Home News Mangaluru: ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ: ಸ್ನೇಹಿತರನ್ನು ಕೊಲೆಗೈದವರಿಗೆ ಜೀವಾವಧಿ ಶಿಕ್ಷೆ!

Mangaluru: ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ: ಸ್ನೇಹಿತರನ್ನು ಕೊಲೆಗೈದವರಿಗೆ ಜೀವಾವಧಿ ಶಿಕ್ಷೆ!

Hindu neighbor gifts plot of land

Hindu neighbour gifts land to Muslim journalist

Mangaluru: ಹತ್ತು ವರ್ಷಗಳ ಹಿಂದೆ ಅತ್ತಾವರದ ಬಾಡಿಗೆ ಮನೆಯೊಂದರಲ್ಲಿ ನಡೆದ ಅವಳಿ ಕೊಲೆ ಪ್ರಕರಣದಲ್ಲಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ಆದೇಶ ಹೊರಡಿಸಿದೆ.

ಕೇರಳದ ತಲಶ್ಶೇರಿಯ ನಾಘೀರ್‌ (24) ಮತ್ತು ಕೋಯಿಕೋಡ್‌ ಫಹೀಮ್‌ (25) ಕೊಲೆಯಾದವರು.

ಕಾಸರಗೋಡು ಜಿಲ್ಲೆಯ ಚೆರ್ಕಳ ನಿವಾಸಿ ಮೊಹಮ್ಮದ್‌ ಮುಹಜೀರ್‌ ಸನಾಫ್‌ (25), ಕಾಸರಗೋಡು ವಿದ್ಯಾನಗರ ನಿವಾಸಿ ಮೊಹಮ್ಮದ್‌ ಇರ್ಶಾದ್‌ (24), ಕಾಸರಗೋಡು ವಿದ್ಯಾನಗರ ಬಳಿಯ ಅಣಂಗೂರು ನಿವಾಸಿ ಮೊಹಮ್ಮದ್‌ ಸಫ್ವಾನ್‌ (24) ಜೀವಾವಧಿ ಶಿಕ್ಷೆಗೆ ಒಳಗಾದವರು.