Home News Youtuber Mukaleppa: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದುವೆ: ಯೂಟ್ಯೂಬರ್‌ ಮುಕಳೆಪ್ಪ ವಿರುದ್ಧ...

Youtuber Mukaleppa: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದುವೆ: ಯೂಟ್ಯೂಬರ್‌ ಮುಕಳೆಪ್ಪ ವಿರುದ್ಧ FIR

Hindu neighbor gifts plot of land

Hindu neighbour gifts land to Muslim journalist

Youtuber Mukaleppa: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಮದುವೆಯಾದ ಕನ್ನಡದ ಖ್ಯಾತ ಯೂಟ್ಯೂಬರ್‌ ಕ್ವಾಜಾ ಶಿರಹಟ್ಟಿ ಅಲಿಯಾಸ್‌ ಮುಕಳೆಪ್ಪ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಯುವತಿಯ ಹೆತ್ತವರು, ಹಿಂದೂಪರ ಸಂಘಟನೆಗಳ ಜೊತೆಗೆ ಠಾಣೆಗೆ ಆಗಮಿಸಿ ಮುಕಳೆಪ್ಪ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲು ಮಾಡಿದ್ದಾರೆ.

ಮುಕಳೆಪ್ಪ ರೀಲ್ಸ್‌ ಮಾಡುವ ನೆಪದಲ್ಲಿ ಮದುವೆ ಸಮಾರಂಭದ ವೇದಿಕೆ ಸಿದ್ಧಪಡಿಸಿ, ನಾಲ್ಕು ತಿಂಗಳ ಹಿಂದೆ ನಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಅದು ರೀಲ್ಸ್‌ ಎಂದಿದ್ದ ಮುಕುಳೆಪ್ಪ, ಈಗ ಇದು ನಿಜ ಮದುವೆ ಎಂದು ಹೇಳುತ್ತಿದ್ದಾನೆ. ಇದು ಸುಳ್ಳು ಮದುವೆ, ನಮ್ಮ ಮಗಳನ್ನು ವಾಪಸ್‌ ಕೊಡಿ ಎಂದು ಕೇಳಿದ್ದಕ್ಕೆ ಧಮ್ಕಿ ಹಾಕುತ್ತಿದ್ದಾನೆ. ಮುಕಳೆಪ್ಪನನ್ನು ಕೂಡಲೇ ಬಂಧನ ಮಾಡಿ, ನಮ್ಮ ಮಗಳನ್ನು ವಾಪಸ್‌ ಕಳುಹಿಸಿಕೊಡಿ ಎಂದು ಯುವತಿಯ ಹೆತ್ತವರು ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:IOCL Recruitment 2025: ನಿಮಗೆ ಲಕ್ಷಗಳಲ್ಲಿ ಸಂಬಳ ಬೇಕಾದರೆ, ತಕ್ಷಣ ಈ ನೇಮಕಾತಿಗೆ ಅರ್ಜಿ ಸಲ್ಲಿಸಿ

ಪೊಲೀಸರು ಜೀವ ಬೆದರಿಕೆ, ಅಪಹರಣ ಪ್ರಕರಣವನ್ನು ದಾಖಲು ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ.