Home News ಜನಿವಾರ ವಾರ್‌: ಭೌತ -ರಸಾಯನಶಾಸ್ತ್ರ ಅಂಕ ಆಧರಿಸಿ ಗಣಿತಕ್ಕೆ ಮಾರ್ಕ್ಸ್‌- ಸುಚಿವ್ರತ್ ಕುಲಕರ್ಣಿ ಒಪ್ಪಿಗೆ

ಜನಿವಾರ ವಾರ್‌: ಭೌತ -ರಸಾಯನಶಾಸ್ತ್ರ ಅಂಕ ಆಧರಿಸಿ ಗಣಿತಕ್ಕೆ ಮಾರ್ಕ್ಸ್‌- ಸುಚಿವ್ರತ್ ಕುಲಕರ್ಣಿ ಒಪ್ಪಿಗೆ

Hindu neighbor gifts plot of land

Hindu neighbour gifts land to Muslim journalist

Bidar: ಜನಿವಾರ ಧರಿಸಿ ಬಂದುದಕ್ಕೆ ಸಿಇಟಿ ಪರೀಕ್ಷೆಯಿಂದ (CET) ವಂಚಿತನಾಗಿದ್ದ ಬೀದರಿನ ಸುಚಿವ್ರತ್ ಕುಲಕರ್ಣಿ ಭೌತಶಾಸ್ತ್ರ (Physics) ಮತ್ತು ರಸಾಯನಶಾಸ್ತ್ರ (Chemistry) ವಿಷಯದ ಸರಾಸರಿ ಅಂಕಗಳನ್ನು ಆಧಾರವಾಗಿ ಪರಿಗಣಿಸಿ ಗಣಿತ ಅಂಕ ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ರಿಗೆ ಪತ್ರ ಬರೆದಿದ್ದಾನೆ.

ಸುಚಿವ್ರತ್ ಗೆ ಉನ್ನತ ಶಿಕ್ಷಣ ಇಲಾಖೆ ಎರಡು ಆಯ್ಕೆಗಳನ್ನು ನೀಡಿತ್ತು. ಆತನಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಅಥವಾ ಹಾಲಿ ಬರೆದಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಗಣಿತ ವಿಷಯಕ್ಕೆ ಅಂಕ ನಿಗದಿ ಮಾಡುವ ಆಯ್ಕೆ ನೀಡಿತ್ತು. ಈ ಆಯ್ಕೆಗಳ ಪೈಕಿ ಸುಚಿವ್ರತ್ ಎರಡನೇ ಆಯ್ಕೆಯನ್ನು ಆರಿಸಿಕೊಂಡಿದ್ದು, ತಾನು ಈಗಾಗಲೇ ಬರೆದ ರಸಾಯನ ಮತ್ತು ಭೌತಶಾಸ್ತ್ರದ ಅಂಕಗಳ ಆವರೇಜ್ ಮೇಲೆ ಮಾರ್ಕು ನೀಡಲು ಒಪ್ಪಿಕೊಂಡಿದ್ದಾನೆ.