Home News Marriage: 20ಕ್ಕೂ ಹೆಚ್ಚು ವಿಧವೆಯರ ಜೊತೆಗೆ ಮದುವೆ! ಶ್ರೀಮಂತಿಕೆಯ ಆಸೆಗೆ ಇಲ್ಲೊಬ್ಬನ ಖತರ್ನಾಕ್ ಪ್ಲಾನ್!

Marriage: 20ಕ್ಕೂ ಹೆಚ್ಚು ವಿಧವೆಯರ ಜೊತೆಗೆ ಮದುವೆ! ಶ್ರೀಮಂತಿಕೆಯ ಆಸೆಗೆ ಇಲ್ಲೊಬ್ಬನ ಖತರ್ನಾಕ್ ಪ್ಲಾನ್!

Hindu neighbor gifts plot of land

Hindu neighbour gifts land to Muslim journalist

Marriage: ಇಲ್ಲೊಬ್ಬ ಖತರ್ನಾಕ್ ಬೇಗ ಶ್ರೀಮಂತನಾಗಬೇಕು ಎಂದು ಸುಲಭ ದಾರಿಯಲ್ಲಿ ಹಣ ಗಳಿಸಲು ವಿಧವೆ ಮತ್ತು ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ, ಅವರನ್ನು ಮದುವೆಯಾಗಿ ಕೊನೆಗೆ ಚಿನ್ನ, ಹಣ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ. ಹೀಗೆ 9 ವರ್ಷದಲ್ಲಿ 20 ಕ್ಕೂ ಹೆಚ್ಚು ಮಹಿಳೆಯನ್ನು ಮದುವೆಯಾಗಿ (Marriage) ಯಾಮಾರಿಸಿದ ಈ ಖತರ್ನಾಕ್‌ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಈ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ನಡೆದಿದ್ದು, 43 ವರ್ಷ ವಯಸ್ಸಿನ ಫಿರೋಜ್‌ ನಿಯಾಜ್‌ ಶೇಖ್‌ ಎಂಬಾತ ಮ್ಯಾಟ್ರಿಮೋನಿಯಲ್‌ ಸೈಟ್‌ಗಳಲ್ಲಿ ವಿಧವೆ ಮತ್ತು ವಿಚ್ಛೇದಿತ ಮಹಿಳೆಯರನ್ನು ಟಾರ್ಗೆಟ್‌ ಮಾಡಿ, ಅವರೊಂದಿಗೆ ಸ್ನೇಹ ಬೆಳೆಸಿ ಮದುವೆಯಾಗಿ, ಕೆಲ ದಿನಗಳ ಬಳಿಕ ನಂಬಿಕೆ ಗಳಿಸಿ ಹಣ, ಚಿನ್ನ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ. ಹೀಗೆ ಈತ 9 ವರ್ಷದಲ್ಲಿ 20 ಮಹಿಳೆಯರಿಗೆ ವಂಚನೆ ಮಾಡಿದ್ದಾನೆ.

ಮಹಾರಾಷ್ಟ್ರದ ನಲಸೋಪಾರ ಮೂಲದ ಮಹಿಳೆಯೊಬ್ಬರಿಗೂ ಕೂಡಾ ಇದೇ ರೀತಿ ಈತ ವಂಚನೆ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ, ಐಫೋನ್ ಮತ್ತು ಚಿನ್ನ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ. ಆ ಮಹಿಳೆ ತನಗಾದ ವಂಚನೆಯ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿದ್ದು, ದೂರಿನ ಆಧಾರದ ಮೇರೆಗೆ MBVV ಪೊಲೀಸರು ಆತನನ್ನು ಜುಲೈ 23 ರಂದು ಬಂಧಿಸಿದ್ದಾರೆ.

ವಿಚಾರಣೆಯ ವೇಳೆ ಆರೋಪಿ 2015 ರಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್‌ ಸೇರಿದಂತೆ ವಿವಿಧ ರಾಜ್ಯದ ಸುಮಾರು 20 ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ ಮಾಡಿದ ಸತ್ಯ ಬಯಲಾಗಿದ್ದು, ಇದೀಗ ಆರೋಪಿಯಿಂದ ಲ್ಯಾಪ್‌ಟಾಪ್‌, ಮೊಬೈಲ್‌, ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌, ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.