Home News Jharkhand: ಹಿಂದೂಗಳ ಹತ್ಯೆ ಮಾಡಿದ್ದಕ್ಕೆ ಧನ್ಯವಾದ- ಪೋಸ್ಟ್‌ ಹಾಕಿದ್ದ ವ್ಯಕ್ತಿ ಬಂಧನ!

Jharkhand: ಹಿಂದೂಗಳ ಹತ್ಯೆ ಮಾಡಿದ್ದಕ್ಕೆ ಧನ್ಯವಾದ- ಪೋಸ್ಟ್‌ ಹಾಕಿದ್ದ ವ್ಯಕ್ತಿ ಬಂಧನ!

Hindu neighbor gifts plot of land

Hindu neighbour gifts land to Muslim journalist

Jharkhand: ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ ಭಯೋತ್ಪಾದಕರು ಸೇರಿ ಮಾಡಿದ ಹತ್ಯೆಯನ್ನು ಇಡೀ ದೇಶ ಖಂಡನೆ ಮಾಡುತ್ತಿದ್ದರೆ, ಜಾರ್ಖಂಡ್‌ನ ಬೊಕಾರೊ ನಿವಾಸಿ ಮೊಹಮ್ಮದ್‌ ನೌಶಾದ್‌ ಎಂಬಾತ ಪ್ರವಾಸಿಗರ ಹತ್ಯಾಕಾಂಡದ ಕುರಿತು ಸಂತೋಷ ವ್ಯಕ್ತಪಡಿಸಿದ್ದಾನೆ.

ಧನ್ಯವಾದ ಪಾಕಿಸ್ತಾನ, ಲಕ್ಷರ್‌ ಎ ತೈಬಾ. ಅಲ್ಲಾ ಯಾವಾಗಲೂ ನಿಮ್ಮನ್ನು ಸಂತೋಷವಾಗಿಡಲಿ ಎಂದು ಮೊಹಮ್ಮದ್‌ ನೌಶಾದ್‌ ಎಂಬ ದೇಶದ್ರೋಹಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾನೆ. ಅಲ್ಲದೇ, ಇದೇ ರೀತಿ ಆರ್‌ಎಸ್‌ಎಸ್‌, ಬಿಜೆಪಿ, ಬಜರಂಗದಳ ಮತ್ತು ಮಾಧ್ಯಮಗಳನ್ನು ಗುರಿಯಾಗಿಸಿದರೆ ನಾವು ಇನ್ನಷ್ಟು ಸಂತೋಷ ಪಡುತ್ತೇವೆ ಎಂದೂ ಬರೆದುಕೊಂಡಿದ್ದಾನೆ.

ಈ ಪೋಸ್ಟ್‌ಗೆ ಹಲವು ಮಂದಿ ಜಾರ್ಖಂಡ್‌ ಪೊಲೀಸರನ್ನು ಟ್ಯಾಗ್‌ ಮಾಡಿದ್ದು, ನಂತರ ಬೊಕಾರೋ ಪೊಲೀಸರು ಈತನನ್ನು ಪತ್ತೆ ಹಚ್ಚಿ ಬಂಧನ ಮಾಡಿದ್ದಾರೆ.

ಬಿಹಾರದ ಮದರಸಾದಲ್ಲಿ ಶಿಕ್ಷಣ ಪಡೆದಿರುವ ಮೊಹಮ್ಮದ್‌ ನೌಶಾದ್‌ 35 ವರ್ಷ ಪ್ರಾಯ. ಈತನ ಸಹೋದರ ದುಬೈನಲ್ಲಿ ವಾಸ ಮಾಡುತ್ತಿದ್ದಾನೆ. ಈತ ತನ್ನ ತಂದೆ ಜೊತೆ ಬೊಕಾರೊದಲ್ಲಿ ವಾಸ ಮಾಡುತ್ತಿರುವುದಾಗಿ ವರದಿಯಾಗಿದೆ.