Home latest ಹಣಕ್ಕಾಗಿ ಯುವತಿಗೆ ತಾಳಿ ಕಟ್ಟಿದ ಯುವಕ| ತಾನು ಮೋಸದ ಜಾಲಕ್ಕೆ ಬಿದ್ದೆ ಎಂದು ಅರಿಯದ ಯುವತಿ|

ಹಣಕ್ಕಾಗಿ ಯುವತಿಗೆ ತಾಳಿ ಕಟ್ಟಿದ ಯುವಕ| ತಾನು ಮೋಸದ ಜಾಲಕ್ಕೆ ಬಿದ್ದೆ ಎಂದು ಅರಿಯದ ಯುವತಿ|

Hindu neighbor gifts plot of land

Hindu neighbour gifts land to Muslim journalist

ಹಣಕ್ಕಾಗಿಯೇ ಕೆಲವರು ಮದುವೆ ಆಗುವುದನ್ನು ನಾವು ಕಂಡಿದ್ದೇವೆ. ಎಷ್ಟೊಂದು ಇಂಥ ಪ್ರಕರಣಗಳು ತುಂಬಾನೇ ನಡೆಯುತ್ತದೆ. ಆದರೂ ಕೆಲವರು ಇಂತಹ ಮೋಸಕ್ಕೆ ಬೀಳುತ್ತಾರೆ. ಮೋಸ ಮಾಡುವವರು ಇರುವವರೆಗೆ ಮೋಸ ಹೋಗುವವರೂ ಇರುತ್ತಾರೆ ಎನ್ನುವುದಕ್ಕೆ ಇದೊಂದು ಘಟನೆ ಕೂಡಾ ಕಾರಣವಾಗುತ್ತೆ.

ಇಲ್ಲೊಬ್ಬ ಯುವಕ ಹಣಕ್ಕಾಗಿ ಮದುವೆಯಾಗಿ ಒಂದು ಹುಡುಗಿಯ ಬಾಳನ್ನೇ ಹಾಳು ಮಾಡಿದ್ದಾನೆ. ಹುಡುಗಿ ಈಗ ತನಗೆ ಹಣ ಬೇಡ ಮದುವೆಯಾದ ಹುಡುಗನೊಂದಿಗೆ ಬಾಳು ಬೇಕು ಎಂದು ಕಣ್ಣೀರಿಡುತ್ತಿದ್ದಾಳೆ. ಹುಡುಗಿ ಬಳಿ ಲಕ್ಷಾಂತರ ರೂಪಾಯಿ ನಗದು ಹಣ, ಚಿನ್ನದ ಒಡವೆ ಇತ್ತು. ಈಕೆಯ ಹಣದ ಮೇಲೆ ಕಣ್ಣಿಟ್ಟ ಯುವಕನೊಬ್ಬ ಈಕೆಯನ್ನು ಪುಸಲಾಯಿಸಿ ಮದುವೆಯಾಗಿ ಹಣ ಒಡವೆ ಎಲ್ಲವನ್ನು ಲಪಟಾಯಿಸಿ ಕೈ ಕೊಟ್ಟಿದ್ದಾನೆ .

ಮೋಸ ಹೋದ ಯುವತಿಯ ಹೆಸರು ನದಿಯಾಬಾಯಿ. ತಮಿಳುನಾಡಿನ ತಿರುಪುರು ಬಳಿ ಟಿಶರ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಈಕೆಯ ತಾಯಿ ರಾಣಿಬಾಯಿ ಕಳೆದ ವರ್ಷ ಅಪಘಾತ ವೊಂದರಲ್ಲಿ ತೀರಿಕೊಂಡು ಈ ಸಂಬಂಧ ರಾಣಿಬಾಯಿ ಕುಟುಂಬಕ್ಕೆ 12 ಲಕ್ಷ ರೂಪಾಯಿ ಪರಿಹಾರ ಸಿಕ್ಕಿತ್ತು. ಈ ಹಣವೆಲ್ಲಾ ರಾಣಿಬಾಯಿ ಮಗಳು ನದಿಯಾಬಾಯಿ ಬಳಿ ಇತ್ತು.

ಈಕೆಯ ಬಳಿ ಇದ್ದ ಹಣ ಒಡವೆ ಹಾಗೂ ಪೂರ್ವಪರ ಎಲ್ಲವನ್ನು ಅರಿತಿದ್ದ ಮೂಕನಪಾಳ್ಯದವನೇ ಆದ ಚಲಪತಿ ಎಂಬ ಯುವಕ ಇನ್ಸಾಗ್ರಾಮ್ ನಲ್ಲಿ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಪರಿಚಯ ಪ್ರೀತಿ ಪ್ರೇಮಕ್ಕೆ ತಿರುಗಿದೆ. ಬಳಿಕ ಯಾರಿಗೂ ತಿಳಿಯದಂತೆ ಮದುವೆನೂ ಆಗಿದ್ದಾರೆ.

ಇನ್ನೊಂದು ವಿಷಯ ಏನೆಂದರೆ ಮದುವೆಗೂ ಮೊದಲೇ ಈಕೆಯನ್ನು ಗರ್ಬಿಣಿ ಮಾಡಿ ಅಬಾರ್ಷನ್ ಕೂಡಾ ಮಾಡಿಸಿದ್ದ ಎನ್ನಲಾಗಿದೆ. ನದಿಯಾಬಾಯಿಯನ್ನು ಮದುವೆಯಾಗಿ ತನ್ನ ಮನೆಗೆ ಕರೆದೊಯ್ದ ಚಲಪತಿ ಒಂದಷ್ಟು ದಿನ ಚನ್ನಾಗಿ ನೋಡಿಕೊಂಡು ಆಕೆ ಬಳಿ ಇದ್ದ ಹಣ ಒಡವೆ ಲಪಟಾಯಿಸಿದ್ದಾನೆ. ಬಳಿಕ ಇಲ್ಲ ಸಲ್ಲದ ಆರೋಪ ಹೊರಿಸಿ ಕಿರುಕುಳ ನೀಡಿ ಹೆಚ್.ಡಿ.ಕೋಟೆಯಲ್ಲಿರುವ ಈಕೆಯ ಸಂಬಂಧಿಕರ ಮನೆಗೆ ಕರದೊಯ್ದು ಕೈಕೊಟ್ಟಿದ್ದಾನೆ.

ಆವಾಗ ತಿಳಿಯಿತು ನದಿಯಾಬಾಯಿಗೆ ತಾನು ಮೋಸ ಹೋದ ಬಗ್ಗೆ. ನಂತರ ಸೋದರಮಾವನಿಗೆ ಕರೆ ಮಾಡಿ ಎಲ್ಲ ವಿಷಯ ತಿಳಿಸಿದ್ದಾಳೆ. ಆಕೆಯನ್ನು ಹೆಚ್.ಡಿ.ಕೋಟೆಯಿಂದ ಕರೆತಂದ ಸೋದರಮಾವ ಬಾಲಾಜಿ ನಾಯಕ, ನದಿಯಾಬಾಯಿಗೆ ನ್ಯಾಯ ಕೊಡಿಸುವಂತೆ ಚಾಮರಾಜನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.