Home News Manu Bhakar: ಒಲಂಪಿಕ್ಸ್ ನಲ್ಲಿ ಡಬಲ್ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್ ಗೆ ಬಂಪರ್...

Manu Bhakar: ಒಲಂಪಿಕ್ಸ್ ನಲ್ಲಿ ಡಬಲ್ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್ ಗೆ ಬಂಪರ್ ಆಫರ್ – ಹಿಂದೆ ಬಿದ್ದ 40 ಬ್ರಾಂಡ್ ಕಂಪೆನಿಗಳು

Hindu neighbor gifts plot of land

Hindu neighbour gifts land to Muslim journalist

Manu Bhakar: ಪ್ಯಾರಿಸ್‌ ಒಲಿಂಪಿಕ್ಸ್(Paris Olympic) ಕ್ರೀಡಾಕೂಟದಲ್ಲಿ ಎರಡು ಪದಕ ಗೆದ್ದ ಭಾರತದ ಮಹಿಳಾ ಶೂಟರ್ ಮನು ಭಾಕರ್ ಅವರ ಬ್ರ್ಯಾಂಡ್ ಮೌಲ್ಯ ಗಣನೀಯವಾಗಿ ಹೆಚ್ಚಾಗಿದೆ. ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳು ಮನು ಅವರನ್ನು ತಮ್ಮ ಬ್ರ್ಯಾಂಡ್‌ ಅಂಬಾಸಿಡರ್‌ ಮಾಡಿಕೊಳ್ಳಲು ಸಂಪರ್ಕಿಸಿವೆ ಎಂಬ ಮಾಹಿತಿ ದೊರೆತಿದೆ.

ಹೌದು, ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮುನ್ನ ಮನು ಭಾಕರ್‌ ಅವರ ಬ್ರ್ಯಾಂಡ್‌ ಮೌಲ್ಯವು 20-25 ಲಕ್ಷ ರೂ.ನಷ್ಟಿತ್ತು. ಆದರೀಗ 6-7 ಪಟ್ಟು ಮೌಲ್ಯ ಹೆಚ್ಚಾಗಿದೆ ಎಂದು ಹೇಳಲಾಗಿದೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympic 2024) ಎರಡು ಪದಕ ಗೆದ್ದು ದಾಖಲೆ ಬರೆದಿರುವ ಭಾರತದ ಮನು ಭಾಕರ್‌ಗೆ (Manu Bhaker) ಸುಮಾರು 40 ಜಾಹೀರಾತು ಕಂಪನಿಗಳು (Advertising Companies) ಅವರನ್ನು ಸಂಪರ್ಕಿಸಿವೆ, ಕೋಟಿ ಕೋಟಿ ರೂ. ಮೌಲ್ಯದ ಒಂದೆರಡು ಒಪ್ಪಂದಗಳು ಸಹ ಮುಗಿದಿವೆ ಎನ್ನಲಾಗಿದೆ.

22 ವರ್ಷ ವಯಸ್ಸಿನಲ್ಲಿ ಮನು ಭಾಕರ್‌ ಅವರಿಗೆ ಸದ್ಯ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಒಲಿದಿದ್ದು, 3ನೇ ಪದಕ ಕೊಂಚದಲ್ಲೇ ಕೈತಪ್ಪಿದೆ. ಹೀಗಿರುವಾಗಲೇ ಕಳೆದ 2-3 ದಿನಗಳಲ್ಲಿ ಸುಮಾರು 40 ಬ್ರ್ಯಾಂಡ್‌ ಕಂಪನಿಗಳು ಅವರನ್ನ ಸಂಪರ್ಕಿಸಿ ಅನುಮೋದನೆ ಕೇಳಿವೆ. ಒಂದೆರಡು ಕಂಪನಿಗಳ ಒಪ್ಪಂದಗಳು ಮುಕ್ತಾಯಗೊಂಡಿದ್ದು, ಉಳಿದ ಕಂಪನಿಗಳು ಅವರ ದೀರ್ಘಾವಧಿ ಹಾಗೂ ಅಲ್ಪಾವಧಿ ಕಾಂಟ್ರ್ಯಾಕ್ಟ್‌ಗೆ ಅನುಮೋದನೆ ಪಡೆಯಲು ಕಾಯುತ್ತಿವೆ ಎಂದು ಸ್ಫೋರ್ಟ್ಸ್‌ & ಎಂಟರ್‌ಟೈನ್‌ಮೆಂಟ್ ಕಂಪನಿ ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ.

12 ಕೋಟಿ ರೂ ಮೌಲ್ಯದ ಆಸ್ತಿ:
2024ರ ಮಾಹಿತಿ ಪ್ರಕಾರ, ಮನು ಭಾಕರ್ ಒಟ್ಟು ನಿವ್ವಳ ಆಸ್ತಿ ಮೌಲ್ಯ 12 ಕೋಟಿ ರೂ. ಎಂಬ ಮಾಹಿತಿ ಇದೆ. ಪರ್ಫಾರ್ಮ್ಯಾಕ್ಸ್, ನಥಿಂಗ್ ಇಂಡಿಯಾ, ಪಂದ್ಯಾವಳಿಗಳಿಂದ ಬಂದ ಹಣ, ಬಹುಮಾನದ ಹಣ, ಒಪ್ಪಂದ ಮತ್ತು ಪ್ರಾಯೋಜಕತ್ವದಂತಹ ಬ್ರಾಂಡ್‌ಗಳನ್ನು ಪ್ರಚಾರ ಮಾಡುವ ಮೂಲಕ ಅವರು ತಮ್ಮ ನಿವ್ವಳ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆಂದು ವರದಿಯಾಗಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದಕ್ಕಾಗಿ ಹರ್ಯಾಣ ಸರ್ಕಾರವು ಕೆಲವು ವರ್ಷಗಳ ಹಿಂದೆ ಮನು ಬಾಕರ್‌ ಅವರಿಗೆ 2 ಕೋಟಿ ರೂ. ಬಹುಮಾನ ನೀಡಿತ್ತು. ಇವೆಲ್ಲವೂ ಸೇರಿ ಯುವ ಶೂಟರ್ ಮನು ಬಾಕರ್ ಆಸ್ತಿ ಮೌಲ್ಯ ಇದೀಗ 12 ಕೋಟಿ ರೂ ತಲುಪಿದೆ.