

ಲಾತೂರ್: ಮಂಗಳಮುಖಿಯರು ತಮ್ಮದೇ ಸ್ವಂತ ನೆರವಿನಿಂದ ಬಡ ಕುಟುಂಬದ ಹೆಣ್ಣು ಮಗಳೊಬ್ಬಳ ಮದುವೆ ಕಾರ್ಯ ನೆರವೇರಿಸಿದ್ದು,ಎಲ್ಲಾ ಖರ್ಚು ವೆಚ್ಚಗಳ ಪೂರೈಸಿ ನಡೆಸಿದ ಅದ್ದೂರಿ ಮದುವೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಲಾತೂರ್ ನ ಮಾತಾಜಿ ನಗರದ ಪ್ರದೇಶವೊಂದರಲ್ಲಿ ದಿನಗೂಲಿ ನೌಕರಿ ನಡೆಸುತ್ತಿರುವ ವ್ಯಕ್ತಿಯೊಬ್ಬರ ಪುತ್ರಿಯ ವಿವಾಹಕ್ಕೆ ದಿನ ಕೂಡಿ ಬಂದಿತ್ತು.ಆದರೆ ಬದಕುಟುಂಬದ ಆರ್ಥಿಕ ಸಂಕಷ್ಟ ಮದುವೆಗೆ ಅಡ್ಡಿ ಪಡಿಸಿದ ಸಂದರ್ಭ, ಈ ವಿಚಾರವು ಅದೇ ಪರಿಸರದ ಮಂಗಳಮುಖಿಯೊಬ್ಬರ ಗಮನಕ್ಕೆ ಬಂದಾಗ ಅವರು ತನ್ನ ಸಂಗಡಿಗರೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದರು.
ಅದರಂತೆ ಯುವತಿಯ ಮದುವೆಗೆ ಬೇಕಾದ ಎಲ್ಲಾ ಖರ್ಚು ವೆಚ್ಚಗಳನ್ನು ತಮ್ಮ ಹಣದಿಂದಲೇ ಪೂರೈಸಿ ಇತರರಿಗೆ ಮಾದರಿಯಾಗಿದ್ದಲ್ಲದೆ, ಮದುವೆಗೆ ಸಹಾಯ ಧಾರೆ ಎರೆದ ಪುಣ್ಯದ ಕಾರ್ಯಕ್ಕೆ ಮೆಚ್ಚುಗೆಗಳಿಸಿಕೊಂಡಿದ್ದಾರೆ.













