Home News Mantralayam: ರಾಯರ ಪರಿಮಳ ಪ್ರಸಾದಕ್ಕೆ ‘ನಂದಿನಿ ತುಪ್ಪ’ ವನ್ನು ಏಕೆ ತರಿಸಲ್ಲ ಗೊತ್ತಾ? ಶ್ರೀಗಳು ಹೇಳಿದ್ದೇನು?

Mantralayam: ರಾಯರ ಪರಿಮಳ ಪ್ರಸಾದಕ್ಕೆ ‘ನಂದಿನಿ ತುಪ್ಪ’ ವನ್ನು ಏಕೆ ತರಿಸಲ್ಲ ಗೊತ್ತಾ? ಶ್ರೀಗಳು ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

Mantralaya: ವಿಶ್ವ ವಿಖ್ಯಾತ ತಿರಪತಿ ತಿಮ್ಮಪ್ಪನ ಲಡ್ಡು(Tirupati Laddu) ಪ್ರಸಾದಕ್ಕೆ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿದ ಆರೋಪ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಬೆನ್ನಲ್ಲೇ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಿಮಳ ಪ್ರಸಾದ ತಯಾರಿಕೆಗೆ ತುಪ್ಪ ಎಲ್ಲಿಂದ ಸಪ್ಲೇ ಆಗುತ್ತೆ ಎಂಬುದರ ಬಗ್ಗೆ ಶ್ರೀಗಳು ಸ್ಪಷ್ಟೀಕರಣ ನೀಡಿದ್ದರು.

ಹೌದು, ದೇಶದ ಮತ್ತೊಂದು ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮಂತ್ರಾಲಯ(Mantralaya) ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪರಿಮಳ ಪ್ರಸಾದಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಮಂತ್ರಾಲಯದ (Mantralaya) ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Mutt) ಬಳಸುವ ತುಪ್ಪದ (Ghee) ಬಗ್ಗೆ ಮಂತ್ರಾಲಯ ಮಠಾಧೀಶ ಶ್ರೀ ಸುಭುದೇಂದ್ರ ತೀರ್ಥ ಶ್ರೀಗಳೇ (Subudhendra Teertha Swamiji) ಸ್ಪಷ್ಟನೆ ನೀಡಿದ್ದು, ರಾಘವೇಂದ್ರ ಸ್ವಾಮಿಗಳ ಪರಿಮಳ ಪ್ರಸಾದಕ್ಕೆ (Parimala Prasada) ಆಂಧ್ರದ ಕರ್ನೂಲ್ ಜಿಲ್ಲೆಯ ವಿಜಯಾ ಡೈರಿಯಿಂದ ತರಿಸ್ತೇವೆ ಎಂದು ಹೇಳಿದ್ದಾರೆ.

ನಂದಿನಿ ತುಪ್ಪ ಏಕೆ ಬಳಸಲ್ಲ?
ರಾಘವೇಂದ್ರ ಸ್ವಾಮಿಗಳ ಪರಿಮಳ ಪ್ರಸಾದಕ್ಕೆ (Parimala Prasada) ಆಂಧ್ರದ ಕರ್ನೂಲ್ ಜಿಲ್ಲೆಯ ವಿಜಯಾ ಡೈರಿಯಿಂದ ತರಿಸ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ನಂದಿನಿ ತುಪ್ಪ ಯಾಕೆ ಬಳಸಲ್ಲ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಿದ ಶ್ರೀಗಳು ಕೊರೊನಾಗೂ ಮುಂಚೆ ನಂದಿನಿ ಡೈರಿಯಿಂದಲೇ ತುಪ್ಪ ತರಿಸುತ್ತಿದ್ದೆವು. ಆದರೆ ಆ ಸಂದರ್ಭದಲ್ಲಿ ಎರಡೂ ರಾಜ್ಯಗಳಿಗೆ ಸಪ್ಲೈ ಮಾಡಲು ಕಷ್ಟಕರವಾಗಿತ್ತು. ಹೀಗಾಗಿ ಕರ್ನೂಲು ಜಿಲ್ಲೆಯ ವಿಜಯಾ ಡೈರಿಯಿಂದ ತುಪ್ಪ ತರಿಸ್ತೇವೆ. ಅದು ಕೂಡ ಪರಿಶುದ್ಧವಾಗಿದೆ ಎಂದು ಹೇಳಿದ್ದಾರೆ.