Home News ಡಾ. ನಾನಾ ಸಾಹೇಬ್ ಧರ್ಮಧಿಕಾರಿ ಪ್ರತಿಷ್ಠಾನದ ಸುಮಾರು 150 ಶ್ರೀ ಸದಸ್ಯರಿಂದ ಕುಳೂರುನಿಂದ ಕಾವೂರ್ 3-5ಕಿ...

ಡಾ. ನಾನಾ ಸಾಹೇಬ್ ಧರ್ಮಧಿಕಾರಿ ಪ್ರತಿಷ್ಠಾನದ ಸುಮಾರು 150 ಶ್ರೀ ಸದಸ್ಯರಿಂದ ಕುಳೂರುನಿಂದ ಕಾವೂರ್ 3-5ಕಿ ಮಿ ಹೆದ್ದಾರಿ ಯಲ್ಲಿ ಸ್ವಚ್ಚತಾ ಅಭಿಯಾನ; 6 ರಿಂದ 7 ಟನ್ ಒಣ ತ್ಯಾಜ್ಯದ ಶೇಖರಣೆ!

Hindu neighbor gifts plot of land

Hindu neighbour gifts land to Muslim journalist

ಮಾರ್ಚ್ 2 ರಂದು ಪ್ರತಿಷ್ಟಾನದ ಸ್ಥಾಪಕರಾದ ಡಾ. ನಾನಾ ಸಾಹೇಬ್ ಧರ್ಮಾಧಿಕಾರಿಯವರ ಹುಟ್ಟು ಹಬ್ಬದಪ್ರಯುಕ್ತ ಪದ್ಮಶ್ರೀ ಅಪ್ಪ ಸಾಹೇಬ್ ಧರ್ಮಧಿಕಾರಿ ಅವರ ಮಾರ್ಗದರ್ಶನದಲ್ಲಿ ಭಾರತ ದೇಶದದ್ಯಂತ ಹಮ್ಮಿಕೊಳ್ಳಲಾದ ಸ್ವಚ್ಛತಾ ಅಭಿಯಾನ 2025ನ್ನು ಉಡುಪಿ ಮತ್ತು ಮಂಗಳೂರು ವಿಭಾಗದ 150 ಶ್ರೀ ಸದಸ್ಯರು ಕುಳೂರ್ ಹೆದ್ದಾರಿ ಸೇತುವೆ ಬಸ್ ಸ್ಟಾಂಡ್ ಬಳಿಯಿಂದ ಪ್ರಾರಂಭಿಸಿ ಕಾವೂರ್ ರಸ್ತೆಯ 3-5 ಕಿ ಮೀ ಅಂತರದ ತ್ಯಾಜ್ಯ ಹೆಕ್ಕಿ ಸ್ವಚ್ಚಗೊಳಿಸಿದರು. ಬೆಳಿಗ್ಗೆ 7 ಗಂಟೆ ಗೆ 150 ಸದಸ್ಯರ ಗುಂಪು ರಸ್ತೆಯ ನಾಲ್ಕು ಭಾಗದಲ್ಲಿ ತ್ಯಾಜ್ಯ ತೆಗೆಯಲು ಪ್ರಾರಂಭ ಮಾಡಿ ಮದ್ಯಾಹ್ನ 11 ಗಂಟೆ ಗೆ 6ರಿಂದ 7 ಟನ್ ತ್ಯಾಜ್ಯ ಸಂಗ್ರಹಿಸಿ ಶಿಸ್ತು ಬದ್ದವಾಗಿ ಸೇವೆ ಮಾಡಿದರು.

ಈ ಭೂಮಿಯ ಋಣ ಮನುಷ್ಯ ರಾಧಾ ನಮ್ಮ ಮೇಲೆ ಇರುದರಿಂದ ಮಣ್ಣನ್ನು, ನೀರನ್ನು, ಗಾಳಿಯನ್ನು ಮತ್ತು ಹಸಿರನ್ನು ಕಾಪಾಡುವುದು ಮಾನವೀ ಧರ್ಮವಾಗಿದೆ. ನಾವು ಎಷ್ಟೇ ಆದುನಿಕ ಮತ್ತು ತಾಂತ್ರಿಕ ಬದುಕು ಮಾಡುತ್ತಿದ್ದರು. ಪೃಕ್ರತಿಯ ಸೇವೆ ಆಗಲೇ ಬೇಕು. ಈ ಬಗ್ಗೆ ಪ್ರತಿಷ್ಟಾನವು ಹಲವಾರು ದಶಕಗಳಿಂದ ಹಲವಾರು ಸಾಮಾಜಿಕವಾಗಿ ಕಾರ್ಯಕ್ರಮಗಳ ಅಭಿಯಾನ ಮಾಡುತ್ತಿದೆ. ಈಗಾಗಲೇ ಪ್ರತಿಷ್ಠಾನಕ್ಕೆ ರಾಷ್ಟ್ರಿಯ ಮತ್ತು ಅಂತರಾಷ್ಟ್ರಿಯ (ಪದ್ಮಶ್ರೀ, ಲಿಮಿಕ) ಪುರಸ್ಕಾರಗಳು ಬಂದಿವೆ. ಸಾಮಾಜಿಕ ಪಿಡುಗುಗಳ ಅಖಂಡ ಚಿಂತನೆ ಮಾಡುತ್ತಿರುವ ಪ್ರತಿಷ್ಠಾನ ಕೋಟ್ಯಂತರ ಜನರಿಗೆ ಮಾನವ ನೀತಿ ಮೂಲ್ಯಗಳ ಅಧ್ಯಾತ್ಮಿಕ ಶಿಕ್ಷಣ ಪ್ರಪಂಚದಾದ್ಯಂತ ನೀಡುತ್ತಿದ್ದು ಮಂಗಳೂರು ಭಾಗದಲ್ಲೂ ಸುಮಾರು 250 ಕ್ಕೂ ಹೆಚ್ಚು ಸ್ತ್ರೀ, ಪುರುಷರು ಮತ್ತು ಮಕ್ಕಳು ಭಾಗವಹಿಸುತ್ತಾರೆ.

ಎಲ್ಲರಿಗೂ ಸಾಮಾಜಿಕವಾಗಿ ಮಾದರಿ ಕಾರ್ಯಕ್ರಮಗಳು ತಮ್ಮ ಸದಸ್ಯರ ಮೂಲಕ ಮಾಡಿಸುತ್ತಿದ್ದು, ಎಲ್ಲರೂ ಭಾಗವಹಿಸಿ ಸಮಾಧಾನದ ಬದುಕು ಸಾಗಿಸಬೇಕೆಂದು ಪ್ರತಿಷ್ಠಾನದ ಉದ್ದೇಶವಾಗಿದೆ. ನಾನು ಸ್ವಚ್ಚವಾಗಿ ಬದುಕಬೇಕು. ಪರಿಸರವನ್ನು ಸ್ವಚ್ಚವಾಗಿ ಇಡಬೇಕು ಎಂಬ ದ್ಯೇಯದೊಂದಿಗೆ ಎಲ್ಲರೂ ಸ್ವಚ್ಛವಾಗಿರಿ ಎಂದು ಪ್ರತಿಷ್ಠಾನದ ಶ್ರೀ ಸದಸ್ಯ ಸಂತೋಷ್ ಶೆಟ್ಟಿಗಾರ್ ಪ್ರಾಸ್ತವಿಕವಾಗಿ ಸಂಸ್ಥೆಯ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಳೂರ್ ವಾರ್ಡ್‌ನ ಮಹಾನಗರ ಪಾಲಿಕ ಸದಸ್ಯ ಅನಿಲ್ ಕುಮಾರ್ ಪೂಜಾರಿ ಮಾನವ ಬದುಕಿಗೆ ಮಾರ್ಗದರ್ಶನ ಮಾಡುತ್ತಿರುವ ಮಹಾನ್ ಸಂತ ಡಾ ನಾನಾ ಸಾಹೇಬ್ ಪ್ರತಿಷ್ಠಾನ ಮತ್ತು ಸ್ವಚ್ಛತೆ ಸೇವೆ ಮಾಡಿದ ಶ್ರೀ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ತ್ಯಾಜ್ಯ ಸಾಗಿಸಲು ಬೇಕಾದ ವಾಹನದ ವ್ಯವಸ್ಥೆಯನ್ನು ಮಾಡಿದ ಅನಿಲ್ ಕುಮಾರ್ ಪೂಜರಿ, ಎಲ್ಲರಿಗೂ ನಿಲ್ಲಲು ಸ್ಥಳವಕಾಶ ಮತ್ತು ಊಟ ಉಪಹಾರದ ವ್ಯವಸ್ಥೆ ಮಾಡಿದ ಉದ್ಯಮಿ ಅಶೋಕ್ ಶೆಟ್ಟಿ ಮತ್ತು ಶ್ರೀ ಬಿಲ್ಡರ್ ಮಾಲಕ ಗಿರೀಶ್ ಶೆಟ್ಟಿ, ಸಮಾಜ ಸೇವಕ ಚಂದ್ರಹಾಸ್ ಶೆಟ್ಟಿ ಮತ್ತು ಸ್ವಚ್ಛತಾ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ಮತ್ತು ಸಹಕಾರ ಮಾಡಿದ ನಾಗಪ್ಪ ಪೂಜಾರಿ ಇವರೆಲ್ಲರಿಗೂ ಪ್ರತಿಷ್ಠಾನವು ವೇದಿಕೆಯಲ್ಲಿ ಗುರುತಿಸಿ ಕೃತಜ್ಞತೆ ಸಲ್ಲಿಸಿದರು.