Home News ವಿವಾಹ ಜಾಲತಾಣದಲ್ಲಿ ಹೆಸರು ನೋಂದಾಯಿಸಿದ ಆನ್ ಲೈನ್ ವರನಿಂದ ಬ್ಲಾಕ್ ಮೇಲ್!!ನೊಂದ ಯುವತಿಯಿಂದ ಪೊಲೀಸರಿಗೆ ದೂರು-ಆರೋಪಿಯ...

ವಿವಾಹ ಜಾಲತಾಣದಲ್ಲಿ ಹೆಸರು ನೋಂದಾಯಿಸಿದ ಆನ್ ಲೈನ್ ವರನಿಂದ ಬ್ಲಾಕ್ ಮೇಲ್!!
ನೊಂದ ಯುವತಿಯಿಂದ ಪೊಲೀಸರಿಗೆ ದೂರು-ಆರೋಪಿಯ ಬಂಧನ

Hindu neighbor gifts plot of land

Hindu neighbour gifts land to Muslim journalist

ವೈವಾಹಿಕ ಜಾಲತಾಣವೊಂದರಲ್ಲಿ ಮದುವೆಗೆ ಹುಡುಗಿ ಬೇಕೆಂದು ಹೆಸರು ನೋಂದಾಯಿಸಿ, ಸಿಕ್ಕಿದ ಹುಡುಗಿಯೊಂದಿಗೆ ಕಾಲ ಕಳೆದು ಆಕೆಯ ಖಾಸಗಿ ಕ್ಷಣಗಳ ಫೋಟೋ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ ವರನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧಿತ ಆರೋಪಿಯನ್ನು ರಾಜಾಜಿನಗರದ ನಿವಾಸಿ ವಿಜಯ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಮದುವೆಗಾಗಿ ಹೆಸರು ನೋಂದಾಯಿಸಿ ಯುವತಿಯೊಬ್ಬಳ ಪರಿಚಯ ಮಾಡಿಕೊಂಡಿದ್ದ.

ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಂಡು ಮದುವೆಯಾಗಲು ನಿರ್ಧರಿಸಿದ್ದು, ಇಬ್ಬರ ಮಧ್ಯೆ ಸಲುಗೆ ಬೆಳೆದಿದೆ. ಯುವತಿಯ ಖಾಸಗಿ ಕ್ಷಣದ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪಿ ಆಕೆಯಿಂದ 50000 ಹಣವನ್ನು ಪೀಕಿಸಿದ್ದ.

ಇದಾದ ಬಳಿಕ ಮತ್ತೊಮ್ಮೆ ಬ್ಲಾಕ್ ಮೇಲ್ ಮಾಡಿದಲ್ಲದೇ, ಹಣಕ್ಕಾಗಿ ಬೇಡಿಕೆ ಇಟ್ಟಾಗ ಯುವತಿಯು ಪೊಲೀಸರ ಮೊರೆ ಹೋಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.