Home News Mangaluru : ಅಪರಿಚಿತ ಯುವಕನ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ !! ಯುವಕ ಸತ್ತಿದ್ದು ಹೇಗೆ?

Mangaluru : ಅಪರಿಚಿತ ಯುವಕನ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ !! ಯುವಕ ಸತ್ತಿದ್ದು ಹೇಗೆ?

Hindu neighbor gifts plot of land

Hindu neighbour gifts land to Muslim journalist

Mangaluru : ಮಂಗಳೂರಿನ ಕುಡುಪು ಬಳಿ ಅಪರಿಚಿತ ಯುವಕನ ಶವ ಪತ್ತೆಯಾಗಿ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು ‘ಆತನ ಸಾವಿಗೆ ನಶೆಯಿಂದ ಬಿದ್ದು ಗಾಯಗೊಂಡಿರುವುದು ಕಾರಣವಾಗಿರಬಹುದು ಅಥವಾ ಯಾರೊಂದಿಗೋ ಗಲಾಟೆ ಮಾಡಿ ಉರುಳಾಡಿ ಗಾಯಗೊಂಡು ಆತ ಸತ್ತಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ‘ಕ್ರಿಕೆಟ್ ಆಟ ಆಡುವ ಸಲುವಾಗಿ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಹಿಂಬದಿಯ ಮೈದಾನವನ್ನು ಸಂಪರ್ಕಿಸುವ ಮಣ್ಣು ರಸ್ತೆಯಲ್ಲಿ ಭಾನುವಾರ ಸಂಜೆ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು, ಯುವಕ ಅಂಗಾತನೆ ಬಿದ್ದುಕೊಂಡಿದ್ದುದು ಕಂಡಿದ್ದರು. ಅವರೇ ಯುವಕನ ಸಾವಿನ ಕುರಿತು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.