Home News Mangalore: ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ ಪಡೆದಿದ್ದ ಬಾಲಕಿ ನಿಧನ

Mangalore: ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ ಪಡೆದಿದ್ದ ಬಾಲಕಿ ನಿಧನ

Hindu neighbor gifts plot of land

Hindu neighbour gifts land to Muslim journalist

Mangalore: ಲಿಮ್ಕಾ ಬುಕ್‌ ದಾಖಲೆಯ ಪೂರ್ವಿ (7) ಅನಾರೋಗ್ಯದಿಂದ ಮಂಗಳೂರಿನಲ್ಲಿ ನಿಧನ ಹೊಂದಿದ್ದಾಳೆ. ಮಂಗಳೂರು ದ್ವಾರಕ ನಗರ ಕೊಟ್ಟಾರ ನಿವಾಸಿಗಳಾದ ಪುಷ್ಪರಾಜ್‌ ಎಸ್‌ ಕುಂದರ್‌, ವೈಶಾಲಿ ಎಲ್‌.ಬೆಂಗ್ರೆ ಅವರ ಪುತ್ರಿಯಾದ ಪೂರ್ವಿ 2019 ರಲ್ಲಿ ಒಂದು ನಿಮಿಷದಲ್ಲಿ ದಾಖಲೆಯ ರೈಮ್ಸ್‌ ಆಟವಾಡಿ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಹೆಸರು ಮಾಡಿದ್ದಳು.

ತನ್ನ ಬುದ್ಧಿವಂತಿಕೆಯಿಂದ, ಚುರುಕುತನದಿಂದ ಅತೀ ಸಣ್ಣ ಪ್ರಾಯದಲ್ಲೇ ಪೂರ್ವಿ ಫುಟ್‌ಬಾಲ್‌, ಭರತನಾಟ್ಯದಲ್ಲಿ ತನ್ನ ಅಮೋಘ ಸಾಮರ್ಥ್ಯವನ್ನು ಪ್ರದರ್ಶನ ಮಾಡಿದ್ದ ಪುಟ್ಟ ಬಾಲೆ ಜನರಿಂದ ಭಾರೀ ಮನ್ನಣೆಯನ್ನು ಗಳಿದ್ದಳು. ವಿವಿಧ ಸಂಘ ಸಂಸ್ಥೆಗಳ ಮೂಲಕ ಸನ್ಮಾನವನ್ನು ಪಡೆದುಕೊಂಡಿದ್ದ ಬಾಲೆ ಇದೀಗ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾಳೆ.

ಪೂರ್ವಿ ಗ್ರೀನ್‌ ವುಡ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಕಲಿಯುತ್ತಿದ್ದು, ಅನಾರೋಗ್ಯ ಉಂಟಾದಾಗ ಈಕೆಯನ್ನು ಆಕೆಯ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಪುಟ್ಟ ಬಾಲೆ ಪೂರ್ವಿ ನಿಧನಕ್ಕೆ ಬೆಂಗ್ರೆ ವಿದ್ಯಾರ್ಥಿ ಸಂಘ, ಸ್ಥಳೀಯ ಸಂಘ-ಸಂಸ್ಥೆಗಳು ಶೋ ವ್ಯಕ್ತಪಡಿಸಿದೆ.