Home News Karnataka Bandh: ಮಾ. 22 ಕರ್ನಾಟಕ ಬಂದ್, ಶಾಲಾ-ಕಾಲೇಜುಗಳಿಗೆ ಇದೆಯಾ ರಜೆ?

Karnataka Bandh: ಮಾ. 22 ಕರ್ನಾಟಕ ಬಂದ್, ಶಾಲಾ-ಕಾಲೇಜುಗಳಿಗೆ ಇದೆಯಾ ರಜೆ?

Hindu neighbor gifts plot of land

Hindu neighbour gifts land to Muslim journalist

 

Karnataka Band: ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಹಾಗೂ ಕರ್ನಾಟಕ ಬಸ್ ಗಳು ಮತ್ತು ಸಿಬ್ಬಂದಿಗಳ ಮೇಲೆ ನಡೆಯುತ್ತಿರುವಂತಹ ನಿರಂತರ ದಬ್ಬಾಳಿಕೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು, ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಮಾರ್ಚ್ 22ರಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದಿಗೆ ಕರೆ ನೀಡಲಾಗಿದೆ. ಈ ದಿನ ಶಾಲೆಗಳಿಗೆ ರಜೆ ಇರುತ್ತದೆಯ ಎಂಬುದು ಇದೀಗ ಹುಟ್ಟಿಕೊಂಡ ಪ್ರಶ್ನೆ. ಇಲ್ಲಿದೆ ನೋಡಿ ಉತ್ತರ.

 

ಈಗಾಗಲೇ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಕರೆ ನೀಡಿದ ಬೆನ್ನಲ್ಲೇ ಭಾರಿ ಬೆಂಬಲ ವ್ಯಕ್ತವಾಗಿದೆ. ಆಟೋ ಸಂಘಟನೆಗಳು ಕೂಡಾ ಬಂದ್‌ಗೆ ಬೆಂಬಲ ನೀಡಿದೆ. ಸರ್ಕಾರಿ ಸಾರಿಗೆಗಳು ರೋಡಿಗೆ ಇಳಿಯಬಾರದು ಎಂದೂ ಕರೆ ನೀಡಲಾಗಿದೆ. ಆದ್ದರಿಂದ ಬಂದ್‌ ದಿನ ಸಾರಿಗೆ ಸೌಲಭ್ಯವೂ ಸಿಗೋದು ಬಹುತೇಕ ಡೌಟ್ ಎಂದು ಹೇಳಲಾಗಿದೆ.

 

ಶಾಲಾ- ಕಾಲೇಜುಗಳಿಗೆ ರಜೆ ಇರುತ್ತಾ?

ಮಾರ್ಚ್ 22 ರಂದು ಕರ್ನಾಟಕ ಬಂದ್ ನಡೆಯಲಿದ್ದು, ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಗಳು ತೆರೆದಿರುತ್ತವೆಯೇ ಅಥವಾ ಆ ದಿನ ಮುಚ್ಚುತ್ತವೆಯೇ ಎಂದು ಯೋಜನೆಯಲ್ಲಿ ಇದ್ದಾರೆ. ಆದರೆಶಾ ಲಾ-ಕಾಲೇಜುಗಳು ಓಪನ್ ಇರುತ್ತಾ? ಇಲ್ವಾ? ಎಂದು ಸ್ಷಷ್ಟನೆ ಇಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಡಿಸಬಹುದು.

 

ಇನ್ನೂ ಕರ್ನಾಟಕ ಬಂದ್ ದಿನ ಶಾಲೆಯನ್ನು ಮಚ್ಚುವ ಬಗ್ಗೆ ಅನೇಕ ಶಾಲೆಗಳು ‘ಕಾದು ನೋಡಿ’ ಎಂಬ ವಿಧಾನವನ್ನು ಅಳವಡಿಸಿಕೊಳ್ಳುತ್ತಿವೆ. ಕೆಲವು ಸಂಸ್ಥೆಗಳು ಆನ್‌ಲೈನ್ ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಅಡಚಣೆಯನ್ನು ಕಡಿಮೆ ಮಾಡಲು ಆಂತರಿಕ ಮೌಲ್ಯಮಾಪನಗಳನ್ನು ಮರು ನಿಗದಿಪಡಿಸಬಹುದು