Home News Mangalore: 500 ನಕಲಿ ಚಿನ್ನದ ಬಳೆ ಅಡವಿಟ್ಟು ಕೋಟಿಗಟ್ಟಲೆ ಸಾಲ ಪಡೆದ ವ್ಯಕ್ತಿ

Mangalore: 500 ನಕಲಿ ಚಿನ್ನದ ಬಳೆ ಅಡವಿಟ್ಟು ಕೋಟಿಗಟ್ಟಲೆ ಸಾಲ ಪಡೆದ ವ್ಯಕ್ತಿ

Photo Credit: Tv9 Kannada

Hindu neighbor gifts plot of land

Hindu neighbour gifts land to Muslim journalist

Mangalore : ನಕಲಿ ಚಿನ್ನ ಅಡವಿಟ್ಟ ವ್ಯಕ್ತಿಯೋರ್ವ ಎರಡು ಕೋಟಿ ರೂ ಅಧಿಕ ಸಾಲ ಪಡೆದು ವಂಚನೆ ಮಾಡಿರುವ ಪ್ರಕರಣವೊಂದರ ಆರೋಪ ಕೇಳಿ ಬಂದಿದೆ. ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘದಲ್ಲಿ 500 ನಕಲಿ ಚಿನ್ನದ ಬಳೆ ಅಡವಿಟ್ಟು ವಂಚನೆ ಮಾಡಲಾಗಿದೆ. ಪುತ್ತೂರು ತಾಲೂಕಿನ ಈಶ್ವರ ಮಂಗಲ ಗ್ರಾಮದ ಅಬೂಬಕ್ಕರ್‌ ಸಿದ್ದಿಕ್‌ ಎಂಬಾತನೇ ಆರೋಪಿ.

ನಕಲಿ ಚಿನ್ನದ ಬಳೆಗಳನ್ನಿಟ್ಟ ಅಬೂಬಕ್ಕರ್‌ ಸಿದ್ದಿಕ್‌ ಸರಿಸುಮಾರು 2,11,89,800 ರೂ. ಸಾಲ ಪಡೆದಿರುವುದಾಗಿ ವರದಿಯಾಗಿದೆ. ಈ ವಂಚನೆ ಕುರಿತು ಅಬೂಬಕ್ಕರ್‌ ಸಿದ್ದಿಕ್‌, ಬ್ಯಾಂಕ್‌ನ ಆಡಳಿತ ಮಂಡಳಿ, ನೌಕರರ ವಿರುದ್ಧ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಾಜ ಸೇವಾ ಸಹಕಾರಿ ಸಂಘ ಹದಿನಾರು ಶಾಖೆಯನ್ನು ಜಿಲ್ಲೆಯಲ್ಲಿ ಹೊಂದಿದೆ. ಈ ಆರೋಪ ಕೇಳಿ ಬಂದಿರುವುದು ಇದೀಗ ಮಂಗಳೂರಿನ ಪಡೀಲ್‌ ಶಾಖೆಯಲ್ಲಿ. ಚಿನ್ನದ ಪರೀಕ್ಷೆ ನಡೆಸುವ ಸರಪ, ಬ್ಯಾಂಕ್‌ನ ಅಧ್ಯಕ್ಷ, ನಿರ್ದೇಶಕರು, ಮ್ಯಾನೇಜರ್‌, ಸಿಬ್ಬಂದಿ ಸಹಕಾರದಿಂದ ಅವ್ಯವಹಾರ ಆಗಿದೆ ಎನ್ನುವ ಆರೋಪವಿದೆ. ಈ ಕುರಿತು 28 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿರುವ ಕುರಿತು ವರದಿಯಾಗಿದೆ. ಈಗಾಗಲೇ ಚಿನ್ನ ಚೆಕ್‌ ಮಾಡುವ ಸರಪ ವಿವೇಕ್‌ ಆಚಾರ್ಯನನ್ನು ಬಂಧನ ಮಾಡಲಾಗಿದೆ. ಆರೋಪಿ ಅಬೂಬಕ್ಕರ್‌ ಸಿದ್ದಿಕ್‌ ತಲೆ ಮರೆಸಿಕೊಂಡಿದ್ದಾನೆ.

2023 ರ ನವೆಂಬರ್‌ ತಿಂಗಳಲ್ಲಿ 500 ನಕಲಿ ಚಿನ್ನದ ಬಳೆ ಅದು ಕೂಡಾ ಒಂದೇ ರೀತಿದ್ದು ಇಟ್ಟು ಸಾಲ ಪಡೆದಿದ್ದು, ಈತ ಮೂರು ತಿಂಗಳಲ್ಲಿ ಸಾಲ ತೀರಿಸಬೇಕಿತ್ತು. ಆದರೆ ಸಾಲ ತೀರಿಸದೇ ಇದ್ದಾಗ ಅನುಮಾನಗೊಂಡು ಬೇರೆಯವರಿಂದ ಮರುತಪಾಸಣೆ ಮಾಡಿದಾಗ ಚಿನ್ನ ನಕಲಿ ಎಂಬುವುದು ತಿಳಿದು ಬಂದಿದೆ ಎಂದು ದೂರು ಕೊಟ್ಟ ಲೋಕನಾಥ್‌ ಡಿ ಅವರು ಮಾತನಾಡಿದ್ದಾರೆ. ಅಬೂಬಕ್ಕರ್‌ ಸಿದ್ದಿಕ್‌ ಬ್ಯಾಂಕ್‌ಗೆ ಮೊದಲಿನಿಂದ ಗ್ರಾಹಕರು ಎಂದು ವರದಿಯಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಯ ಹುಡುಕಾಟವನ್ನು ಪೊಲೀಸರು ನಡೆಸುತ್ತಿದ್ದಾರೆ.