Home News ಆನೆಯ ಹೊಟ್ಟೆಯ ಕೆಳಗೆ ತೂರಲು ಹೋಗಿ ಅಲ್ಲೇ ಸಿಕ್ಕಿಕೊಂಡ ಆಸಾಮಿ | ಹುಡುಗಾಟ ತಂದಿತ್ತು ಪ್ರಾಣ...

ಆನೆಯ ಹೊಟ್ಟೆಯ ಕೆಳಗೆ ತೂರಲು ಹೋಗಿ ಅಲ್ಲೇ ಸಿಕ್ಕಿಕೊಂಡ ಆಸಾಮಿ | ಹುಡುಗಾಟ ತಂದಿತ್ತು ಪ್ರಾಣ ಫಜೀತಿ!

Hindu neighbor gifts plot of land

Hindu neighbour gifts land to Muslim journalist

ವಿಚಿತ್ರ ಘಟನೆಯ ವಿಡಿಯೋವೊಂದು ಟ್ವಿಟರ್ ನಲ್ಲಿ ವೈರಲ್ ಆಗುತ್ತಿದೆ. ಆನೆಯ ಹೊಟ್ಟೆಯ ಕೆಳಗೆ ತೂರಲು ಹೋದ ವ್ಯಕ್ತಿಯೊಬ್ಬ, ಆ ದಢೂತಿ ಹೊಟ್ಟೆಯ ಕೆಳಕೆ ಸಿಲುಕಿಕೊಂಡು ಹಲವು ಗಂಟೆಗಳ ಕಾಲ ಪೇಚಿಗೆ ಪಾಚಿಟಿಗೆ ಸಿಕ್ಕ ಘಟನೆ ನಡೆದಿದೆ.

ದೇವಸ್ಥಾನಕ್ಕೆ ಆಗಮಿಸಿದಾಗ ಭಕ್ತಿಯಿಂದ ನಮಿಸಿ ನಡೆದುಕೊಳ್ಳುವುದು ಸಾಮಾನ್ಯ. ಅಲ್ಲೊಬ್ಬ ಬೇಜವಾಬ್ದಾರಿ ವ್ಯಕ್ತಿಗೆ ಅದ್ಯಾಕೋ ಈ ಹೊಸ ಸಾಹಸ ಮಾಡಲು ಮನಸ್ಸಾಗಿದೆ. ಗುಜರಾತಿನ ಒಂದು ದೇವಸ್ಥಾನದ ಆವರಣದಲ್ಲಿದ್ದ ಆನೆಯ ಕಲ್ಲಿನ ಪ್ರತಿಮೆಯೊಂದನ್ನು ಇಡಲಾಗಿತ್ತು. ಆತ ಅದ್ಯಾಕೆ ಹಾಗೆ ಮಾಡಿದನೋ ಗೊತ್ತಿಲ್ಲ: ದಢೂತಿ ಆನೆಯ ಮೂರ್ತಿಯ ಹೊಟ್ಟೆ ಕೆಳಗೆ ತೂರಲು ಹೋಗಿ ಅದರೊಳಗೆ ಸಿಲುಕಿ ಹಾಕಿಕೊಂಡಿದ್ದಾನೆ. ಕೊನೆಗೆ ಇದರಿಂದ ಹೊರ ಬರಲು ಸಾಧ್ಯವಾಗದೆ ಗಂಟೆಗಟ್ಟಲೆ ಪರದಾಡಿದ್ದಾನೆ.

ಮನೆಯ ಗೇಟು, ಕಿಟಕಿ ಮುಂತಾದ ಇಕ್ಕಟ್ಟಿನ ಸಣ್ಣ ಸಣ್ಣ ಸಂಧಿಗಳಲ್ಲಿ ಏನೂ ಅರಿಯದ ಮಕ್ಕಳ ಕೈ ಕಾಲು ಮತ್ತು ಕೆಲವೊಮ್ಮೆತಲೆ ಸಿಲುಕಿ ಹಾಕಿಕೊಳ್ಳುವ ಘಟನೆ ನಡೆಯುತ್ತದೆ. ಆದರೆ ಈತ ಹೋಗಿ ಹೋಗಿ ಆನೆಯ ಹೊಟ್ಟೆಯ ಕೆಳಗೆ ಹೇಗೆ ಸಿಲುಕಿಕೊಂಡಿದ್ದಾನೆ, ಅದೂ ದೇವಸ್ಥಾನದಲ್ಲಿ !!

ನಿತಿನ್ ಎಂಬಾತ ತನ್ನ ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈಗಾಗಲೇ ಇದನ್ನು 2 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಜತೆಗೆ ಅತಿಯಾದ ಭಕ್ತಿ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದುಕೊಂಡಿದ್ದಾರೆ. ಬಹುಶಃ ಅಲ್ಲಿದ್ದ ದೇವಾಲಯದ ಆನೆಯ ಕೆಳಗೆ ತೂರಿದರೆ ಭಗವಂತ ಇನ್ನಷ್ಟು ಕರುಣಾಮಯಿ ಆಗಬಹುದು ಎಂದು ಭಾವಿಸಿದನೋ ಏನೋ ಆ ಆಸಾಮಿ ! ಆದರೆ ಆದದ್ದೇ ಬೇರೆ !!

ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿ ಆನೆಯ ಪ್ರತಿಮೆ ಕೆಳಗೆ ಸಿಲುಕಿಕೊಂಡು, ಹೊರ ಬರಲು ಒದ್ದಾಡುತ್ತಿರುವುದ ಕಾಣಬಹುದು. ಈ ವೇಳೆ ಕೆಲವರು ಸಹಾಯಕ್ಕೆ ಬಂದಿದ್ದು ಈತನನ್ನು ಹೊರತೆಗೆಯಲು ಪ್ರಯತ್ನ ಪಟ್ಟಿದ್ದಾರೆ. ಸಾಕಷ್ಟ ಒದ್ದಾಟದ ನಂತರ ವ್ಯಕ್ತಿ ಹೊರಬಂದಿದ್ದ ಎಂದು ವರದಿಯಾಗಿದೆ.