿ ಮಾಡುತ್ತಲೇ ಚ್ಯೂಯಿಂಗ್ ಗಮ್‌ನಂತಾದ ಡೈರಿ ಹಾಲು !! | ರಬ್ಬರ್ ನಂತೆ ಕಾಣುವ ಹಾಲಿನ...

ಬಿಸಿ ಮಾಡುತ್ತಲೇ ಚ್ಯೂಯಿಂಗ್ ಗಮ್‌ನಂತಾದ ಡೈರಿ ಹಾಲು !! | ರಬ್ಬರ್ ನಂತೆ ಕಾಣುವ ಹಾಲಿನ ಶಾಕಿಂಗ್ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವೀಡಿಯೋಗಳು ತುಂಬಾ ವೈರಲ್ ಹಾಗೂ ಶಾಕಿಂಗ್ ಆಗಿರುತ್ತದೆ. ಅಂತೆಯೇ ಇಲ್ಲಿ ಕುದಿಸಿದ ಹಾಲು ಚ್ಯೂಯಿಂಗ್ ಗಮ್‌ನಂತೆ ಕಾಣುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮಹಿಳೆಯು ಗ್ಯಾಸ್ ಮೇಲೆ ಇರಿಸಲಾದ ಪಾತ್ರೆಯನ್ನು ತೆಗೆದು ಅದರಿಂದ ಹೆಪ್ಪುಗಟ್ಟಿದ ಹಾಲನ್ನು ಹೊರತೆಗೆದಾಗ, ಅದು ರಬ್ಬರ್‌ನಂತೆ ಹಿಗ್ಗುತ್ತಿದೆ ಮತ್ತು ಚೂಯಿಂಗ್ ಗಮ್‌ನಂತೆ ಕಾಣುತ್ತದೆ.

ಈ ವೀಡಿಯೋ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಹೊರಹೊಮ್ಮಿದೆ. ಭೋಪಾಲ್‌ನ ಅಶೋಕ ಗಾರ್ಡನ್ ಪ್ರದೇಶದ ಮಹಿಳೆಯೊಬ್ಬರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಲು ಕಾದ ಬಳಿಕ ಒಡೆದಿರುವುದು ವೀಡಿಯೋದಲ್ಲಿ ಕಂಡು ಬರುತ್ತದೆ. ಹಾಲು ಒಡೆದ ನಂತರವೂ, ಹೆಚ್ಚಿನ ಸಂದರ್ಭಗಳಲ್ಲಿ, ಅದನ್ನು ಮಲಾಯಿ ರೀತಿಯಲ್ಲಿ ಬಳಸಿ ತಿನ್ನಬಹುದು. ಇದನ್ನೇ ಗಮನದಲ್ಲಿಟ್ಟುಕೊಂಡು ಮಹಿಳೆ ಪಾತ್ರೆಯಲ್ಲಿ ಕೈ ಹಾಕಿ ಒಡೆದ ಹಾಲನ್ನು ತೆಗೆಯಲು ಯತ್ನಿಸಿದ್ದಾಳೆ.

ಪಾತ್ರೆಯಿಂದ ಒಡೆದ ಹಾಲನ್ನು ಹೊರೆ ತೆಗೆದ ಮಹಿಳೆಗೆ ಆಶ್ಚರ್ಯ ಕಾದಿತ್ತು. ಒಡೆದ ಹಾಲು ರಬ್ಬರ್‌ನಂತೆ ಮಾರ್ಪಟ್ಟು ಚ್ಯೂಯಿಂಗ್ ಗಮ್‌ನಂತೆ ಕಾಣತೊಡಗಿತು. ಮಹಿಳೆಯು ಈ ಹಾಲನ್ನು ರಬ್ಬರ್‌ನಂತೆ ಹಿಗ್ಗಿಸುತ್ತಿರುವುದು ನೀವು ವೀಡಿಯೋದಲ್ಲಿ ನೋಡಬಹುದು.

ಮಹಿಳೆ ಮನೆ ಪಕ್ಕದ ಡೈರಿಯಿಂದ ಹಾಲನ್ನು ಖರೀದಿಸುತ್ತಿದ್ದರು. ಅದನ್ನು ಸಡಿಲವಾದ ಪಾಲಿಥಿನ್‌ನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಕೆ ಅದೇ ಡೈರಿಯ ಹಾಲನ್ನು ಬಹಳ ದಿನಗಳಿಂದ ಬಳಸುತ್ತಿದ್ದಳು. ಹಾಲು ಒಡೆದ ನಂತರ ಈ ರೀತಿಯಾಗಿ ಪರಿಶೀಲಿಸಿದ್ದು, ಅವರ ಲಕ್ ಎಂದೇ ಹೇಳಬಹುದು.

ಆಹಾರ ಇಲಾಖೆ ತಂಡ ಡೈರಿಯಿಂದ ಸ್ಯಾಂಪಲ್ ವಶಪಡಿಸಿಕೊಂಡಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಆಹಾರ ಇಲಾಖೆಯ ತಂಡವು ಡೈರಿಯಿಂದ ಹಾಲಿನ ಮಾದರಿಗಳನ್ನು ವಶಪಡಿಸಿಕೊಂಡಿದೆ. ಈ ಹಾಲನ್ನು ಹೇಗೆ ತಯಾರಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಆಹಾರ ಇಲಾಖೆ ಇದೀಗ ಮುಂದಾಗಿದೆ.