Home News ವಿಕಲಚೇತನರಿಗೆ 2022-23 ನೇ ಸಾಲಿನ ಆರೋಗ್ಯ ವಿಮಾ ಸೌಲಭ್ಯ | ಅರ್ಜಿ ಸಲ್ಲಿಸಲು ಕೊನೆ ದಿನ-ಜ.20

ವಿಕಲಚೇತನರಿಗೆ 2022-23 ನೇ ಸಾಲಿನ ಆರೋಗ್ಯ ವಿಮಾ ಸೌಲಭ್ಯ | ಅರ್ಜಿ ಸಲ್ಲಿಸಲು ಕೊನೆ ದಿನ-ಜ.20

Female medicine doctor hand holding silver pen writing something on clipboard closeup. Medical care, insurance, prescription, paper work or career concept. Physician ready to examine patient and help

Hindu neighbor gifts plot of land

Hindu neighbour gifts land to Muslim journalist

ವಿಕಲಚೇತನರಿಗೆ ನಿರಾಮಯ ಆರೋಗ್ಯ ವಿಮಾ ಯೋಜನೆಯಡಿ ವೈದ್ಯಕೀಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ವಿಕಲಚೇತನರು 2022-23 ನೇ ಸಾಲಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೇಂದ್ರ ಸರ್ಕಾರದ ನ್ಯಾಷನಲ್ ಟ್ರಸ್ಟ್ ಆಕ್ಟ್-1999ರಡಿಯಲ್ಲಿ ಈ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ 04 ಬಗೆಯ ವಿಕಲಚೇತನರಿಗೆ (ಬುದ್ದಿಮಾಂದ್ಯ, ಸೆರಬ್ರಲ್ ಪಾಲ್ಸಿ, ಆಟಿಸಂ ಮತ್ತು ಬಹುವಿಧ ಅಂಗವಿಕಲರು) ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ (ಎಂ.ಆರ್.ಡಬ್ಲ್ಯೂ) ಸಂಖ್ಯೆಗಳಾದ ಶಿವಮೊಗ್ಗ ತಾಲ್ಲೂಕು ಮಲ್ಲಿಕಾರ್ಜುನ 9980150110, ಭದ್ರಾವತಿ ದಿನೇಶ್ 7899137243, ಶಿಕಾರಿಪುರ ಹುಚ್ಚರಾಯಪ್ಪ 9741161346, ತೀರ್ಥಹಳ್ಳಿ ದಿವಾಕರ 9480767638, ಸಾಗರ ಶ್ಯಾಮಸುಂದರ 9535247757, ಸೊರಬ ಭರತ್ 9110493122, ಹೊಸನಗರ ರವಿಕುಮಾರ್ 9731922693 ಇವರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಪ್ರಥಮ ಬಾರಿ ಒಂದು ಸಲ ವಾರ್ಷಿಕ ರೂ.1,00,000/-ಗಳ ವರೆಗೆ ವೈದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲ ಜ.20 ಕಡೆಯ ದಿನವಾಗಿದೆ.