Home News Shabarimale: ಶಬರಿಮಲೆಯಲ್ಲಿ ಮಾಲಾಧಾರಿ ಕನ್ನಡಿಗ ಆತ್ಮಹತ್ಯೆ !!

Shabarimale: ಶಬರಿಮಲೆಯಲ್ಲಿ ಮಾಲಾಧಾರಿ ಕನ್ನಡಿಗ ಆತ್ಮಹತ್ಯೆ !!

Hindu neighbor gifts plot of land

Hindu neighbour gifts land to Muslim journalist

Shabarimale: ಶಬರಿಮಲೆ ಯಾತ್ರೆ ಆರಂಭವಾಗಿದ್ದು ಲಕ್ಷಾಂತರ ಭಕ್ತರು ಮಾಲೆ ಧರಿಸಿ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದಾರೆ. ಅಂತೆಯೇ ಕರ್ನಾಟಕದಿಂದಲೂ ಕೂಡ ಲಕ್ಷಾಂತರ ಭಕ್ತರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಆದರೆ ಈಗ ಅಚ್ಚರಿ ಎಂಬಂತೆ ಶಬರಿಮಲೆಯಲ್ಲಿ ಕನ್ನಡಿಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು, ಅಯ್ಯಪ್ಪನ ದರ್ಶನಕ್ಕೆ ಬಂದ ಕನ್ನಡದ ಮಾಲಾಧಾರಿ ಭಕ್ತರೊಬ್ಬರು ಕಳೆದ ದಿನ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಬರಿಮಲೆ ಸನ್ನಿಧಾನದಲ್ಲಿ ಫ್ಲೈಓವರ್ ಮೇಲಿಂದ ಹಾರಿ ಅಯ್ಯಪ್ಪ ಭಕ್ತ ಸಾವನ್ನಪ್ಪಿದ್ದಾರೆ. ಕರ್ನಾಟಕದ ರಾಮನಗರ ಮೂಲದ ಕುಮಾರಸ್ವಾಮಿ ಮೃತ ದುರ್ದೈವಿ. ಕುಮಾರಸ್ವಾಮಿ ಅವರಿಗೆ 40 ವರ್ಷ ವಯಸ್ಸಾಗಿತ್ತು.

ಅಯ್ಯಪ್ಪನ ಭಕ್ತರಾದ ಅವರು ಕಳೆದ ದಿನ ಸಂಜೆ ಸನ್ನಿಧಾನಂನಲ್ಲಿ ಫ್ಲೈಓವರ್‌ನಿಂದ ಮಾಲಿಕಪ್ಪುರಂಗೆ ಜಿಗಿದಿದ್ದಾರೆ. ಬಿದ್ದ ರಭಸಕ್ಕೆ ಕೈ ಮತ್ತು ಕಾಲಿಗೆ ಗಾಯವಾಗಿತ್ತು. ತಕ್ಷಣ ಅವರಿಗೆ ಸನ್ನಿಧಾನಂ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚುವರಿ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಬಿದ್ದ ರಭಸಕ್ಕೆ ತೀವ್ರ ಒಳಪಟ್ಟು ಆಗಿದ್ದರಿಂದ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.