Home News Mangaluru: ಮಂಗಳೂರಿನಲ್ಲಿ ‘ಆಪಲ್ ಐ ಫೋನ್’ ವಿರುದ್ಧ ಬೃಹತ್ ಪ್ರತಿಭಟನೆ – ಕಂಪೆನಿ ವಿರುದ್ಧ ರೊಚ್ಚಿಗೆದ್ದು...

Mangaluru: ಮಂಗಳೂರಿನಲ್ಲಿ ‘ಆಪಲ್ ಐ ಫೋನ್’ ವಿರುದ್ಧ ಬೃಹತ್ ಪ್ರತಿಭಟನೆ – ಕಂಪೆನಿ ವಿರುದ್ಧ ರೊಚ್ಚಿಗೆದ್ದು ಬೀದಿಗಿಳಿದ ಗ್ರಾಹಕರು !!

Hindu neighbor gifts plot of land

Hindu neighbour gifts land to Muslim journalist

Mangaluru: ಆ್ಯಪಲ್ ಪೋನ್ ನಲ್ಲಿರುವ ಸಮಸ್ಯೆಗಳ ವಿರುದ್ದ ಇದೀಗ ಗ್ರಾಹಕರು ಕಂಗಾಲಾಗಿದ್ದು, ಆ್ಯಪಲ್ ಸರ್ವಿಸ್ ಸೆಂಟರ್ ನಲ್ಲಿ ಗ್ರಾಹಕರಿಗೆ ನೀಡುತ್ತಿರುವ ಕಿರುಕುಳ ವಿರೋಧಿಸಿ ಮಂಗಳೂರಿನಲ್ಲಿ(Mangaluru) ಗ್ರಾಹಕರು ರೊಚ್ಚಿಗೆದ್ದಿದ್ದು ಕಂಪೆನಿ ವಿರುದ್ದ ಬೀದಿಗಿಳಿದು ಬೃಹತ್ ಪ್ರತಿಭಟನೆಯನ್ನು ಮಾಡಿದ್ದಾರೆ.

ಹೌದು, ಸೆ 17 ಮಂಗಳವಾರದಂದು ಆಪಲ್ ಐ ಫೋನ್(Apple iphone) ಸರ್ವಿಸ್ ಸೆಂಟರ್ ವಿರುದ್ಧ ರಿಟೇಲರ್ ಹಾಗೂ ಗ್ರಾಹಕರ ಬೃಹತ್ ಪ್ರತಿಭಟನಾ ಜಾಥಾ ಜರುಗಿತು. ಜ್ಯೋತಿ ಸರ್ಕಲ್ ನಿಂದ ಆಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್ ನ ಎದುರುಗಡೆಯಿಂದ ಕ್ಲಾಕ್ ಟವರ್ ವರಗೆ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು ಕ್ಲಾಕ್ ಟವರ್ ಬಳಿ ತಮ್ಮ ಬೇಡಿಕೆಗಳನ್ನು ಕೂಡಲೇ ಪೂರೈಸುವಂತೆ ಸಂಸ್ಥೆಯನ್ನು ಆಗ್ರಹಿಸಿದ್ದಾರೆ.

ಅಸೋಸಿಯೇಶನ್ ಅವರ ಬೇಡಿಕೆಗಳೇನು:
* ಸಾಫ್ಟ್‌ವೇರ್ ಅಪ್ಲೇಟ್‌ನಿಂದ ಹಾನಿಗೊಂಡ ಡಿಸ್ಟ್ ಗಳ ಉಚಿತ ಬದಲಾವಣೆ….
* ಸ್ವತಂತ್ರ ಆಪಲ್ ಸೇವಾ ಕೇಂದ್ರಗಳು.
* ರಿಜಿಸ್ಟ್ರೇಷನ್ ಫೀಸ್ ವಸೂಲಿ ಮಾಡದಿರುವುದು.
* ಬಳಕೆದಾರರು ತಮ್ಮದೇ ಆದ ಸಾಧನಗಳನ್ನು ಸರಿಪಡಿಸಲು ಅಥವಾ ತೃತೀಯ ಪಾರ್ಟಿ ತಂತ್ರಜ್ಞರಿಂದ ಸರಿಪಡಿಸಲು ಅವಕಾಶವನ್ನು ಒದಗಿಸಬೇಕು.
* ಗ್ರಾಹಕರನ್ನು ಕಡೆಗಣನೆ ಮಾಡಬಾರದು

ಪ್ರತಿಭಟನೆ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಮತ್ತು ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಸಂಘಟನೆಯ ರಾಜ್ಯ ಸುದ್ದಿ ಮತ್ತು ಮಾಧ್ಯಮ ನಿರ್ವಾಹಕ ವಿವೇಕ್ ಜಿ ಸುವರ್ಣ ಅವರು “ಇದೇ ಮೊದಲ ಬಾರಿಗೆ ಸ್ಥಳೀಯ ರೀಟೇಲರ್ ಗಳು ತಮ್ಮ ಗ್ರಾಹಕರಿಗೋಸ್ಕರ ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಇದರಲ್ಲಿ ಹಲವು ನೊಂದ ಗ್ರಾಹಕರು ಪಾಲ್ಗೊಳ್ಳುತ್ತಿದ್ದಾರೆ. ಕಂಪೆನಿ ಸ್ಪಂದಿಸದೆ ಇದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದರು.