Home News ಮಂಗಳೂರಿನಲ್ಲಿ ಮತ್ತೆ ಕೇಳಿಸಿದ ಗುಂಡಿನ ಸದ್ದು!! ಸಂಬಳ ಕೇಳಲು ಬಂದಿದ್ದ ಕೆಲಸದಾಳುವಿಗೆ ಹೊಡೆದ ಗುಂಡು ಗುರಿ...

ಮಂಗಳೂರಿನಲ್ಲಿ ಮತ್ತೆ ಕೇಳಿಸಿದ ಗುಂಡಿನ ಸದ್ದು!! ಸಂಬಳ ಕೇಳಲು ಬಂದಿದ್ದ ಕೆಲಸದಾಳುವಿಗೆ ಹೊಡೆದ ಗುಂಡು ಗುರಿ ತಪ್ಪಿ ಮಗನಿಗೆ ದೇಹಕ್ಕೆ

Hindu neighbor gifts plot of land

Hindu neighbour gifts land to Muslim journalist

ಹಲವು ಸಮಯಗಳ ಮಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ.ಖ್ಯಾತ ಉದ್ಯಮಿಯೊಬ್ಬರು ಕೋಪದಲ್ಲಿ ಕೆಲಸದಾಳಿಗೆ ಹಾರಿಸಿದ ಗುಂಡು ತನ್ನ ಮಗನಿಗೇ ಬಿದ್ದಿರುವ ಘಟನೆ ನಗರದ ಮೋರ್ಗನ್ ಗೇಟ್ ಬಳಿ ಇಂದು ಸಂಭವಿಸಿದೆ.

ಘಟನೆ ವಿವರ: ಮಂಗಳೂರಿನ ವೈ ಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ.ಲಿ. ನ ಮೋರ್ಗನ್ ಗೇಟ್ ಕಚೇರಿಯಲ್ಲಿ ಈ ಗುಂಡಿನ ದಾಳಿ ಸಂಭವಿಸಿದ್ದು ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಸಂಬಳ ಕೇಳಲು ಬಂದಿದ್ದ ಕೆಲಸದಾಳುವಿಗೆ ಗುಂಡು ಹಾರಿಸಿದ್ದು,ಗುರಿ ತಪ್ಪಿ ತನ್ನ ಮಗನನ್ನು ಗುಂಡು ಸೀಳಿದೆ.

ಕೆಲಸದಾಳು ಸಂಬಳ ಕೇಳಲು ಬಂದಿದ್ದ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಜಗಳ ತಾರಕಕ್ಕೇರಿ ರಾಜೇಶ್ ಪ್ರಭು ತನ್ನ ಪಿಸ್ತೂಲ್ ತೆಗೆದು ಕೆಲಸದಾಳು ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾರೆ.ಈ ವೇಳೆ ಗುಂಡು ತಪ್ಪಿ ತನ್ನ ಮಗನ ಮೇಲೆ ಬಿದ್ದಿದೆ. ಕಚೇರಿ ಹೊರ ಭಾಗದಲ್ಲಿ ಘಟನೆ ನಡೆದಿದ್ದು ಮಗ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಸುಧೀಂದ್ರನ ತಲೆಯ ಭಾಗಕ್ಕೆ ಗುಂಡು ಬಿದ್ದು ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಸಂಬಳ ಕೇಳಲು ಬಂದಿದ್ದ ಕೆಲಸದಾಳು ಅಪಾಯದಿಂದ ಪಾರಾಗಿದ್ದಾನೆ.

ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಆಗಮಿಸಿದ್ದು,ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.